ರಾಯಸನ : ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 66ನೇ ವಸಂತಕ್ಕೆ ಕಾಲಿಡುತ್ತಿರುವ ಪ್ರಧಾನಿ ಮೋದಿ ಗುಜರಾತ್ ಗೆ ತೆರಳಿ ತಾಯಿಯಿಂದ ಆಶೀರ್ವಾದ ಪಡೆದರು. ಈ ವೇಳೆ ಮೋದಿ ಅವರಿಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಸೇರಿದಂತೆ ಗಣ್ಯರು ಶುಭಕೋರಿದ್ದಾರೆ.
ಇಲ್ಲಿನ ರಾಯಸನ ಪ್ರದೇಶದಲ್ಲಿನ ಸಹೋದರ ಪಂಕಜ್ ಮೋದಿ ಅವರ ನಿವಾಸಕ್ಕೆ ಭೇಟಿ ನೀಡಿದ ಮೋದಿ ಅವರು, ತಾಯಿ ಹೀರಬಾ ಅವರ ಕಾಲಿಗೆರಗಿ ಆಶೀರ್ವಾದ ಪಡೆದರು. ತಾಯಿಯ ಜತೆ 25 ನಿಮಿಷ ಕಾಲ ಇದ್ದು ಇಲ್ಲಿಂದ ತೆರಳಿದರು.
‘ತಾಯಿಯ ಮಮತೆ, ಆಶೀರ್ವಾದವು ಜೀವನಕ್ಕೆ ಸ್ಫೂರ್ತಿ’ ಎಂದು ಮೋದಿ ಅವರು ಟ್ವೀಟ್ ಮಾಡಿದ್ದಾರೆ.
ಮೋದಿ ಜನ್ಮದಿನದ ಹಿನ್ನೆಲೆಯಲ್ಲಿ ಈ ವಿಶೇಷ ಆ್ಯಪ್ ಅನ್ನು ವಿನ್ಯಾಸಗೊಳಿಸಲಾಗಿದೆ. ಈ ಆ್ಯಪ್ ಮುಖಾಂತರ ಮೋದಿ ಅವರೊಂದಿಗೆ ನೀವು ಇರುವಂತಹ ಫೋಟೋ ಸಿದ್ಧ ಪಡಿಸಬಹುದಾಗಿದೆ. ಆ ಫೋಟೊವನ್ನೇ ಗ್ರೀಟಿಂಗ್ ಕಾರ್ಡ್ ರೀತಿ ಬಳಸಿ ಶುಭಾಶಯ ಕೋರಬಹುದಾಗಿದೆ.