Untitled Document
Sign Up | Login    
Dynamic website and Portals
  
January 13, 2016

ಪಠಾಣ್ ಕೋಟ್ ದಾಳಿಯ ರೂವಾರಿ ಮಸೂದ್ ಅಜರ್ ನನ್ನು ವಶಕ್ಕೆ ತೆಗೆದುಕೊಂಡ ಪಾಕಿಸ್ತಾನ

ಇಸ್ಲಾಮಾಬಾದ್ : ಪಂಜಾಬ್ ನ ಗುರುದಾಸ್ ಪುರ್ ಜಿಲ್ಲೆಯ ಪಠಾಣ್ ಕೋಟ್ ವಾಯುನೆಲೆ ಮೇಲಿನ ಉಗ್ರದಾಳಿಗೆ ಸಂಬಂಧಿಸಿದಂತೆ ಪಾಕಿಸ್ತಾನ ಜೈಷ್ ಎ ಮೊಹಮ್ಮದ್ ಉಗ್ರಗಾಮಿ ಸಂಘಟನೆಯ ಮುಖಂಡ ಮತ್ತು ಈ ದಾಳಿಯ ರೂವಾರಿ ಎನ್ನಲಾದ ಮೌಲಾನಾ ಮಸೂದ್ ಅಜರ್ ನನ್ನು ಪಾಕಿಸ್ತಾನ ತನ್ನ ವಶಕ್ಕೆ ತೆಗೆದುಕೊಂಡಿದೆ ಎಂದು ಪಾಕಿಸ್ತಾನ ಮಾಧ್ಯಮ ವರದಿ ಮಾಡಿದೆ.

ಮಸೂದ್ ಅಜರ್ ನ ಸಹೋದರ ಮತ್ತು ಇತರ ಸಹಚರರನ್ನೂ ಕೂಡ ವಡಕ್ಕೆ ತೆಗೆದುಕೊೞಲಾಗಿದೆ ಎಂದು ಮಾಧ್ಯಮ ವರದಿ ತಿಳಿಸಿದೆ.

ಜೈಷ್ ಎ ಮೊಹಮ್ಮದ್ ಕಚೇರಿಗೆ ಬೀಗಮುದ್ರೆ ಹಾಕಿರುವುದಾಗಿ ಕೂಡ ವರದಿಯಾಗಿದೆ. ಅನೇಕ ವ್ಯಕ್ತಿಗಳನ್ನು ವಶಕ್ಕೆ ತೆಗೆದುಕೊಳ್ಲಲಾಗಿದೆ ಎಂದು ಪಿಎಂಓ ಕಚೇರಿ ತಿಳಿಸಿದೆ. ಆದರೆ ಮಸೂದ್ ಅಜರ್ ನನ್ನು ವಶಕ್ಕೆ ತೆಗೆದುಕೊಂಡ ಕುರಿತು ಅಧಿಕೃತ ಹೇಳಿಕೆ ನೀಡಿಲ್ಲ.

ಆದರೆ ಹಲವು ಜೈಷ್ ಎ ಮೊಹಮ್ಮದ್ ಕಚೇರಿಗೆ ಬೀಗಮುದ್ರೆ ಹಾಕಿದ ನಂತರ ಉಗ್ರ ಮಸೂದ್ ನನ್ನು ರಕ್ಷಣಾತ್ಮಕ ವಶಕ್ಕೆ ತೆಗೆದುಕೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ ಎನ್ನಲಾಗಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited