ನವದೆಹಲಿ : ಕಳೆದ ಶನಿವಾರ ಉಗ್ರರು ದಾಳಿ ನಡೆಸಿದ ಪಠಾಣ್ ಕೋಟ್ ವಾಯುನೆಲೆಗೆ ಪ್ರಧಾನಿ ನರೇಂದ್ರ ಮೋದಿ ಇಂದು ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸುವ ಸಾಧ್ಯತೆ ಇದೆ.
ಪ್ರಧಾನಿ ಮೋದಿ ಅವರು ಬೆಳಗ್ಗೆನೇ ಪಠಾಣ್ ಕೋಟ್ ವಾಯುನೆಲೆಗೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಭದ್ರತಾ ಪಡೆಗಳು ಮೂರು ದಿನಗಳ ಕಾರ್ಯಾಚರಣೆ ನಂತರ ವಿಸ್ತಾರವಾದ ಪಠಾಣ್ ಕೋಟ್ ವಾಯುನೆಲೆಯನ್ನು ಶುಕ್ರವಾರ ಸಂಪೂರ್ಣವಾಗಿ ಉಗ್ರ ರಹಿತ ಪ್ರದೇಶ ಎಂದು ಘೋಷಿಸಿದ್ದರು.
ಯಾವುದೇ ಉಗ್ರನೂ ಅಡಗಿಕೊಂಡಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಲಲು ಆರ್ಮಿ , ರಾಷ್ಟ್ರೀಯ ಭದ್ರತಾ ಗಾರ್ಡ್ ( NSG ) ಮತ್ತು ಭಾರತೀಯ ವಾಯುಪಡೆ ಮತ್ತು ಐಎಎಫ್ ನ ಗರುಡ ಕಮಾಂಡೊಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿದವು.