ನವದೆಹಲಿ : ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತರಾಗಿ ನಸೀಮ್ ಜೈದಿ ಅಧಿಕಾರ ಸ್ವೀಕರಿಸಿದ್ದಾರೆ. 2017ರ ಜುಲೈನಲ್ಲಿ ನಸೀಮ್ ಅವರಿಗೆ 65 ವರ್ಷ ತುಂಬಲಿದ್ದು, ಅಲ್ಲಿಯ ತನಕ ಅವರು ಮುಖ್ಯ ಚುನಾವಣಾ ಆಯುಕ್ತರಾಗಿ ಸೇವೆ ಸಲ್ಲಿಸಲಿದ್ದಾರೆ.
ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸುವುದು ಹಾಗೂ ದೋಷ ಮುಕ್ತ ಮತದಾರರ ಪಟ್ಟಿ ಸಿದ್ಧಪಡಿಸುವುದು ಆಯೋಗದ ಗುರಿ ಎಂದು ಚುನಾವಣಾ ಆಯೋಗದ 20ನೇ ಮುಖ್ಯ ಚುನಾವಣಾ ಆಯುಕ್ತ ಜೈದಿ ತಿಳಿಸಿದ್ದಾರೆ. ಹೆಚ್.ಎಸ್.ಬ್ರಹ್ಮ ಅವರ ನಿವೃತ್ತಿಯಿಂದ ತೆರವಾದ ಸ್ಥಾನವನ್ನು ಜೈದಿ ತುಂಬಿದ್ದಾರೆ.