Untitled Document
Sign Up | Login    
Dynamic website and Portals
  
August 18, 2015

ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪತ್ನಿ ಸುವ್ರಾ ಮುಖರ್ಜಿ ನಿಧನ

ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪತ್ನಿ ಸುವ್ರಾ ಮುಖರ್ಜಿ ನಿಧನ

ನವದೆಹಲಿ : ಮಂಗಳವಾರ ಬೆಳಗ್ಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಪತ್ನಿ ಸುವ್ರಾ ಮುಖರ್ಜಿ ನಿಧನರಾಗಿದ್ದಾರೆ. ಕೆಲವು ಸಮಯಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು.

ಹೃದಯ ಸಂಬಂಧಿ ಮತ್ತು ಉಸಿರಾಟದ ಸಮಸ್ಯೆಗಳಿಂದ ಬಳಲುತ್ತಿದ್ದ ಸುವ್ರಾ ಮುಖರ್ಜಿ ಅವರನ್ನು ತುರ್ತು ಚಿಕಿತ್ಸಾ ಘಟಕದಲ್ಲಿ ಇಡಲಾಗಿತ್ತು.

ತುಂಬಾ ದುಃಖದಿಂದ ಈ ಮಾಹಿತಿ ನೀಡುತ್ತಿದ್ದೇವೆ, ದೇಶದ ಪ್ರಥಮ ಮಹಿಳೆ ಶ್ರೀಮತಿ ಸುವ್ರಾ ಮುಖರ್ಜಿ ಅವರು ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಅವರು ಬೆಳಗ್ಗೆ 10:51 ಕ್ಕೆ ದೇಹತ್ಯಾಗ ಮಾಡಿದ್ದಾರೆ ಎಂದು ರಾಷ್ಟ್ರಪತಿ ಭವನದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಸೆ. 17, 1940 ರಂದು ಈಗಿನ ಬಾಂಗ್ಲಾದೇಶದಲ್ಲಿ ಜನಿಸಿದ ಸುವ್ರಾ ಮುಖರ್ಜಿ ಅವರು, ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ಜು.13 1957 ರಲ್ಲಿ ಮದುವೆಯಾಗಿದ್ದರು.

ಪದವೀಧರೆಯಾಗಿದ್ದ ಅವರು ರಾಷ್ಟ್ರಕವಿ ರವೀಂದ್ರನಾಥ ಠಾಗೂರ್ ಅವರ ಕಟ್ಟಾ ಅಭಿಮಾನಿಯಾಗಿದ್ದರು. ರವೀಂದ್ರ ಸಂಗಿತದ ಗಾಯಕಿಯಾಗಿದ್ದ ಅವರು ಭಾರತದಲ್ಲಿ ಮಾತ್ರವಲ್ಲದೇ ಯುರೋಪ್, ಏಷ್ಯಾ, ಆಫ್ರಿಕಾಗಳಲ್ಲಿ ನೃತ್ಯ ಮತ್ತು ನಾಟಕ ಪ್ರದರ್ಶನ ನೀಡಿದ್ದರು.

ನೃತ್ಯ ಮತ್ತು ನಾಟಕಗಳ ಮೂಲಕ ರವೀಂದ್ರನಾಥ ಠಾಗೂರ್ ಅವರ ತತ್ವಶಾಸ್ತ್ರದ ಪ್ರಚಾರ ನೆಡೆಸುವ ಉದ್ದೇಶದಿಂದ ಗೀತಾಂಜಲಿ ಎನ್ನುವ ತಂಡವನ್ನು ಸ್ಥಾಪಿಸಿದ್ದರು.

ಸುವ್ರಾ ಮುಖರ್ಜಿ ಅವರು ವರ್ಣಚಿತ್ರಕಾರರೂ ಆಗಿದ್ದರು. ಅವರು ಹಲವು ಕಡೆ ಚಿತ್ರಪ್ರದರ್ಶನದಲ್ಲಿ ಭಾಗವಿಹಿಸಿದ್ದರು.

ಅವರು ಚೋಖೇರ್ ಅಲೋಯ್ ಮತ್ತು ಚೆನಾ ಅಚೆನೈ ಚಿನ್ ಎನ್ನುವ ಎರದು ಪುಸ್ತಕಗಳನ್ನೂ ಸಹ ಬರೆದಿದ್ದರು.

ಅವರಿಗೆ ಅಭಿಜಿತ್ ಮುಖರ್ಜಿ, ಇಂದ್ರಜಿತ್ ಮುಖರ್ಜಿ ಮತ್ತು ಶರ್ಮಿಸ್ತಾ ಮುಖರ್ಜಿ ಎನ್ನುವ ಮೂವರು ಮಕ್ಕಳಿದ್ದರು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited