Untitled Document
Sign Up | Login    
Dynamic website and Portals
  
May 3, 2015

ಶತಮಾನದ ಬಾಕ್ಸಿಂಗ್‌ ಪ್ರಶಸ್ತಿ ಗೆದ್ದ ಫ್ಲಾಯ್ಡ ಮೇವೆದರ್‌

ಶತಮಾನದ ಬಾಕ್ಸಿಂಗ್‌ ಪ್ರಶಸ್ತಿ ಗೆದ್ದ ಫ್ಲಾಯ್ಡ ಮೇವೆದರ್‌

ಲಾಸ್‌ವೆಗಾಸ್‌ : ವಿಶ್ವಾದ್ಯಂತ ಕ್ರೀಡಾ ಪ್ರೇಮಿಗಳಲ್ಲಿ ಸಂಚಲನ ಮೂಡಿಸಿದ್ದ ಶತಮಾನದ ಬಾಕ್ಸಿಂಗ್‌ ಪ್ರಶಸ್ತಿಯನ್ನು ಅಮೇರಿಕಾಫ್ಲಾಯ್ಡ ಮೇವೆದರ್‌ ಅವರು ಗೆಲ್ಲುವ ಮೂಲಕ ಬರೋಬ್ಬರಿ 900 ಕೋಟಿ ರೂಪಾಯಿ ಬಹುಮಾನ ತಮ್ಮದಾಗಿಸಿಕೊಂಡಿದ್ದಾರೆ.

ಲಾಸ್‌ ವೇಗಾಸ್‌ಎಂಜಿಎಂ ಕ್ರೀಡಾಂಗಣದಲ್ಲಿ ಭಾನುವಾರ ಬೆಳಗ್ಗೆ ಫಿಲಿಪೈನ್ಸ್‌ನ ಮ್ಯಾನಿ ಪ್ಯಾಕ್ವಿಯೋ ಮತ್ತು ಮೇವೆದರ್‌ ನಡುವೆ ರೋಚಕ ಹಣಾಹಣಿ ನಡೆಯಿತು. 12 ಸುತ್ತುಗಳಲ್ಲಿ ನಡೆದ ಪಂದ್ಯದಲ್ಲಿ ಆರಂಭದಿಂದಲೂ ಮೇಲುಗೈ ಸಾಧಿಸಿದ್ದ ಮೇವೆದರ್‌ 10 ಸುತ್ತುಗಳಲ್ಲಿ ಮುನ್ನಡೆ ಸಾಧಿಸಿ ಪ್ರಶಸ್ತಿ ತಮ್ಮದಾಗಿಸಿಕೊಂಡದರು. ಮೇವೆದರ್‌ 118-110 ,116-112 ಮತ್ತು 116-112 ಅಂಕಗಳಿಂದ ಮುನ್ನಡೆ ಪಡೆದರು.

ಪ್ರಶಸ್ತಿ ಮೊತ್ತ 900 ಕೋಟಿ ರೂಪಾಯಿ ಮಾತ್ರವಲ್ಲದೆ ಆಯೋಜಕರಿಂದ ಬಂದ ಆದಾಯ ಮೊತ್ತವನ್ನು ಪಡೆಯಲಿರುವ ಮೇವೆದರ್‌ ಸಾವಿರ ಕೋಟಿಗೂ ಮಿಕ್ಕಿ ಹಣ ತಮ್ಮದಾಗಿಸಿಕೊಂಡಿದ್ದಾರೆ.

ವಿಶ್ವವೆ ಕೂತೂಹಲದಿಂದ ಕಾತರವಾಗಿದ್ದ ಪಂದ್ಯವನ್ನು ಜಯಗಳಿಸುವ ಮೂಲಕ ಬಾಕ್ಸಿಂಗ್‌ ನಲ್ಲಿ ಅಜೇಯ ಯಾತ್ರೆ ಮುಂದುವರಿಸಿರುವ ಮವೇದರ್‌ ವೃತ್ತಿ ಜೀವನದಲ್ಲಿ 48 ಪಂದ್ಯಗಳನ್ನು ಗೆದ್ದ ಸಾಧನೆ ಮಾಡಿದರು.

ಪಂದ್ಯವನ್ನು ಸೋತರೂ ಪ್ಯಾಕ್ವಿಯೋ ರನ್ನರ್‌ ಆಫ್ ಪ್ರಶಸ್ತಿ ಮೊತ್ತ 600 ಕೋಟಿ ಸೇರಿದಂತೆ 700 ಕೋಟಿ ಹಣವನ್ನು ತಮ್ಮದಾಗಿಸಿಕೊಂಡಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Sports

ಪದ್ಮಭೂಷಣ ಪ್ರಶಸ್ತಿಗೆ ಪಿ.ವಿ ಸಿಂಧು ಹೆಸರು ಶಿಫಾರಸು
  • ಪದ್ಮಭೂಷಣ ಪ್ರಶಸ್ತಿಗೆ ಪಿ.ವಿ ಸಿಂಧು ಹೆಸರು ಶಿಫಾರಸು
  • ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಹೆಸರನ್ನು ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿಗೆ ಕೇಂದ್ರ ಕ್ರೀಡಾ ಸಚಿವಾಲಯ ಶಿಫಾರಸ್ಸು ಮಾಡಿದೆ.
  • ಮಕ್ಕಳಿಗೆ ಶಿಕ್ಷಣದ ಜೊತೆಗೆ ಕ್ರೀಡೆಗಳು ಅಗತ್ಯ : ರಾಮಲಿಂಗಾರೆಡ್ಡಿ
  • ರಿಯೋ ಒಲಂಪಿಕ್ಸ್ 2016 ಕ್ರೀಡಾ ಉತ್ಸವಕ್ಕೆ ಅದ್ದೂರಿ ತೆರೆ
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited