ಪಾಟ್ನಾ : ಬಿಹಾರ ಮುಖ್ಯಮಂತ್ರಿ ಜಿತನ್ ರಾಂ ಮಾಂಝಿ ಶೀಘ್ರದಲ್ಲಿಯೇ ತಮ್ಮ ಹುದ್ದೆ ಕಳೆದುಕೊಳ್ಳುವ ಸಾಧ್ಯತೆಯಿದೆ.
ಇತ್ತೀಚೆಗೆ ಅವರು ನೀಡಿದ ಹೇಳಿಕೆಯು ಅವರ ಮುಖ್ಯಮಂತ್ರಿ ಕುರ್ಚಿಗೆ ಕುತ್ತು ತರುವ ಎಲ್ಲ ಸಾಧ್ಯತೆಯೂ ಎದುರಾಗಿದೆ. ಇದನ್ನು ಸ್ವತಃ ಮಾಂಝಿ ಅವರೇ ಒಪ್ಪಿಕೊಂಡಿದ್ದಾರೆ. ನಾನು ನವೆಂಬರ್ ಅಂತ್ಯದವರೆಗೂ ಮುಖ್ಯಮಂತ್ರಿ ಹುದ್ದೆಯಲ್ಲಿರುವುದು ಅನುಮಾನ ಎಂದು ಅವರೇ ಹೇಳಿದ್ದಾರೆ.
ಕೇಂದ್ರ ಸರ್ಕಾರವು ಬಿಹಾರಕ್ಕೆ ವಿಶೇಷ ರಾಜ್ಯ ಸ್ಥಾನಮಾನ ನೀಡಿದ್ದೇ ಆದಲ್ಲಿ ನಾನು ಪ್ರಧಾನಿ ನರೇಂದ್ರ ಮೋದಿ ಅವರ ಬೆಂಬಲಿಗನಾಗುತ್ತೇನೆ ಎಂದು ಇತ್ತೀಚೆಗಷ್ಟೇ ಮಾಂಝಿ ಘೋಷಿಸಿದ್ದರು. ಜತೆಗೆ ನಾನೂ ಒಂದು ದಿನ ದೇಶದ ಪ್ರಧಾನಿ ಹುದ್ದೆಗೇರುತ್ತೇನೆ ಎಂದೂ ಹೇಳಿದ್ದರು. ಮಾಂಝಿ ಅವರ ಈ ಹೇಳಿಕೆಯು ಜೆಡಿಯು ನಾಯಕರ ಕಣ್ಣುಕೆಂಪಗಾಗಿಸಿತ್ತು.