Untitled Document
Sign Up | Login    
Dynamic website and Portals
  
April 4, 2016

ಜಮ್ಮು-ಕಾಶ್ಮೀರದಲ್ಲಿ ಮೊದಲ ಮಹಿಳಾ ಸಿಎಂ ಆಗಿ ಮೆಹಬೂಬಾ ಮುಫ್ತಿ ಪ್ರಮಾಣ ವಚನ ಸ್ವೀಕಾರ

ಶ್ರೀನಗರ : ಜಮ್ಮು-ಕಾಶ್ಮೀರದ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ಪೀಪಲ್ಸ್‌ ಡೆಮೊಕ್ರಾಟಿಕ್‌ ಪಕ್ಷದ ಮುಖ್ಯಸ್ಥೆಯಾಗಿರುವ ಮೆಹಬೂಬ ಮುಫ್ತಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಮುಸ್ಲಿಮರು ಬಹುಸಂಖ್ಯೆಯಲ್ಲಿರುವ ಜಮ್ಮು-ಕಾಶ್ಮೀರದಲ್ಲಿ ಮೆಹಬೂಬ ಮುಫ್ತಿ ಅವರ ಪಿಡಿಪಿ, ಬಿಜೆಪಿ ಜತೆಗೆ ಸೇರಿಕೊಂಡು ಸಮ್ಮಿಶ್ರ ಸರ್ಕಾರವನ್ನು ರಚಿಸಿದೆ.

ಮೆಹಬೂಬ ಅವರು ತಮ್ಮ ತಂದೆ ಮುಫ್ತಿ ಮೊಹಮ್ಮದ ಸಯೀದ್‌ ಅವರ ಉತ್ತರಾಧಿಕಾರಿಯಾಗಿದ್ದಾರೆ. ಮುಫ್ತಿ ಅವರು ಈ ವರ್ಷ ಜನವರಿಯಲ್ಲಿ ಸಾವನ್ನಪ್ಪಿದ್ದರು.

23 ಸಚಿವರನ್ನು ಒಳಗೊಂಡ ಸಂಪುಟವನ್ನು ರೂಪಿಸಿಕೊಂಡಿರುವ ಮೆಹಬೂಬ ಅವರ ಈ ನೂತನ ಸರ್ಕಾರದಲ್ಲಿ ಬಿಜೆಪಿಯ ನಿರ್ಮಲ್‌ ಸಿಂಗ್‌ ಅವರು ಉಪ ಮುಖ್ಯಮಂತ್ರಿಯಾಗಿದ್ದಾರೆ.

ಮೆಹಬೂಬ ಅವರಿಗೆ ತಮ್ಮ ಪಕ್ಷದ ಒಳಗಿನಿಂದಲೇ ಈಗ ಸವಾಲು ಎದುರಾಗಿದೆ. ಹಿರಿಯ ಪಿಡಿಪಿ ನಾಯಕ ಮತ್ತು ಶಾಸಕರಾಗಿರುವ ತಾರಿಕ್‌ ಕರ್ರಾ ಅವರು ಮೆಹಬೂಬ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಬಹಿಷ್ಕರಿಸಿದ್ದಾರೆ. ಹೊಸ ಸಂಪುಟಕ್ಕೆ ಸೇರಿಸಿಕೊಳ್ಳಲಾಗಿರುವ ಕೆಲವು ಸಚಿವರ ಆಯ್ಕೆಯ ಬಗ್ಗೆ ತಾರಿಕ್‌ ಅವರಿಗೆ ಆಕ್ಷೇಪವಿದೆ.

ತಮ್ಮ ತಂದೆ ಮುಫ್ತಿ ಮೊಹಮ್ಮದ ಸಯೀದ್‌ ಅವರ ಸಚಿವ ಸಂಪುಟದಲ್ಲಿದ್ದ ಮೂವರು ಹಿರಿಯ ಸಚಿವರನ್ನು ಮೆಹಬೂಬ ಅವರು ತಮ್ಮ ಸಂಪುಟಕ್ಕೆ ಸೇರಿಸಿಕೊಂಡಿಲ್ಲ.

 

 

Related News

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited