Untitled Document
Sign Up | Login    
Dynamic website and Portals
  
April 1, 2015

ದೆಹಲಿಯಲ್ಲಿ ಏಪ್ರಿಲ್ ಫೂಲ್ ದಿನವನ್ನು ಕೇಜ್ರಿವಾಲ್ ದಿನವನ್ನಾಗಿ ಆಚರಣೆ

ಅರವಿಂದ್ ಕೇಜ್ರಿವಾಲ್ ಅರವಿಂದ್ ಕೇಜ್ರಿವಾಲ್

ನವದೆಹಲಿ : 'ಏಪ್ರಿಲ್' ಮೊದಲನೇ ದಿನವನ್ನು ಮೂರ್ಖರ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ. ದೆಹಲಿಯಲ್ಲಿ ಮಾತ್ರ ಮೂರ್ಖರ ದಿನವನ್ನು ಅರವಿಂದ್ ಕೇಜ್ರಿವಾಲ್ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ.

ದೆಹಲಿ ನಗರಾದ್ಯಂತ ಅರವಿಂದ್ ಕೇಜ್ರಿವಾಲ್ ಭಾವಚಿತ್ರವನ್ನೊಳಗೊಂಡ ಪೋಸ್ಟರ್ ಗಳನ್ನು ಹಾಕಿರುವ ಭಗತ್ ಸಿಂಗ್ ಕ್ರಾಂತಿ ಸೇನೆ ಸಂಘಟನೆ, ಮೂರ್ಖರ ದಿನದ ಬದಲು ಅರವಿಂದ್ ಕೇಜ್ರಿವಾಲ್ ದಿನದ ಶುಭಾಷಯ ಕೋರಿದೆ.

ಸುಭದ್ರ ಸರ್ಕಾರ ರಚಿಸಿ ಉತ್ತಮ ಆಡಳಿತ ನೀಡುವುದಾಗಿ ಆಪ್ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ದೆಹಲಿ ವಿಧಾನಸಭೆ ಚುನಾವಣೆಗೂ ಮುನ್ನ ದೆಹಲಿ ಜನತೆಗೆ ಭರವಸೆ ನೀಡಿದ್ದರು. ಆದರೆ ಸರ್ಕಾರ ರಚನೆಯಾದ ಕೆಲವೇ ದಿನಗಳಲ್ಲಿ ಆಪ್ ಪಕ್ಷದಲ್ಲಿ ಆಂತರಿಕ ಭಿನ್ನಾಭಿಪ್ರಾಯ ಮೂಡಿ ಪಕ್ಷ ಇಬ್ಭಾಗವಾಗುವ ಸಾಧ್ಯತೆಗಳಿವೆ. ಇದರಿಂದಾಗಿ ದೆಹಲಿ ಜನತೆಗೆ ನೀಡಿದ್ದ ಭರವಸೆಗಳು ಹುಸಿಯಾಗಲಿದೆ. ಈ ಹಿನ್ನೆಲೆಯಲ್ಲಿ ದೆಹಲಿ ಜನರನ್ನು ಅರವಿಂದ್ ಕೇಜ್ರಿವಾಲ್ ಮೂರ್ಖರನ್ನಾಗಿ ಮಾಡಿದ್ದಾರೆಂದು ದೆಹಲಿಯಲ್ಲಿ ಮೂರ್ಖರ ದಿನಾಚರಣೆಯನ್ನು ಅರವಿಂದ್ ಕೇಜ್ರಿವಾಲ್ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited