Untitled Document
Sign Up | Login    
Dynamic website and Portals
  
March 12, 2015

ಅವಳಿ ತೆರಿಗೆ ನಿವಾರಣಾ ಒಪ್ಪಂದಕ್ಕೆ ಮಾರೀಷಸ್-ಭಾರತ ಸಹಿ

ದ್ವೀಪರಾಷ್ಟ್ರದ ಅಭಿವೃದ್ಧಿಗೆ ಪ್ರಧಾನಿ ಮೋದಿ ನೆರವು ಘೋಷಣೆ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರಧಾನ ಮಂತ್ರಿ ನರೇಂದ್ರ ಮೋದಿ

ಫೋರ್ಟ್‌ಲೋಯಿಸ್ : ಪ್ರಧಾನಿ ನರೇಂದ್ರ ಮೋದಿ ಮಾರೀಷಸ್ ಪ್ರವಾಸದಲ್ಲಿ, ಅವಳಿ ತೆರಿಗೆ ನಿವಾರಣಾ ಒಪ್ಪಂದ(ಡಿಟಿಎಎ)ಕ್ಕೆ ಸಹಿಹಾಕಿದ್ದಾರೆ.

ಮಾರೀಷಸ್ ಪ್ರಧಾನಿ ಸರ್ ಅನ್ ರೂಡ್ ಜುಗ್ನಾಥ್ ಅವರೊಂದಿಗೆ ಮಾತುಕತೆ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ದ್ವೀಪರಾಷ್ಟ್ರದ ಅಭಿವೃದ್ಧಿಗಾಗಿ 500 ಮಿಲಿಯನ್ ಡಾಲರ್ ಹಣಕಾಸಿನ ನೆರವು ಘೋಷಿಸಿದ್ದಾರೆ.

ಇದೇ ಸಂದರ್ಭದಲ್ಲಿ ಸಾಗರೋತ್ಥಾನ ಅಭಿವೃದ್ಧಿ ಸೇರಿದಂತೆ ಇನ್ನಿತರ ಹಲವಾರು ಮಹತ್ವದ ಒಪ್ಪಂದಗಳಿಗೂ ಉಭಯ ರಾಷ್ಟ್ರಗಳ ಪ್ರಮುಖರು ಸಹಿ ಹಾಕಿದ್ದಾರೆ. ಒಪ್ಪಂದದ ನಂತರ ಉಭಯ ರಾಷ್ಟ್ರಗಳ ಪ್ರಧಾನಿಗಳು ಬಹುದಿನಗಳಿಂದ ಸಾಧ್ಯವಾಗದ ಒಪ್ಪಂದಕ್ಕೆ ಸಹಿ ಹಾಕಿರುವುದು ಸಂತಸ ತಂದಿದೆ. ಈ ಒಪ್ಪಂದದ ನಂತರ ಎರಡೂ ರಾಷ್ಟ್ರಗಳ ನಡುವಿನ ಬಾಂಧವ್ಯ ಮತ್ತಷ್ಟು ವೃದ್ಧಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮಾ.12ರಂದು ಮಾರೀಷಸ್‌ ನಿಂದ ಪ್ರಧಾನಮಂತ್ರಿ ನರೇಂದ್ರಮೋದಿಯವರು ಶ್ರೀಲಂಕಾಕ್ಕೆ ಪ್ರಯಾಣ ಬೆಳೆಸಲಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited