Untitled Document
Sign Up | Login    
Dynamic website and Portals
  
May 19, 2015

ಏಷ್ಯಾ ಒಕ್ಕೂಟ ಜಾಗತಿಕ ಹೊಸರೂಪಕ್ಕೆ ಶ್ರಮಿಸಬೇಕು: ಪ್ರಧಾನಿ ಮೋದಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರಧಾನ ಮಂತ್ರಿ ನರೇಂದ್ರ ಮೋದಿ

ಸಿಯೋಲ್ : ವಿಶ್ವ ಸಂಸ್ಥೆಯೂ ಒಳಗೊಂಡಂತೆ ಏಷ್ಯಾ ಖಂಡದ ರಾಷ್ಟ್ರಗಳು ವಿಶ್ವದ ವಿವಿಧ ಸಂಸ್ಥೆಗಳ ಸುಧಾರಣೆಗೆ ಹಾಗೂ ಜಾಗತಿಕ ಹೊಸರೂಪಕ್ಕೆ ಶ್ರಮಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ಏಷ್ಯಾ, ಒಂದು ಪ್ರಮುಖ ಶಕ್ತಿಯಾಗಿ ಹೊರಹೊಮ್ಮಬೇಕಾದರೆ, ಕೇವಲ ಪ್ರಾದೇಶಿಕ ತುಣುಕುಗಳಾಗಿ ಕೆಲಸ ಮಾಡಿದರಷ್ಟೇ ಸಾಧ್ಯವಿಲ್ಲ ಎಂದು ದಕ್ಷಿಣ ಕೊರಿಯಾದ ಸಿಯೋಲ್ ನಲ್ಲಿ ಆರನೇ ಏಷ್ಯಾ ನಾಯಕತ್ವ ಸಮಾವೇಶದಲ್ಲಿ ಮೋದಿ ಅಭಿಪ್ರಾಯಪಟ್ಟಿದ್ದಾರೆ.

ಈ ಖಂಡದಲ್ಲಿರುವ ವಿರೋಧಗಳು ನಮ್ಮನ್ನು ಹಿಂದಕ್ಕೆ ನೂಕದೆ ಒಂದು ಸಾಮಾನ್ಯ ಗುರಿಗಾಗಿ ಎಲ್ಲ ರಾಷ್ಟ್ರಗಳು ಒಗ್ಗೂಡಿ ಶ್ರಮಿಸಬೇಕು ಎಂದು ಕರೆ ಕೊಟ್ಟರು.

ಭಾರತದ ಅಭಿವೃದ್ಧಿ ಏಷ್ಯಾದ ಗೆಲುವಿನ ಕಥೆಯಾಗಲಿದ್ದು ಏಷ್ಯಾ ಕನಸನ್ನು ಸಾಕಾರಗೊಳಿಸಲು ಇದು ಸಹಕಾರಿಯಾಗಲಿದೆ ಎಂದಿದ್ದಾರೆ.

ನನ್ನ ಕನಸೇನೆಂದರೆ ಸಂಪೂರ್ಣ ಏಷ್ಯಾ ಒಟ್ಟಿಗೆ ಮೇಲೇಳಬೇಕು, ನನ್ನ ಭಾರತದ ಮುಂದಿನ ಕನಸು ನಮ್ಮ ನೆರೆ ಹೊರೆಯವರ ಕನಸು ಕೂಡ ಆಗಿರುತ್ತದೆ. ನಮ್ಮ ಅಭಿವೃದ್ಧಿ ನೆರೆಹೊರೆಯ ರಾಷ್ಟ್ರಗಳನ್ನು ಒಳಗೊಂಡಿರುತ್ತದೆ ಎಂದು ಹೇಳಿದರು.

ಹೆಚ್ಚು ಅಭಿವೃದ್ಧಿಯಾಗಿರುವ ಏಷ್ಯಾ ದೇಶಗಳು ಇತರ ರಾಷ್ಟ್ರಗಳೊಂದಿಗೆ ತಮ್ಮ ಸಂಪನ್ಮೂಲಗಳನ್ನು ಹಂಚಿಕೊಳ್ಳಬೇಕು ಎಂದು ಮೋದಿ ಕರೆ ಕೊಟ್ಟಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited