BW News Bureau : ಸಪ್ತಗಿರಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಆಧುನಿಕ ಮೋಟಾರ್ ಬೈಕ್ ಸಿದ್ಧಪಡಿಸಿದ್ದಪಡಿಸಿದ್ದು, ಅದರ ವಿಶೇಷ ಲಕ್ಷಣಗಳು ಆಟೊಮೊಬೈಲ್ ಎಂಜಿನಿಯರಿಂಗ್ ಕ್ಷೇತ್ರದ ಪರಿಣಿತರನ್ನೇ ಬೆರಗುಗೊಳಿಸಿದೆ.
ಅತ್ಯಂತ ಹೆಚ್ಚು ಟಾರ್ಕ್ ಹೊಂದಿರಿವ ಈ ಬೈಕ್, ಹೆಚ್ಚಿನ ವೇಗವನ್ನು ದೃಷ್ಟಿಯಲ್ಲಿರಿಸಿಕೊಂಡು ದಕ್ಷತೆಯಿಂದ ರೂಪಿಸಲಾಗಿದೆ. ಆಟೋಮೊಬೈಲ್ ಕ್ಷೇತ್ರದ ಪರಿಣಿತರಿಂದ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿದೆ.
12 ಅಡಿ ಉದ್ದದ ಈ ವಿನೂತನ ಬೈಕ್ ಯುವಜನರ ಆಕಾಂಕ್ಷೆಗೆ ತಕ್ಕಂತೆ ವಿನ್ಯಾಸಗೊಳಿಸಲಾಗಿದೆ. ವಿದ್ಯಾರ್ಥಿಗಳೇ ಸೇರಿಕೊಂಡು ಬೈಕ್ ಅನ್ನು ಒಂದೇ ತಿಂಗಳಲ್ಲಿ ಅಭಿವೃದ್ಧಿ ಪಡಿಸಿದ್ದಾರೆ.ವಿದ್ಯಾರ್ಥಿಗಳ ಸಾಧನೆಗೆ ಕಾಲೇಜು ಆಡಳಿತ ಮಂಡಳಿ ಶ್ಲಾಘಿಸಿ ಅಗತ್ಯ ನೆರವು ನೀಡುವುದಾಗಿ ಪ್ರಕಟಿಸಿದೆ.
ಬೈಕ್ ನ ವಿಶೇಷತೆಗಳು
* ಎಂಜಿನ್ ಪಲ್ಸರ್ 22o ಡಿಟಿಎಸ್ ಐ
* ಉದ್ದ 12 ಅಡಿ, ತೂಕ 385 ಕೆಜಿ
* ಗ್ರೌಂಡ್ ಕ್ಲಿಯರೆನ್ಸ್ 408 ಎಂಎಂ
* ಇಂಧನ ಬಳಕೆ 18-20 ಕೆಎಂಪಿಎಲ್
* ಟ್ಯಾಂಕ್ ಸಾಮರ್ಥ್ಯ 5 ಲೀಟರ್
ಸಪ್ತಗಿರಿ ಕಾಲೇಜ್ ಆಫ್ ಇಂಜಿನಿಯರಿಂಗ್ ನ ವಿದ್ಯಾರ್ಥಿಗಳು ಉತ್ತಮ ತಾಂತ್ರಿಕ ಕೌಶಲ್ಯಗಳನ್ನು ಪ್ರದರ್ಶಿಸಿರುವುದು ಹಾಗೂ ಅವರ ಶೈಕ್ಷಣಿಕ ಕಲಿಕೆಗೆ ಬದ್ಧತೆ ಶ್ಲಾಘನೀಯ.