Basavanagudi : ಉದ್ಯೋಗ ಮತ್ತು ತರಬೇತಿ ಇಲಾಖೆ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಗಳ ಸಹಯೋಗದೊಂದಿಗೆ ನಿರುದ್ಯೋಗಿ ಯುವಕ/ಯುವತಿಯರಿಗೆ ನೇರ ಸಂದರ್ಶನಕ್ಕೆ ಅನುಕೂಲವಾಗುವಂತೆ ಉದ್ಯೋಗ ಮೇಳ ಆಯೋಜಿಸಲಾಗಿದೆ.
ಫೆಬ್ರವರಿ 28 ರಂದು ಪೂರ್ವಾಹ್ನ 10.00 ಗಂಟೆಯಿಂದ ಅಪರಾಹ್ನ 4-00 ಗಂಟೆಯವರೆಗೆ ಶ್ರೀ ಕೃಷ್ಣ ಪದವಿ ಕಾಲೇಜು, ಐ.ಟಿ.ಐ. ಲೇಔಟ್ , ಬನಶಂಕರಿ, 3ನೇ ಹಂತ (ವಿದ್ಯಾಪೀಠ ಸರ್ಕಲ್) ಬೆಂಗಳೂರು – 560 085 ಇಲ್ಲಿ ಉದ್ಯೋಗ ಮೇಳವನ್ನು ಹಮ್ಮಿಕೊಂಡಿದೆ.
ಈ ಉದ್ಯೋಗ ಮೇಳದಲ್ಲಿ ಖಾಸಗಿ ವಲಯದ ಐ.ಟಿ.ಸಿ. ವೋಲ್ವೊ, ಹೆಚ್.ಡಿ.ಎಫ್.ಸಿ., ಕೋಟಕ್ ಮಹೇಂದ್ರ, ಐ.ಎನ್.ಜಿ ವೈಶ್ಯ ಬ್ಯಾಂಕ್, ಟಫೆ, ನಾರಾಯಣ ಹೃದಯಾಲಯದ ಪ್ರೈ. ಲಿ. ಕಾಫೀಡೇ, ಎನ್‍ಟಿಟಿಎಫ್, ಎನ್‍ಐಐಟಿ, ಇಂಡೋ-ಯುಎಸ್-ಮಿಮ್ (ಪ್ರೈ) ಲಿ., ಅಡಿಕೋ ಇಂಡಿಯಾ ಲಿ, ಅಪೋಲೋ ಫಾರ್ಮಸಿ, ಸೆಂಟಮ್ ಎಲೆಕ್ಟ್ರಾನಿಕ್ಸ್, ಆಕ್ಸಿಸ್ ಬ್ಯಾಂಕ್, ಬಾಟಾ ಇಂಡಿಯಾ ಲಿ., ನ್ಯಾಶ್ ಇಂಡಿಯಾ ಲಿ;, ಬಿ.ಐ.ಎ.ಎಲ್. ಏರ್ ಇಂಡಿಯಾ ಸ್ಯಾಟ್ಸ್, ಸಿ.ಎಂ.ಎಸ್.ಲಿ;, ಸೋಡೆಕ್ಸ್ ಇಂಡಿಯಾ ಲಿ., ಇನ್ನು ಮುಂತಾದ ಹೆಸರಾಂತ ಸಂಸ್ಥೆಗಳು ಭಾಗವಹಿಸುತ್ತಿದ್ದು, ವಿವಿಧ ತಾಂತ್ರಿಕ ಹಾಗೂ ತಾಂತ್ರಿಕೇತರ ಹುದ್ದೆಗಳಿಗೆ ಸ್ಥಳದಲ್ಲೇ ನೇರವಾಗಿ ಆಯ್ಕೆ/ಸಂದರ್ಶನ ಮಾಡಲಿದ್ದಾರೆ.
ಆವಿದ್ಯಾವಂತರು, ಅಕ್ಷರಸ್ಥರು ಅರ್ಧದಲ್ಲಿಯೇ ಶಾಲೆ ಬಿಟ್ಟವರು ಹಾಗೂ ಎಸ್.ಎಸ್.ಎಲ್.ಸಿ. ಅನುತ್ತೀರ್ಣ, ಎಸ್.ಎಸ್.ಎಲ್.ಸಿ. ಉತ್ತೀರ್ಣ, ಪಿ.ಯು.ಸಿ, ಐ.ಟಿಐ. ಮತ್ತು ಡಿಪ್ಲೊಮಾ (ಎಲ್ಲಾ ಟ್ರೇಡ್‍ಗಳು) ಮತ್ತು ಸಿ.ಎನ್.ಸಿ. ಆಪರೇಟರ್ಸ್ , ಎಲ್ಲಾ ಪದವೀಧರರು ಹಾಗೂ ಎಂ.ಬಿ.ಎ. ಪದವಿ ಹೊಂದಿದವರಿಗೆ ಉದ್ಯೋಗ ಅವಕಾಶಗಳು ಲಭ್ಯವಿದೆ. ಉದ್ಯೋಗಾಕಾಂಕ್ಷಿಗಳು ತಮ್ಮ ವೈಯಕ್ತಿಕ ವಿವರದೊಂದಿಗೆ “ಉದ್ಯೋಗ ಮೇಳ” ದಲ್ಲಿ ಭಾಗವಹಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 22259351/22374582ಯನ್ನು ಸಂಪರ್ಕಿಸಬಹುದು.