Untitled Document
Sign Up | Login    
Dynamic website and Portals
  
June 16, 2015

ರಾಜೀನಾಮೆಗೆ ಮುಂದಾಗಿದ್ದ ಸುಷ್ಮಾ ಸ್ವರಾಜ್

ಸಚಿವೆ ಬೆಂಬಲಕ್ಕೆ ನಿಲ್ಲುವಂತೆ ಆರ್.ಎಸ್.ಎಸ್ ಸೂಚನೆ

ಸುಷ್ಮಾ ಸ್ವರಾಜ್ ಸುಷ್ಮಾ ಸ್ವರಾಜ್

ನವದೆಹಲಿ : ಲಲಿತ್ ಮೋದಿಗೆ ವಿದೇಶದಲ್ಲಿ ವಾಸಿಸಲು ನೆರವು ನೀಡಿದ್ದಾರೆ ಎಂಬ ಆರೋಪದಲ್ಲಿ ವಿವಾದಕ್ಕೀಡಾಗಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಒಂದು ವಾರದ ಹಿಂದೆಯೇ ರಾಜೀನಾಮೆ ನೀಡಲು ಮುಂದಾಗಿದ್ದರು. ಆದರೆ ಆರ್.ಎಸ್.ಎಸ್ ಮಧ್ಯಪ್ರವೇಶಿಸಿ ರಾಜೀನಾಮೆ ನೀಡುವುದು ಬೇಡ ಎಂದು ಸುಷ್ಮಾಗೆ ಸೂಚಿಸಿತ್ತು ಎಂದು ಬಿಜೆಪಿಯ ಉನ್ನತ ಮೂಲಗಳು ತಿಳಿಸಿವೆ.

ಮೂಲಗಳ ಪ್ರಕಾರ, ಲಲಿತ್ ಮೋದಿ ಪ್ರಯಾಣದ ವೀಸಾ ದಾಖಲೆಗೆ ಸಂಬಂಧಿಸಿದ ಪ್ರಕರಣದ ಕುರಿತಂತೆ ಪ್ರತಿಕ್ರಿಯೆ ನೀಡುವಂತೆ ಬ್ರಿಟನ್ ಸಂಸದ ಕಳೆದ ವಾರ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಗೆ ಇ ಮೇಲ್ ಕಳುಹಿಸಿದ್ದರು.

ಇ ಮೇಲ್ ಬಂದ ಕೂಡಲೇ ಸುಷ್ಮಾ ಸ್ವರಾಜ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಲಲಿತ್ ಮೋದಿ ವೀಸಾ ಕುರಿತಂತೆ ವಿಸ್ತ್ರತವಾಗಿ ಮಾಹಿತಿ ನೀಡಿದ್ದರು ಎನ್ನಲಾಗಿದೆ.

ಈ ಪ್ರಕರಣ ವಿವಾದ ಹುಟ್ಟುಹಾಕಲಿದ್ದು, ಮುಂದೇನು ಮಾಡಬೇಕೆಂಬ ಕುರಿತಾಗಿ ಬಿಜೆಪಿ ಹಾಗೂ ಆರ್.ಎಸ್.ಎಸ್ ಮುಖಂಡರು ಪ್ರಧಾನಿ ಮೋದಿಯನ್ನು ಭೇಟಿಯಾಗಿ ಚರ್ಚೆ ನಡೆಸಿದ್ದರು.

ಈ ವಿಷಯದಲ್ಲಿ ಎನ್.ಡಿ.ಎ ಸರ್ಕಾರ ಮುಜುಗರ ಅನುಭವಿಸುವುದು ಬೇಡವೆಂದು ತಾನು ಸಚಿವೆ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದು ಸಭೆಯಲ್ಲಿ ಸುಷ್ಮಾ ಸ್ವರಾಜ್ ಸ್ಪಷ್ಟಪಡಿಸಿದ್ದರು. ಆದರೆ ಆರ್.ಎಸ್.ಎಸ್ ರಾಜೀನಾಮೆ ಕೊಡೋದು ಬೇಡ ಎಂದು ತಡೆದಿದ್ದು, ಸುಷ್ಮಾ ಯಾವುದೇ ತಪ್ಪು ಮಾಡಿಲ್ಲ ಎಂದು ಬೆಂಬಲ ವ್ಯಕ್ತಪಡಿಸಿತ್ತು ಎಂದು ಮೂಲಗಳು ತಿಳಿಸಿವೆ. ಅಲ್ಲದೇ ಸುಷ್ಮಾ ಸ್ವರಾಜ್ ರಾಜೀನಾಮೆ ಪಡೆಯದಂತೆ ಪ್ರಧಾನಿ ಮೋದಿಗೂ ಆರ್.ಎಸ್.ಎಸ್ ಸೂಚನೆ ನೀಡಿತ್ತು ಎಂದು ಹೇಳಲಾಗಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited