ನೈಜೀರಿಯಾ : 'ಪಾಕಿಸ್ತಾನ'ದಲ್ಲಿ ಶಾಲಾ ಮಕ್ಕಳನ್ನು ಹತ್ಯೆ ಮಾಡಿರುವ ಇಸ್ಲಾಮಿಕ್ ಉಗ್ರರು ಆಫ್ರಿಕಾ ಖಂಡದ ನೈಜೀರಿಯಾದಲ್ಲಿ ಬೆಕೋ ಹರ್ಮನ್ ಇಸ್ಲಾಮಿಕ್ ಉಗ್ರರು ವೃದ್ಧರನ್ನು ಹತ್ಯೆ ಮಾಡುವ ಮೂಲಕ ಅಟ್ಟಹಾಸ ಮೆರೆದಿದ್ದಾರೆ.
ನೈಜೀರಿಯಾದ ಬೋರ್ನೋ ಪ್ರದೇಶದಿಂದ 13೦ಕಿ.ಮಿ ದೂರದಲ್ಲಿ ಇಸ್ಲಾಮಿಕ್ ಉಗ್ರರು ಈ ವಾರದಲ್ಲಿ 50 ವೃದ್ಧರ ಹತ್ಯೆ ಮಾಡಿದ್ದಾರೆ. ಮೃತ ವೃದ್ಧರು ಗೊಜ್ವಾ ಗ್ರಾಮದಕ್ಕೆ ಸೇರಿದವರಾಗಿದ್ದು ಜನರಲ್ಲಿ ಭಯದ ವಾತಾವರಣ ಸೃಷ್ಠಿಸುವುದು ಉಗ್ರರ ಗುರಿಯಾಗಿದೆ ಎಂದು ಸೈನಿಕರು ತಿಳಿಸಿದ್ದಾರೆ. ಇದೇ ವರ್ಷದಲ್ಲಿ 200ಕ್ಕೂ ಹೆಚ್ಚು ಮಕ್ಕಳನ್ನು ಇದೇ ಉಗ್ರ ಸಂಘಟನೆ ಅಪಹರಿಸಿತ್ತು. ಫೆಬ್ರವರಿಯಲ್ಲಿ ಶಾಲೆಗೆ ನುಗ್ಗಿ 59 ವಿದ್ಯಾರ್ಥಿಗಳನ್ನು ಕಗ್ಗೊಲೆ ನಡೆಸಿದ್ದರು.
ನೈಜೀರಿಯಾದಲ್ಲಿ ಹೋರಾಟ ನಡೆಸುತ್ತಿರುವ ಬೊಕೊ ಹರ್ಮನ್ ಉಗ್ರ ಸಂಘಟನೆ ಆಧುನಿಕ ಶಿಕ್ಷಣದ ವಿರೋಧಿಯಾಗಿದೆ. ಇಸ್ಲಾಮಿಕ್ ಶಿಕ್ಷಣ ಪದ್ದತಿ ಮತ್ತು ಷರಿಯಾ ಕಾನೂನಿನಂತೆ ಶಿಕ್ಷಣ ನಡೆಸಬೇಕೆಂದು ಪಟ್ಟು ಹಿಡಿದಿರುವ ಇವರು ಇದಕ್ಕೆ ವಿರೋಧಿಸುತ್ತಿರುವವರನ್ನು ಗುರಿಯಾಗಿಸಿ ಹತ್ಯೆ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳನ್ನೇ ಗುರಿಯಾಗಿಸಿ ಕೃತ್ಯ ನಡೆಸುತ್ತಿರುವ ಈ ಗುಂಪು ಈಗ ಜನ ಸಾಮಾನ್ಯರ ಮೇಲೂ ದಾಳಿ ನಡೆಸುತ್ತಿದೆ.