ರೂರ್ಕಿ : ಉತ್ತರಾಖಂಡ್ ನ ರೂರ್ಕಿ ಪ್ರದೇಶದಲ್ಲಿನ ದಾವ್ ಕಾಲೇಜು ಆವರಣದಲ್ಲಿ ಬಾಂಬ್ ಸ್ಫೋಟ ಸಂಭವಿಸಿದ್ದು, ಓರ್ವ ಬಾಲಕ ಸಾವನ್ನಪ್ಪಿದ್ದಾನೆ.
ಶಾಲೆಯ ಪಕ್ಕದಲ್ಲಿದ್ದ ಕಸದ ತೊಟ್ಟಿಯಲ್ಲಿ ಬಾಂಬ್ ಸ್ಫೋಟ ಸಂಭವಿಸಿದ್ದು, 6ನೇ ತರಗತಿಯ ಬಾಲಕ ಸ್ಫೋಟಕ್ಕೆ ಬಲಿಯಾಗಿದ್ದಾನೆ. ಮೃತ ಬಾಲಕ, ಶಾಲೆಯ ಪಕ್ಕದ ಕಸದ ತೊಟ್ಟಿಯಲ್ಲಿದ್ದ ಪೊಟ್ಟಣವನ್ನು ತಂದಾಗ, ಸ್ಫೋಟ ಸಂಭವಿಸಿತು ಎಂದು ಶಾಲಾ ಮಕ್ಕಳು ತಿಳಿಸಿದ್ದಾರೆ.
ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಉತ್ತರಖಂಡ್ ಮುಖ್ಯಮಂತ್ರಿ ಹರೀಶ್ ರಾವತ್, ಸಾರ್ವಜನಿಕರು ಶಾಂತಿ ಕಾಪಾಡುವಂತೆ ಮನವಿ ಮಾಡಿದರು. ಅಲ್ಲದೆ ಪೊಲೀಸರ ತನಿಖೆಗೆ ಸಾರ್ವಜನಿಕರು ಸಹಕರಿಸುವಂತೆ ಕೋರಿದ್ದಾರೆ.
ಬಿಜೆಪಿ ನಾಯಕ ಸಂಗೀತ್ ಸೋಮ್, ದಾವ್ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಭಾಗವಹಿಸಲು ಆಗಮಿಸುವ ಮುನ್ನ ಈ ಸ್ಫೋಟ ಸಂಭವಿಸಿದ್ದು, ಸಂಗೀತ್ ಸೋಮ್ ಅವರನ್ನು ಗುರಿಯನ್ನಾಗಿಸಿ ಬಾಂಬ್ ಸ್ಪೋಟ ನಡೆಸಲು ದುಷ್ಕರ್ಮಿಗಳು ಸಂಚು ರೂಪಿಸಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.