Untitled Document
Sign Up | Login    
Dynamic website and Portals
  
March 17, 2015

ಬಿಬಿಎಂಪಿ ಬಜೆಟ್ ಮಂಡನೆ: ಹೊಸ ಯೋಜನೆಗಳ ಪ್ರಕಟ ಇಲ್ಲ

ಬಿಬಿಎಂಪಿ ಬಜೆಟ್ ಮಂಡನೆ:  ಹೊಸ ಯೋಜನೆಗಳ ಪ್ರಕಟ ಇಲ್ಲ

BW News Bureau : ಯಾವುದೆ ಹೊಸ ಯೋಜನೆಗಳನ್ನು ಪ್ರಕಟಿಸದೆ 6729.62 ಕೋಟಿ ರೂ. ವೆಚ್ಚದ ಪ್ರಸಕ್ತ ಸಾಲಿನ ಬಿಬಿಎಂಪಿ ಬಜೆಟ್ ಅನ್ನು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಆನಂದ್ ಪಾಲಿಕೆ ಸಭೆಯಲ್ಲಿಂದು ಮಂಡಿಸಿದರು.

17.17 ಕೋಟಿ ಆರಂಭಿಕ ಶಿಲ್ಕು ಇದರ ಜತೆಗೆ 6712 ಕೋಟಿ ಆದಾಯದ ನಿರೀಕ್ಷೆಯೊಂದಿಗೆ 2015-16ನೆ ಸಾಲಿನ ಬಜೆಟ್ ಅನ್ನು ನಾನು ಮಂಡಿಸುತ್ತಿದ್ದೇನೆ. ಈ ಬಜೆಟ್‌ಗೆ ಸರ್ಕಾರ ಅನುಮೋದನೆ ಕೊಡುವ ನಿರೀಕ್ಷೆ ಇದೆ ಎಂದು ಆನಂದ್ ತಿಳಿಸಿದರು.

2 ಸಾವಿರ ಕೋಟಿ ತೆರಿಗೆಯಿಂದ, 844.64 ಕೋಟಿ ತೆರಿಗೆಯೇತರದಿಂದ ಮತ್ತು 2902 ಕೋಟಿ ರೂಗಳ ಸರ್ಕಾರದ ಅನುದಾನ ಮತ್ತು ಇತರೆ ಮೂಲಗಳಿಂದ 965.28 ಕೋಟಿ ಆದಾಯ ಸಂಗ್ರಹಿಸುವ ಗುರಿಯನ್ನು ಹೊಂದಲಾಗಿದೆ. ಈ ಬಾರಿ ಯಾವುದೆ ಹೊಸ ಯೋಜನೆ ಪ್ರಕಟ ಮಾಡುವುದಿಲ್ಲ. 2014-15ನೆ ಸಾಲಿನಲ್ಲಿ ಉಳಿದುಕೊಂಡಿರುವ ಬಾಕಿ ಕಾಮಗಾರಿಗಳನ್ನು ಪೂರ್ನಗೊಳಿಸಲು ಈ ಬಜೆಟ್‌ನಲ್ಲಿ ಆದ್ಯತೆ ನೀಡಲಾಗಿದೆ. ನಗರದ ಸಮಗ್ರ ಅಭಿವೃದ್ಧಿಗೆಬಜೆಟ್ ನೀಲಿ ನಕ್ಷೆ ಆಗಲಿದೆ ಎಂದು ಆನಂದ್ ವಿಶ್ವಾಸ ವ್ಯಕ್ತಪಡಿಸಿದರು.

ಕಲ್ಯಾಣ ಕಾರ್ಯಕ್ರಮಗಳಿಗೆ 401 ಕೋಟಿ, ಆರೋಗ್ಯಕ್ಕೆ 108 ಕೋಟಿ, ತ್ಯಾಜ್ಯ ವಿಲೇವಾರಿಗೆ 415 ಕೋಟಿ, ಕೆರೆ ಅಭಿವೃದ್ಧಿಗೆ 130 ಕೋಟಿ, ಆಸ್ತಿ ಸಂರಕ್ಷಣೆಗೆ 40 ಕೋಟಿಯನ್ನು ಈ ಬಜೆಟ್‌ನಲ್ಲಿ ಮೀಸಲಿಡಲಾಗಿದೆ ಎಂದರು.

ಬಜೆಟ್ ನ ಪ್ರಮುಖ ಅಂಶಗಳು:

* ಹಣಕಾಸು ಮತ್ತು ಲೆಕ್ಕಪತ್ರ ವಿಭಾಗದಲ್ಲಿ ಹಾಲಿ ಇರುವ (ಐಎಫ್ಎಂಎಸ್) ತಂತ್ರಾಂಶ ಅಭಿವೃದ್ಧಿ.
* ಇ ಆಡಳಿತವನ್ನು ಪಾಲಿಕೆಯಲ್ಲಿ ತರುವ ನಿಟ್ಟಿನಲ್ಲಿ ಕ್ರಮ

* ಕಸ ವಿಲೇವಾರಿ ವ್ಯವಸ್ಥಿತವಾಗಿ ನಿರ್ವಹಿಸಲು ಈಗಾಗಲೇ 4೦೦೦ ಸಾವಿರ ಪೌರ ಕಾರ್ಮಿಕರ ಹುದ್ದೆಗಳನ್ನು ಭರ್ತಿ ಮಾಡುವ ಸಲುವಾಗಿ ಅರ್ಜಿ ಸ್ವೀಕರಿಸಲಾಗಿದೆ.

* ಆರ್ಥಿಕ ವ್ಯವಹಾರಗಳನ್ನು ಆನ್ ಲೈನ್ ಮೂಲಕ ಜಾರಿಗೆ ತರಲು ಅಗತ್ಯ ಕ್ರಮ

* ಬಿಬಿಎಂಪಿ ವ್ಯಾಪಿಗೆ ಬರುವ ಅಂಗಡಿ ವಾಣಿಜ್ಯ ಸಂಕೀರ್ಣಗಳಿಂದ ಬಾಡಿಗೆ ಮತ್ತು ಶುಲ್ಕವನ್ನೂ ಸಹ ಪರಿಷ್ಕರಿ ಈ ಮೂಲಕ ಮಾರುಕಟ್ಟೆ ವಿಭಾಗದಿಂದ ರು. 75 ಕೋಟಿ ಆದಾಯ ನಿರೀಕ್ಷೆ.

* ಆರೋಗ್ಯ ವಿಭಾಗಕ್ಕೆ ಒಟ್ಟಾರೆ ರು. 105.08 ಕೋಟಿ ಮೀಸಲಿಸಿರಿಸಿದೆ.

* ಹೆರಿಗೆ ಮತ್ತು ರೆಫರಲ್ ಆಸ್ಪತ್ರೆಗಳಲ್ಲಿ ಗರ್ಭಿಣಿಯರಿಗೆ ಉಚಿತವಾಗಿ ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ವ್ಯವಸ್ಥೆಯನ್ನು ನೀಡುವ ಕಾರ್ಯಕ್ರಮ ಮುಂದುವರಿಕೆ.

* ಪಾಲಿಕೆಯಲ್ಲಿ ರೆಫರಲ್ ಆಸ್ಪತ್ರೆಗಳು ಮತ್ತು ಡಯಾಲಿಸಿಸ್ ಸೆಂಟರ್ ಗಳು ಕಾರ್ಯನಿರ್ವಹಿಸುತ್ತಿದ್ದು, ಇವುಗಳ ಉನ್ನತ್ತೀಕರಣ.

* ಶಿಕ್ಷಣ ವಿಭಾಗಕ್ಕೆ ಒಟ್ಟಾರೆ ರು. 20.66 ಕೋಟಿ ಮೀಸಲು

* ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಸಿಸಿ ಕ್ಯಾಮರಗಳ ಅಳವಡಿಕೆಗೆ 1 ಕೋಟಿ. ರೂಪಾಯಿ

* ಪಾಲಿಕೆಯ ಶಾಲಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿ ಊಟ ವ್ವವಸ್ಥೆ. ಇದಕ್ಕಾಗಿ 1 ಕೋಟಿ ರೂ

* ಬಿಬಿಎಂಪಿಯಿಂದ ಬೆಂಗಳೂರು ನಗರದ ಅಭಿವೃದ್ಧಿ ಕಾಮಗಾರಿಗಳಿಗೆ ನಗರೋಥ್ಥಾನ ಯೋಜನೆಯಡಿ ರು. 1೦೦೦ ಕೋಟಿ ಮತ್ತು ಹೆಚ್ಚುವರಿಯಾಗಿ ರು. 1500 ಕೋಟಿ ಒಟ್ಟಾರೆ 25೦೦ ಕೋಟಿ ಅನುದಾನದಲ್ಲಿ ರಸ್ತೆ ಅಗಲೀಕರಣ ಕೆರೆಗಳ ಅಭಿವೃದ್ಧಿ, 2 ನಗರಸಭೆ ಮತ್ತು 1 ಪುರಸಭೆ ವ್ಯಾಪ್ತಿಯಲ್ಲಿ ಹಿಂದುಳಿದ ಪ್ರದೇಶಗಳ ಅಭಿವೃದ್ಧಿ ಕಾಮಗಾರಿ.

* ಪಾಲಿಕೆಯ ಆಸ್ತಿಗಳ ಸಂರಕ್ಷಣೆಗೆ ಒಟ್ಟಾರೆ ರು. 4೦.4೦ ಕೋಟಿ

* ಕೆರೆಗಳ ಅಭಿವೃದ್ಧಿಗಾಗಿ ಒಟ್ಟಾರೆ ರು. 13೦ ಕೋಟಿ

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : BBMP

ರಸ್ತೆ ಗುಂಡಿ ಮುಚ್ಚಲು 10 ದಿನಗಳ ಗಡುವು: ಬಿಬಿಎಂಪಿ ಅಧಿಕಾರಿಗಳಿಗೆ ಸಿಎಂ ಆದೇಶ
  • ರಸ್ತೆ ಗುಂಡಿ ಮುಚ್ಚಲು 10 ದಿನಗಳ ಗಡುವು: ಬಿಬಿಎಂಪಿ ಅಧಿಕಾರಿಗಳಿಗೆ ಸಿಎಂ ಆದೇಶ
  • ನಗರದ ರಸ್ತೆ ಗುಂಡಿಗಳನ್ನು 10 ದಿನದೊಳಗೆ ಮುಚ್ಚುವಂತೆ ಸಿಎಂ ಸಿದ್ದರಾಮಯ್ಯ ಅವರು ಬಿಬಿಎಂಪಿ ಅಧಿಕಾರಿಗಳಿಗೆ ಖಡಕ್ ಸೂಚನೆ ರವಾನಿಸಿದ್ದಾರೆ.
  • ಬಿಬಿಎಂಪಿ ನೂತನ ಆಯುಕ್ತರಾಗಿ ಮಂಜುನಾಥ್ ಪ್ರಸಾದ್ ನೇಮಕ
  • ಬೆಂಗಳೂರಲ್ಲಿ ಕಸ ವಿಂಗಡಣೆ ಕಡ್ಡಾಯಗೊಳಿಸಿ ಹೈಕೋರ್ಟ್ ಆದೇಶ; ಉಲ್ಲಂಘನೆಗೆ ಭಾರೀ ದಂಡ
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited