ಕಠ್ಮಂಡು : 'ನೇಪಾಳ'ದಲ್ಲಿ ಸಂಭವಿಸಿರುವ ಭೀಕರ ಭೂಕಂಪಕ್ಕೆ 3,700ಮಂದಿ ಮೃತಪಟ್ಟಿದ್ದರೆ ಒಂದು ಮಿಲಿಯನ್ ಗೂ ಹೆಚ್ಚು ಮಕ್ಕಳು ಆರೋಗ್ಯ ಸೇರಿದಂತೆ ವಿವಿಧ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ನೇಪಾಳದ ಭೂಕಂಪಕ್ಕೆ ಸಿಲುಕಿ ಸಂಕಷ್ಟ ಎದುರಿಸುತ್ತಿರುವ ಮಕ್ಕಳ ಬಗೆಗೆ ಯುನಿಸೆಫ್(ವಿಶ್ವಸಂಸ್ಥೆಯ ಮಕ್ಕಳ ನಿಧಿ) ವಕ್ತಾರರು ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದ್ದಾರೆ. ಸುಮಾರು ಒಂದು ಮಿಲಿಯನ್ ಗಿಂತಲೂ ಹೆಚ್ಚು ಮಕ್ಕಳು ಭೂಕಂಪಕ್ಕೆ ತುತ್ತಾಗಿದ್ದಾರೆ ಎಂದು ವರದಿ ಮೂಲಕ ತಿಳಿದುಬಂದಿದೆ.
ಇತ್ತೀಚಿನ ವರದಿ ಪ್ರಕಾರ ನೇಪಾಳದಲ್ಲಿ ಸುಮಾರು 66 ಲಕ್ಷ ಜನರು ಸಂತ್ರಸ್ತರಾಗಿದ್ದು. ಕಂಠಂಡುವಿನಲ್ಲೇ ಸುಮಾರು ಒಂದು ಸಾವಿರ ಜನರು ನಿರಾಶ್ರಿತರಾಗಿದ್ದು, ಬಯಲಿನಲ್ಲೇ ಜೀವಿಸುತ್ತಿದ್ದಾರೆ. ಇದರಿಂದಾಗಿ ನೀರಿನಿಂದ ಉಂಟಾಗುವ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟಲು ಶ್ರಮಿಸುತ್ತಿರುವುದಾಗಿ ಯುನೆಸ್ಕೋ ತಿಳಿಸಿದೆ. ಮಕ್ಕಳಿಗೆ ಸಾಂಕ್ರಾಮಿಕ ರೋಗ ಬಹುಬೇಗ ಹರಡುವ ಸಾಧ್ಯತೆ ಇರುವುದರಿಂದ ಯುನೆಸ್ಕೋ ಆತಂಕ ವ್ಯಕ್ತಪಡಿಸಿದೆ.
ನೇಪಾಳದಲ್ಲಿ ಸಂಭವಿಸಿರುವ ಭೂಕಂಪದಲ್ಲಿ ಮಡಿದವರ ಸಂಖ್ಯೆ 5 ಸಾವಿರ ದಾಟುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಪರಿಹಾರ, ರಕ್ಷಣಾ ಕಾರ್ಯಾಚರಣೆ ಕ್ಷಿಪ್ರಗತಿಯಲ್ಲಿ ಸಾಗುತ್ತಿದ್ದು. ಗಾಯಾಳುಗಳಿಗೆ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ.