Untitled Document
Sign Up | Login    
Dynamic website and Portals
  
April 28, 2016

ಇಸ್ರೋದಿಂದ ಐ ಆರ್ ಎನ್ ಎಸ್ ಎಸ್ -1ಜಿ ಉಪಗ್ರಹ ಯಶಸ್ವಿ ಉಡಾವಣೆ

ಉಪಗ್ರಹ ಉಡಾವಣೆ ( ಸಂಗ್ರಹ ಚಿತ್ರ) ಉಪಗ್ರಹ ಉಡಾವಣೆ ( ಸಂಗ್ರಹ ಚಿತ್ರ)

ಚೆನ್ನೈ : ಐ ಆರ್ ಎನ್ ಎಸ್ ಎಸ್ ಸರಣಿಯ 7ನೇ ಹಾಗೂ ಅಂತಿಮ ಐ ಆರ್ ಎನ್ ಎಸ್ ಎಸ್ -1ಜಿ ಉಪಗ್ರಹ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಗುರುವಾರ ಯಶಸ್ವಿಯಾಗಿ ಉಡಾವಣೆ ಮಾಡಿದೆ. ಈ ಮೂಲಕ ಬಾಹ್ಯಾಕಾಶ ಸಂಸ್ಥೆ ಇಸ್ರೋ ಮತ್ತೊಂದು ಮೈಲಿಗಲ್ಲು ಸಾಧಿಸಿದಂತಾಗಿದೆ.

ಐ ಆರ್​ ಎನ್ ​ಎಸ್ ​ಎಸ್ ಸರಣಿಯ 7ನೇ ಮತ್ತು ಕೊನೆಯ ಐ ಆರ್​ ಎನ್ ​ಎಸ್ ​ಎಸ್ -1ಜಿ ಯ ಮೂಲಕ ಪ್ರಾದೇಶಿಕ ಮಾರ್ಗಸೂಚಿ ವ್ಯವಸ್ಥೆಯ ಮೈಲುಗಲ್ಲನ್ನು ಸಾಧಿಸಿದೆ. ಈ ಮೂಲಕ ಯು ಎಸ್ ನ ಜಿಪಿಎಸ್ ವ್ಯವಸ್ಥೆಗೆ ಪರ್ಯಾಯವಾಗಿ ಭಾರತದ ದೇಶೀ ವ್ಯವಸ್ಥೆ ತಯಾರಾದಂತಾಗಿದೆ.

ಪ್ರಾದೇಶಿಕ ಮಾರ್ಗಸೂಚಿ ವ್ಯವಸ್ಥೆಯನ್ನು ನಾಗರಿಕ ಬಳಕೆಯ ಜೊತೆ, ರಕ್ಷಣಾ ಕಾರ್ಯಾಚರಣೆಯಲ್ಲೂ ಬಳಸಬಹುದಾಗಿದೆ.

ಭಾರತ ಈ ತನಕ ಒಟ್ಟು ಆರು ಪ್ರಾದೇಶಿಕ ಮಾರ್ಗಸೂಚಿ ಉಪಗ್ರಹಗಳನ್ನು ಉಡಾವಣೆ ಮಾಡಿದೆ. IRNSS-1A, 1B, 1C, ID,1E ಮತ್ತು 1F ಈಗಾಗಲೇ ಉಡಾವಣೆಗೊಂಡಿರುವ ಪ್ರಾದೇಶಿಕ ಮಾರ್ಗಸೂಚಿ ಉಪಗ್ರಹಗಳಾಗಿವೆ. ಇಸ್ರೋ ಉಡಾಯಿಸಿದ ಐಆರ್ ಎನ್ ಎಸ್ ಎಸ್ 1ಜಿ ಉಪಗ್ರಹ ಉಡಾವಣೆಯನ್ನು ಪ್ರಧಾನಿ ನರೇಂದ್ರ ಮೋದಿ ವೀಕ್ಷಿಸಿದ್ದು, ವಿಜ್ಞಾನಿಗಳ ಸಾಧನೆಗೆ ಅಭಿನಂದನೆ ವ್ಯಕ್ತಪಡಿಸಿ, ಇದು ದೇಶದ ಜನತೆಗೆ ವಿಜ್ಞಾನಿಗಳು ನೀಡಿದ ಅತೀ ದೊಡ್ಡ ಕೊಡುಗೆ ಎಂದು ಟ್ವೀಟ್ ಮಾಡಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Science & Technology

ಪ್ರೊ.ಸಿ.ಎನ್‌.ಆರ್‌.ರಾವ್‌ ಅವರಿಗೆ ಅಮೆರಿಕದ ವಾನ್‌ ಹಿಪ್ಪಲ್‌ ಪ್ರಶಸ್ತಿ
  • ಪ್ರೊ.ಸಿ.ಎನ್‌.ಆರ್‌.ರಾವ್‌ ಅವರಿಗೆ ಅಮೆರಿಕದ ವಾನ್‌ ಹಿಪ್ಪಲ್‌ ಪ್ರಶಸ್ತಿ
  • ಹಿರಿಯ ವಿಜ್ಞಾನಿ ಪ್ರೊ.ಸಿ.ಎನ್‌.ಆರ್‌.ರಾವ್‌ ಅವರಿಗೆ ಅಮೆರಿಕದ ಅತ್ಯುನ್ನತ ‘ವಾನ್‌ ಹಿಪ್ಪಲ್‌’ ಪ್ರಶಸ್ತಿ ಲಭಿಸಿದೆ.
  • ಇಸ್ರೋದಿಂದ 8 ಉಪಗ್ರಹಗಳ ಯಶಸ್ವಿ ಉಡ್ಡಯನ
  • ಇಸ್ರೋ: ಪಿಎಸ್ ಎಲ್ ವಿ-ಸಿ35 ಸ್ಕಾಟ್​ಸ್ಯಾಟ್-1ಉಪಗ್ರಹ ಉಡಾವಣೆಗೆ ಸಿದ್ಧತೆ
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited