ನವದೆಹಲಿ : ಬಹಳ ಕುತೂಹಲ ಕೆರಳಿಸಿರುವ ಬಿಹಾರ್ ಚುನಾವಣೆಯ ಮತ ಎಣಿಕೆಯ ದಿನವಾದ ಭಾನುವಾರ, ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾನಿ ಅವರಿಗೆ ಟ್ವಿಟ್ಟರ್ ನಲ್ಲಿ ಹುಟ್ಟುಹಬ್ಬದ ಶುಭಾಷಯ ಕೋರುವ ಮೂಲಕ ದಿನ ಪ್ರಾರಂಭಿಸಿದರು. ನಂತರ ಎಲ್ ಕೆ ಅಡ್ವಾನಿ ಅವರ ನಿವಾಸಕ್ಕೆ ತೆರಳಿ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ ಕೆ ಅಡ್ವಾನಿ ಅವರಿಗೆ ಶುಭಾಷಯ ಕೋರಿದರು.
ವೈಯಕ್ತಿಕವಾಗಿ ನಾನು ಅಡ್ವಾನಿಜೀ ಅವರಿಂದ ಬಹಳಷ್ಟು ಕಲಿತಿದ್ದೇನೆ. ನಮ್ಮಂತಹ ಕಾರ್ಯಕರ್ತರಿಗೆ ಅವರು ಉತ್ತಮ ಶಿಕ್ಷಕರು. ನಿಸ್ವಾರ್ಥ ಸೇವೆಗೆ ಅವರೊಂದು ಉತ್ತಮ ಉದಾಹರಣೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.