ಕೋಲ್ಕತ್ತಾ : ಹುಣ್ಣಿಮೆಯ ದಿನವಾದ ಇಂದು ಆಗಸದಲ್ಲಿ ಚಂದ್ರ ಸಣ್ಣಗಾತ್ರದಲ್ಲಿ ಗೋಚರಿಸಲಿದ್ದಾನೆ. ಈ ವಿಶಿಷ್ಠ ವಿದ್ಯಮಾನವನ್ನು ಮಿನಿ ಮೂನ್ ಎಂದು ಕರೆಯಲಾಗುತ್ತದೆ.
ಭೂಮಿಗೆ ಚಂದ್ರ ತೀರ ಹತ್ತಿರ ಬಂದಾಗ ಕರೆಯುವ ಸೂಪರ್ ಮೂನ್, ಭೂಮಿಯಿಂದ ತೀರಾ ದೂರ ಹೋದಾಗ ಮಿನಿ ಮೂನ್ ಎಂದು ಕರೆಯಲಾಗುತ್ತದೆ. 15 ವರ್ಷಗಳಿಗೊಮ್ಮೆ ಮಾತ್ರ ಸಂಭವಿಸುವ ಮಿನಿ ಮೂನ್ ಗುರುವಾರ ರಾತ್ರಿ 9.35ರ ಹೊತ್ತಿಗೆ ಕಕ್ಷೆಯ ತುತ್ತ ತುದಿಯಲ್ಲಿ ಅಂದರೆ 406,350 ಕಿ.ಮೀ ದೂರದಲ್ಲಿ ಗೋಚರಿಸಿದ್ದಾನೆ. ಶುಕ್ರವಾರ ಬೆಳಗ್ಗೆ 10.55ಕ್ಕೆ ಜರುಗಲಿರುವ ಈ ವಿದ್ಯಮಾನವನ್ನು ಸೂರ್ಯನ ಪ್ರಖರ ಬೆಳಕು ಇರುವುದರಿಂದ ನೋಡುವುದು ಕಷ್ಟ.
ಸಾಮಾನ್ಯ ದಿನಗಳಲ್ಲಿ ಚಂದ್ರ ಮತ್ತು ಭೂಮಿಯ ನಡುವಣ ಅಂತರ ಸುಮಾರು 3.84 ಲಕ್ಷ ಕಿ.ಮೀ ಇರುತ್ತದೆ. ಆದರೆ, 15 ವರ್ಷಗಳಿಗೊಮ್ಮೆ ಮಾತ್ರ ಚಂದ್ರ ತುಂಬಾ ಕಿರಿದಾಗಿ ಕಾಣಿಸಿಕೊಳ್ಳುತ್ತಾನೆ. ಸೂಪರ್ ಮೂನ್ ಗಿಂತ ಮಿನಿಮೂನ್ ಗಾತ್ರ ಶೇ.14ರಷ್ಟು ಚಿಕ್ಕದಾಗಲಿದೆ. 2030 ಡಿ.10ರಂದು ಮತ್ತೆ ಇಂಥ ದೃಶ್ಯ ಆಕಶಾದಲ್ಲಿ ಕಾಣುವುದಕ್ಕೆ ಸಾಧ್ಯ.