ನವದೆಹಲಿ : ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಮತ್ತು ಕಾರ್ಯದರ್ಶಿ ಒಮಿತಾ ಪಾಲ್ ವಿರುದ್ಧ ಮಾಜಿ ಐಪಿಎಲ್ ಅಧ್ಯಕ್ಷ ಲಲಿತ್ ಮೋದಿ ಟ್ವಿಟ್ ಮಾಡಿರುವ ಹಿನ್ನಲೆಯಲ್ಲಿ ರಾಷ್ಟ್ರಪತಿ ಭವನ ಮಾನನಷ್ಟ ಮೊಕದ್ದಮೆ ದಾಖಲಿಸಿದೆ.
ಲಲಿತ್ ಮೋದಿ, ಈಗ ಕೆಲವು ದಿನಗಳಿಂದ ಬಿಜೆಪಿ ಮತ್ತು ಕಾಂಗ್ರೆಸ್ ರಾಜಕಾರಣಿಗಳ ವಿರುದ್ಧ ಟ್ವಿಟರ್ನಲ್ಲಿ ದಿನಕ್ಕೊಂದೊಂದು ವಿಷಯವನ್ನು ಬಹಿರಂಗ ಪಡಿಸುತ್ತಿದ್ದಾರೆ. ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ವಿರುದ್ಧ ಲಲಿತ್ ಮೋದಿ ಜೂನ್ 23 ಮತ್ತು 25 ರಂದು ಟ್ವಿಟರ್ನಲ್ಲಿ, ಪ್ರಣಬ್ ಮುಖರ್ಜಿ ಹಣಕಾಸು ಸಚಿವರಾಗಿದ್ದಾಗ ಲಲಿತ್ ಮೋದಿ ಅವರನ್ನು ಭೇಟಿ ಮಾಡಿರುವ ಫೋಟೋವನ್ನು ಪ್ರಕಟಿಸಿದ್ದರು. ಜತೆಗೆ ಜಾರಿ ನಿರ್ದೇಶನಾಲಯ ತನ್ನ ವಿರುದ್ಧ ತನಿಖೆ ಪ್ರಾರಂಭಿಸಲು ಪ್ರಣಬ್ ಮುಖರ್ಜಿ ಅವರೇ ಕಾರಣ ಎಂದು ಹೇಳಿದ್ದರು.
ಈ ವಿಷಯವಾಗಿ, ರಾಷ್ಟ್ರಪತಿ ಭವನವು ಜೂನ್ 23 ಮತ್ತು 25ರಂದು ಪ್ರಕಟವಾದ ಟ್ವಿಟರ್ ಪೋಸ್ಟ್ಗಳ ಸ್ಕ್ರೀನ್ ಶಾಟ್ ಮತ್ತು 80 ಪುಟಗಳ ದೂರನ್ನು ದೆಹಲಿ ಪೊಲೀಸರಿಗೆ ಸಲ್ಲಿಸಿದೆ.