ಕೀನ್ಯಾ : 'ಪಾಕಿಸ್ತಾನ'ದ ಪೇಷಾವರದಲ್ಲಿ ನಡೆಸಿದಂತೆಯೇ ಕೀನ್ಯಾದ ವಿಶ್ವವಿದ್ಯಾನಿಲಯದ ಮೇಲೆ ಅಲ್ ಶಬಾಬ್ ಉಗ್ರರು ದಾಳಿ ನಡೆಸಿದ್ದಾರೆ.
ಕೀನ್ಯಾದ ಉಗ್ರರು 147 ವಿದ್ಯಾರ್ಥಿಗಳನ್ನು ಕೊಂದಿದ್ದಾರೆ. ವಿವಿಯಲ್ಲಿದ್ದ ಒಟ್ಟು 850 ಮಕ್ಕಳಲ್ಲಿ 518 ಮಂದಿ ಮಕ್ಕಳು ಹಾಜರಿದ್ದರು. ಈ ಮಕ್ಕಳಲ್ಲಿ 147 ಜನರನ್ನು ಶಬಾಬ್ ಉಗ್ರರು ಹತ್ಯೆ ಮಾಡಿದ್ದಾರೆ. ಪೊಲೀಸರು ಮತ್ತು ಮಿಲಿಟರಿ ಪಡೆ ಕಾರ್ಯಾಚರಣೆ ನಡೆಸಿ ನಾಲ್ವರು ಉಗ್ರರನ್ನು ಹತ್ಯೆ ಮಾಡಿ ಉಗ್ರರ ಕಪಿಮುಷ್ಠಿಯಲ್ಲಿದ್ದ ಇತರ ಮಕ್ಕಳನ್ನು ರಕ್ಷಿಸಿದ್ದಾರೆ.
ಪೂರ್ವ ಕೀನ್ಯಾದಲ್ಲಿರುವ ಈ ಕ್ರೈಸ್ತ ವಿಶ್ವವಿದ್ಯಾಲಯದ ಮೇಲೆ ಕ್ರೈಸ್ತ ವಿರೋಧಿ ಅಲ್-ಶಬಾಬ್ ಉಗ್ರರು ಈ ಹೇಯ ಕೃತ್ಯ ನಡೆಸಿ ಮಕ್ಕಳನ್ನು ಹತ್ಯೆ ಮಾಡಿದ್ದಾರೆ.
ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೀನ್ಯಾ ಅಧ್ಯಕ್ಷ ಉಹುರು ಕೆನ್ಯಾಟ್ಟ ಹಾಗೂ ಗೃಹ ಸಚಿವ ಜೋಸೆಫ್ ಎನ್ ಕಾಯ್ಸೆರಿ ಇದೊಂದು ಮಾನವ ವಿರೋಧಿ ಹೀನ ಕೃತ್ಯ ಎಂದು ಹೇಳಿದ್ದಾರೆ.
ಇದೇ ಅಲ್ ಶಬಾಬ್ ಉಗ್ರರು ಕಳೆದ 2013ರಲ್ಲಿ ಕೀನ್ಯಾದ ನೈರೋಬಿಯದ ಮಾಲ್ವೊಂದರ ಮೇಲೆ ದಾಳಿ ನಡೆಸಿ 67 ಜನರನ್ನು ಹತ್ಯೆ ಮಾಡಿದ್ದರು.