Untitled Document
Sign Up | Login    
Dynamic website and Portals
  
May 2, 2015

ಸಾಮೂಹಿಕ ಸಂಪರ್ಕ ಅಭಿಯಾನಕ್ಕೆ ಬಿಜೆಪಿ ಚಾಲನೆ

ಸಾಮೂಹಿಕ ಸಂಪರ್ಕ ಅಭಿಯಾನಕ್ಕೆ ಬಿಜೆಪಿ ಚಾಲನೆ

ನವದೆಹಲಿ : ತಳಮಟ್ಟದಿಂದಲೇ ಪಕ್ಷವನ್ನು ಬಲಪಡಿಸುವ ಉದ್ದೇಶದಿಂದ ಬಿಜೆಪಿ ಮತ್ತೊಂದು ಅಭಿಯಾನ ಆರಂಭಿಸಿದೆ. ಎಲ್ಲ ಹೊಸ ಸದಸ್ಯರ ಮನೆ ಮನೆಗೆ ಭೇಟಿ ನೀಡುವ ‘ಸಾಮೂಹಿಕ ಸಂಪರ್ಕ ಅಭಿಯಾನ’ಕ್ಕೆ ಪಕ್ಷ ಚಾಲನೆ ನೀಡಿದೆ.

‘ಸದಸ್ಯತ್ವ ನೋಂದಣಿ ಅಭಿಯಾನ’ದ ವೇಳೆ ಹೊಸದಾಗಿ ಸದಸ್ಯರಾದವರಿಗೆ ಪಕ್ಷದ ಸಿದ್ಧಾಂತಗಳನ್ನು ತಿಳಿಸುವುದು ಈ ಅಭಿಯಾನದ ಮುಖ್ಯ ಉದ್ದೇಶ. ಇದು ಮೂರು ತಿಂಗಳ ಕಾಲ ನಡೆಯಲಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗುವ ಮೂಲಕ ಈ ಅಭಿಯಾನಕ್ಕೆ ಚಾಲನೆ ನೀಡಿದರು. ಬಿಜೆಪಿಯ ಮೊದಲ ಸದಸ್ಯರಾದ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ ಸಾಮೂಹಿಕ ಸಂಪರ್ಕ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ ಎಂದು ಶಾ ತಿಳಿಸಿದ್ದಾರೆ.

ಕಳೆದ ವರ್ಷ ನವೆಂಬರ್‌ 1ರಂದು ಬಿಜೆಪಿ ತನ್ನ ಸದಸ್ಯತ್ವ ನೋಂದಣಿ ಅಭಿಯಾನ ಆರಂಭಿಸಿತ್ತು. ಮೋದಿ ಮೊದಲ ಸದಸ್ಯರಾಗುವ ಮೂಲಕ ಈ ಅಭಿಯಾನಕ್ಕೆ ಚಾಲನೆ ಲಭಿಸಿತ್ತು. ‘ಒಟ್ಟು 10.5 ಕೋಟಿಯಷ್ಟು ಸದಸ್ಯರು ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ’ ಎಂದು ಅವರು ಹೇಳಿದರು.

ಹೊಸ ಸದಸ್ಯರ ಮನೆಗೆ ತೆರಳಿ ಬಿಜೆಪಿ ಸಿದ್ಧಾಂತವನ್ನು ಅವರಿಗೆ ತಿಳಿಸಲು ಪಕ್ಷದ ಕಾರ್ಯಕರ್ತರಲ್ಲಿ ಕೇಳಿಕೊಳ್ಳುವೆ ಎಂದು ಅವರು ಹೇಳಿದರು. ಮೂರು ತಿಂಗಳ ಅಭಿಯಾನದ ವೇಳೆ ಪಕ್ಷದ ಕಾರ್ಯಕರ್ತರು ಎಲ್ಲ ಹೊಸ ಸದಸ್ಯರನ್ನು ಭೇಟಿಯಾಗಲಿದ್ದು, ಅವರ ಸದಸ್ಯತ್ವವನ್ನು ಖಚಿತಪಡಿಸುವ ಮತ್ತು ಪರಿಶೀಲಿಸುವ ಕೆಲಸ ಮಾಡಲಿದ್ದಾರೆ ಎಂದು ವಿವರಿಸಿದರು.

ಪಕ್ಷದ ಇತಿಹಾಸ ಮತ್ತು ಸಿದ್ಧಾಂತದ ಮಾಹಿತಿ ಒಳಗೊಂಡ ಪುಸ್ತಕ ಹಾಗೂ ಪಕ್ಷದ ಅಧ್ಯಕ್ಷರ ಪತ್ರವನ್ನು ಹೊಸ ಸದಸ್ಯರಿಗೆ ನೀಡಲಾಗುವುದು. ಆನ್‌ ಲೈನ್‌ ಮೊಬೈಲ್‌ ತಂತ್ರಜ್ಞಾನದ ಮೂಲಕ ಹೆಸರು ನೋಂದಾಯಿಸಿದವರ ಸದಸ್ಯತ್ವವನ್ನು ಖಚಿತಪಡಿಸುವ ಕೆಲಸವೂ ಈ ವೇಳೆ ನಡೆಯಲಿದೆ ಎಂದು ತಿಳಿಸಿದರು.

ಸಾಮೂಹಿಕ ಸಂಪರ್ಕ ಅಭಿಯಾನ ಜುಲೈ 31ಕ್ಕೆ ಕೊನೆಗೊಳ್ಳಲಿದೆ. ಆ ಬಳಿಕ ಪಕ್ಷದ ಕಾರ್ಯಕರ್ತರನ್ನು ತರಬೇತು ಗೊಳಿಸುವ ಮತ್ತೊಂದು ಅಭಿಯಾನ ಆರಂಭಿಸಲಿದ್ದೇವೆ ಎಂದು ಹೇಳಿದರು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited