ನವದೆಹಲಿ : ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಜಾಗತಿಕವಾಗಿ ಕೋಟ್ಯಂತರ ಜನರು ಭಾಗವಹಿಸಿದ್ದರೆ, ಮತ್ತೊಂದೆಡೆ ದೆಹಲಿಯ ರಾಜಪಥದಲ್ಲಿ ನಡೆದ ಬೃಹತ್ ಯೋಗಾಭ್ಯಾಸ ಗಿನ್ನೆಸ್ ಪುಸ್ತಕದಲ್ಲಿ ದಾಖಲಾಗುತ್ತದೆ ಎಂಬ ಆಶಾಭಾವ ಯೋಗ ಸಂಘಟಕರದ್ದಾಗಿದೆ.
ಒಂದೇ ಸ್ಥಳದಲ್ಲಿ ಇಷ್ಟೊಂದು ಜನ ಯೋಗಾಭ್ಯಾಸ ಮಾಡುತ್ತಿರುವುದು ಇದೇ ಮೊದಲಾಗಿರುವುದರಿಂದ ಇದು ಗಿನ್ನೆಸ್ ದಾಖಲೆ ಪುಟದಲ್ಲಿ ಸ್ಥಾನ ಪಡೆಯುವ ನಿರೀಕ್ಷೆ ಹೊಂದಿರುವುದರಿಂದ ಗಿನ್ನೆಸ್ ಸಂಸ್ಥೆಯ ಅಧಿಕಾರಿಗಳೂ ಕಾರ್ಯಕ್ರಮಕ್ಕೆ ಹಾಜರಾಗಿದ್ದಾರೆ.
2005ರಲ್ಲಿ ಗ್ವಾಲಿಯರ್ ನಲ್ಲಿ 29,973 ವಿದ್ಯಾರ್ಥಿಗಳು ನಡೆಸಿದ ಯೋಗಾಭ್ಯಾಸ ಸದ್ಯ ಗಿನ್ನೆಸ್ ದಾಖಲೆ ಬರೆದ ಹೆಸರಿನಲ್ಲಿದೆ. ಇದೀಗ ಭಾನುವಾರ ದಿಲ್ಲಿ ರಾಜಪಥದಲ್ಲಿ 35 ಸಾವಿರ ಜನ ಏಕಕಾಲಕ್ಕೆ ನಡೆಸಿದ ಬೃಹತ್ ಯೋಗ ಪ್ರದರ್ಶನ ವಿಶ್ವ ದಾಖಲೆ ಬರೆಯುವತ್ತ ದಾಪುಗಾಲಿಕ್ಕಿದೆ.
ವಿಶ್ವಕ್ಕೆ ಭಾರತದ ಅವಿಸ್ಮರಣೀಯ ಕೊಡುಗೆಯಾಗಿರುವ ಯೋಗವನ್ನು ಜಗತ್ತಿನಾದ್ಯಂತ 200 ಕೋಟಿಗೂ ಹೆಚ್ಚು ಜನ ಒಂದೇ ದಿನ ಅಭ್ಯಾಸ ಮಾಡುವ ಮೂಲಕ ಹೊಸ ದಾಖಲೆಯೊಂದನ್ನು ಬರೆದಂತಾಗಿದೆ.