Untitled Document
Sign Up | Login    
Dynamic website and Portals
  
March 28, 2016

ಸೋಮವಾರ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಂದ ಪದ್ಮ ಪ್ರಶಸ್ತಿ ಪ್ರದಾನ

ರಾಷ್ಟ್ರಪತಿ ಪ್ರಣಬ್ ಮುಖರ್ಜಿ (ಫೈಲ್ ಚಿತ್ರ) ರಾಷ್ಟ್ರಪತಿ ಪ್ರಣಬ್ ಮುಖರ್ಜಿ (ಫೈಲ್ ಚಿತ್ರ)

ನವದೆಹಲಿ : ಸೋಮವಾರ ರಾಷ್ಟ್ರಪತಿ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಪದ್ಮ ಪ್ರಶಸ್ತಿ ವಿಜೇತರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ರಾಷ್ಟ್ರಪತಿಯವರು 5 ಪದ್ಮ ವಿಭೂಷಣ, 8 ಪದ್ಮ ಭೂಷಣ್ ಮತ್ತು 43 ಪದ್ಮಶ್ರೀ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ.

ಪದ್ಮ ವಿಭೂಷಣಃ

* ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥಾಪಕ, ಧೀರೂಭಾಯಿ ಹೀರಾಚಂದ್ ಅಂಬಾನಿ (ಮರಣೋತ್ತರ )

* ಜಮ್ಮು ಮತ್ತು ಕಾಶ್ಮೀರದ ಮಾಜಿ ಗವರ್ನರ್ ಜಗಮೋಹನ್

* ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್

* ಭಾರತ-ಅಮೆರಿಕ ಅರ್ಥಶಾಸ್ತ್ರಜ್ಞ ಅವಿನಾಶ್ ಕಮಲಾಕರ್ ದೀಕ್ಷಿತ್

* ಖ್ಯಾತ ನರ್ತಕಿ ಯಾಮಿನಿ ಕೃಷ್ಣಮೂರ್ತಿ

ಪದ್ಮ ಭೂಷಣ್

* ನಟ ಅನುಪಮ್ ಖೇರ್

* ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್

* ಮಾಜಿ ಸಿಎಜಿ ವಿನೋದ್ ರಾಯ್

* ಪಲ್ಲೊಂಜಿ ಶಪೂರ್ಜಿ ಮಿಸ್ತ್ರಿ

* ಹಫೀಜ್ ಸಾರಾ ಗುತ್ತಿಗೆದಾರ

* ಬರ್ಜೀಂದರ್ ಸಿಂಗ್ ಹಮ್ದರ್ದ್

* ಅಲ್ಲಾ ವೆಂಕಟ ರಾಮರಾವ್

* ದುವ್ವುರ್ ನಾಗೇಶ್ವರ ರೆಡ್ಡಿ

ಪದ್ಮಶ್ರೀ

ಒಟ್ಟು 43 ಪ್ರಶಸಿ ವಿಜೇತರಲ್ಲಿ ಇಂದು ಪ್ರಶಸ್ತಿ ಸ್ವೀಕರಿಸವವರ ಪಟ್ಟಿ ಇಂತಿದೆ.

* ನಟ ಅಜಯ್ ದೇವಗನ್

* ನಿರ್ದೇಶಕ ಮಧುರ್ ಆರ್ ಭಂಡಾರ್ಕರ್

* ವಿಜ್ಞಾನಿ ಡಾ ಮೈಲ್ ಸ್ವಾಮಿ ಅಣ್ಣಾದೊರೈ

* ಕ್ರೀಡಾಪಟು ದೀಪಿಕಾ ಕುಮಾರಿ

* ಪ್ರಸಿದ್ಧ ಷೆಫ್ ಮೊಹಮ್ಮದ್ ಇಮ್ತಿಯಾಜ್ ಖುರೇಶಿ

ಇತರ ಪರ್ಶಸಿ ವಿಜೇತರಾದ ಸೂಪರ್ ಸ್ಟಾರ್ ರಜನೀಕಾಂತ್, ಪ್ರಿಯಾಂಕ ಚೋಪ್ರಾ, ಟೆನಿಸ್ ತಾರೆ ಸಾನಿಯಾ ಮಿರ್ಜಾ ಇವರುಗಳಿಗೆ ಮುಂದಿನ ತಿಂಗಳು ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited