ಇಸ್ಲಾಮಾಬಾದ್ : 'ಮುಂಬೈ ದಾಳಿ'ಯ ಮಾಸ್ಟರ್ ಮೈಂಡ್ ಉಗ್ರ ಝಾಕಿ-ಉರ್ ರೆಹಮಾನ್ ಲಖ್ವಿಯನ್ನು ಬಿಡುಗಡೆ ಮಾಡಿ, ಪಾಕಿಸ್ತಾನದ ಇಸ್ಲಾಮಾಬಾದ್ ಹೈಕೋರ್ಟ್ ಆದೇಶ ನೀಡಿದೆ.
ಪಾಕಿಸ್ತಾನದ ಮಾಧ್ಯಮಗಳು ಈ ಬಗ್ಗೆ ಸುದ್ದಿ ಪ್ರಸಾರ ಮಾಡುತ್ತಿದ್ದು, ತಕ್ಷಣವೇ ಲಖ್ವಿಯನ್ನು ಬಿಡುಗಡೆ ಮಾಡುವಂತೆ ಇಸ್ಲಾಮಾಬಾದ್ ನ ಮುಖ್ಯ ನ್ಯಾಯಮೂರ್ತಿ ನೂರುಲ್ ಹಕ್ ಆದೇಶಿಸಿದ್ದಾರೆ. ತನ್ನನ್ನು ಬಂಧಿಸಿರುವುದನ್ನು ಪ್ರಶ್ನಿಸಿ ಸತತ ಮೂರು ಬಾರಿ ಉಗ್ರ ಲಖ್ವಿ ಕೋರ್ಟ್ ಮೊರೆ ಹೋಗಿದ್ದ. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಲಖ್ವಿ ಬಂಧನ ಕಾನೂನು ಬಾಹಿರವಾದದ್ದು ಎಂದು ಅಭಿಪ್ರಾಯಪಟ್ಟಿದೆ.
ಮುಂಬೈ ದಾಳಿಯ ಪ್ರಕರಣದಲ್ಲಿ 6 ಜನ ಶಂಕಿತರೊಂದಿಗೆ ಪಾಕ್ ಉಗ್ರ ಲಖ್ವಿಯನ್ನೂ ಸಹ ಬಂಧಿಸಲಾಗಿತ್ತು. 2009ರಿಂದ ಲಖ್ವಿಯನ್ನು ಬಂಧಿಸಲಾಗಿತ್ತು. ಇತ್ತೀಚೆಗಷ್ಟೇ ಆತನಿಗೆ ಜಾಮೀನು ದೊರೆತರೂ ಭಾರತದ ವಿರೋಧದಿಂದ ಮತ್ತೆ ಆತನನ್ನು ಬಂಧಿಸಲಾಗಿತ್ತು.
ಜನವರಿ 7ರಂದು ಪಾಕ್ ಸುಪ್ರೀಂ ಕೋರ್ಟ್ ಲಖ್ವಿಯನ್ನು ಬಂಧಿಸುವಂತೆ ಸೂಚನೆ ನೀಡಿದ್ದರ ಹಿನ್ನೆಲೆಯಲ್ಲಿ ಜಾಮೀನು ದೊರೆತರೂ ಆತನಿಗೆ ಜೈಲೇ ಗತಿಯಾಗಿತ್ತು.