Untitled Document
Sign Up | Login    
Dynamic website and Portals
  
October 28, 2015

ವಿಶ್ವ ಬ್ಯಾಂಕ್‌ ನ ಸುಲಭದಲ್ಲಿ ವ್ಯಾಪಾರೋದ್ಯಮ ಕೈಗೊಳ್ಳಬಹುದಾದ ಪಟ್ಟಿಯಲ್ಲಿ ಮೇಲೆಕ್ಕೇರಿದ ಭಾರತ

ನವದೆಹಲಿ : ಭಾರತವನ್ನು ವಿಶ್ವದ ಅತ್ಯುನ್ನತ ವಿದೇಶೀ ಹೂಡಿಕೆಯ ತಾಣವನ್ನಾಗಿ ಪರಿವರ್ತಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಗೆ ಇದೀಗ ಧನಾತ್ಮಕ ಆರಂಭ ಸಿಕ್ಕಿದೆ.

ವಿಶ್ವ ಬ್ಯಾಂಕ್‌ ಸಿದ್ಧಪಡಿಸಿರುವ, ವಿಶ್ವದಲ್ಲಿ ಸುಲಭದಲ್ಲಿ ವ್ಯಾಪಾರೋದ್ಯವನ್ನು ಕೈಗೊಳ್ಳಬಹುದಾದ 189 ದೇಶಗಳ ಪಟ್ಟಿಯಲ್ಲಿ ಭಾರತವು 12 ಸ್ಥಾನಗಳ ನೆಗೆತವನ್ನು ಸಾಧಿಸಿದ್ದು ಆ ಪ್ರಕಾರ ಅದೀಗ 130ನೇ ಸ್ಥಾನಕ್ಕೇರಿದೆ.

ವಿಶ್ವದಲ್ಲಿ ಸುಲಲಿತವಾಗಿ ಮತ್ತು ಸುಲಭವಾಗಿ ವ್ಯಾಪಾರೋದ್ಯಮವನ್ನು ಕೈಗೊಳ್ಳಬಹುದಾದ189 ದೇಶಗಳ ವಿಶ್ವ ಬ್ಯಾಂಕ್‌ ಪಟ್ಟಿಯಲ್ಲಿ ಭಾರತದ ಸ್ಥಾನ ಈ ವರೆಗೆ 142ರಲ್ಲಿತ್ತು. ಆ ಬಳಿಕ ಹೊಸ ಲೆಕ್ಕಾಚಾರದ ಪ್ರಕಾರ ಭಾರತದ ಸ್ಥಾನ 134ಕ್ಕೆ ಪರಿಷ್ಕರಿಸಲ್ಪಟ್ಟಿತ್ತು. ಇದೀಗ ಅಲ್ಲಿಂದ ಅದು ನೇರವಾಗಿ 130ಕ್ಕೆ ನೆಗೆದಿದೆ.

ವಿಶ್ವ ಬ್ಯಾಂಕ್‌ ವರ್ಷಂಪ್ರತಿ ಸಿದ್ಧಪಡಿಸುವ ಸುಲಲಿತ ವ್ಯಾಪಾರೋದ್ಯಮದ ದೇಶಗಳ ಪಟ್ಟಿಯಲ್ಲಿ ಮೊದಲ 50 ಸ್ಥಾನದೊಳಗೆ ಭಾರತವು ವಿರಾಜಮಾನವಾಗಬೇಕೆಂದು ಪ್ರಧಾನಿ ಮೋದಿ ಬಯಸಿದ್ದರು. ಆ ನಿಟ್ಟಿನಲ್ಲಿ ಭಾರತದ ಮುನ್ನಡೆ ನಿಶ್ಚಿತ ಗುರಿಯತ್ತ ಸಾಗುತ್ತಿರುವುದು ಈಗ ನಿಚ್ಚಳವಾಗಿದೆ.

ವಿಶ್ವ ಬ್ಯಾಂಕಿನ ಈ ಬಾರಿಯ ಹೊಸ ಪಟ್ಟಿಯಲ್ಲಿ ಚೀನ 84ನೇ ಸ್ಥಾನದಲ್ಲಿದೆ. ಎಂದರೆ ಅದು ಆರು ಸ್ಥಾನಗಳ ನೆಗೆತವನ್ನು ಸಾಧಿಸಿದೆ. ವಿಶ್ವ ಬ್ಯಾಂಕಿನ ಈ ಪಟ್ಟಿಯಲ್ಲಿ ಮೊದಲ ಮೂರು ಸ್ಥಾನಗಳಲ್ಲಿ ಸ್ಥಿತವಾಗಿರುವ ದೇಶಗಳೆಂದರೆ ಅನುಕ್ರಮವಾಗಿ ಸಿಂಗಾಪುರ, ನ್ಯೂಝೀಲಂಡ್‌ ಮತ್ತು ಡೆನ್ಮಾರ್ಕ್‌. ಪಟ್ಟಿಯ ಕೆಳ ಭಾಗದಲ್ಲಿ ಕೊನೇ ಮೂರು ಸ್ಥಾನಗಳಲ್ಲಿರುವ ದೇಶಗಳೆಂದರೆ ದಕ್ಷಿಣ ಸುಡಾನ್‌, ಲಿಬಿಯಾ ಮತ್ತು ಎರಿಟ್ರಿಯಾ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited