ಜಮ್ಮು-ಕಾಶ್ಮೀರ : 'ಪಾಕಿಸ್ತಾನ' ಸೇನಾ ಪಡೆ ಮತ್ತೆ ಕದನ ವಿರಾಮ ಉಲ್ಲಂಘನೆ ಮಾಡಿದೆ. ಅ.16ರ ಮಧ್ಯ ರಾತ್ರಿ ಭಾರತೀಯ ಸೈನಿಕರ ಮೇಲೆ ಗುಂಡಿನ ದಾಳಿ ನಡೆಸುವ ಮೂಲಕ ಕದನ ವಿರಾಮ ಉಲ್ಲಂಘನೆ ಮಾಡಿದೆ.
ಜಮ್ಮು-ಕಾಶ್ಮೀರದ ಹಮಿರಪುರ ಸೆಕ್ಟರ್ ನಲ್ಲಿ ಪಾಕ್ ಸೈನಿಕರು ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದಾರೆ. ಸುಮಾರು 90 ನಿಮಿಷಗಳ ಕಾಲ ಗಡಿ ಪ್ರದೇಶದಲ್ಲಿ ಫೈರಿಂಗ್ ನಡೆದಿದೆ. ಘಟನೆಯಲ್ಲಿ ಯಾರಿಗೂ ಗಾಯಗಳುಂಟಾಗಿಲ್ಲ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಶನಿವಾರ ಸಹ ಪಾಕಿಸ್ತಾನ ಸೇನೆ ಗಡಿಯಲ್ಲಿ ಕದನ ವಿರಾಮ ಉಲ್ಲಂಘನೆ ಮಾಡಿತ್ತು. ಅಪ್ರಚೋದಿತ ದಾಳಿಗೆ ಭಾರತದ ಸೈನಿಕರೂ ಪ್ರತಿ ದಾಳಿ ನಡೆಸುತ್ತಿದ್ದಾರೆ.
ಭಾರತೀಯ ಸೇನೆ ಪಾಕ್ ಗೆ ತಕ್ಕ ಉತ್ತರ ನೀಡಿದರೂ ಅಕ್ಟೋಬರ್ ತಿಂಗಳಲ್ಲಿ ಪಾಕ್ ಸೇನೆ ಹಲವು ಬಾರಿ ಕದನ ವಿರಾಮ ಉಲ್ಲಂಘನೆಯನ್ನು ಮುಂದುವರೆಸಿದೆ.