ಕೊಪ್ಪಳ : ಶಸ್ತ್ರ ಪರವಾನಿಗೆ ನವೀಕರಣಗೊಳಿಸಿದ ಹಿನ್ನಲೆಯಲ್ಲಿ 21 ಜನರ ಶಸ್ತ್ರ ಪರವಾನಿಗೆಯನ್ನು ರದ್ದುಗೊಳಿಸಿ ಕೊಪ್ಪಳ ಜಿಲ್ಲಾಧಿಕಾರಿ ಆರ್.ಆರ್.ಜನ್ನು ಆದೇಶ ಹೊರಡಿಸಿದ್ದಾರೆ.
ಭಾರತೀಯ ಶಸ್ತ್ರ ಕಾಯ್ದೆ 1959ರಡಿಯಲ್ಲಿ ಶಸ್ತ್ರ ಪರವಾನ್ನಿಗೆಯನ್ನು ರದ್ದು ಮಾಡಿ ಆದೇಶ ಹೊರಡಿಸಲಾಗಿದ್ದು, ಶಸ್ತ್ರ ಪರವಾನಿಗೆ ನವೀಕರಿಸದ 21 ಜನರ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯುವಂತೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ಇಲಾಖೆಗೆ ಕಟ್ಟು ನಿಟ್ಟಿನ ಸೂಚನೆ ನಿಡಿದ್ದಾರೆ.
ಮಾಜಿ ಶಾಸಕರು, ಮಾಜಿ ಐಎ ಎಸ್ ಅಧಿಕಾರಿಗಳು ಶಸ್ತ್ರ ಪರವಾನಿಗೆ ನವೀಕರಣಗೊಳಿಸದ ಮಾಹಿತಿ ಹಿನ್ನಲೆಯಲ್ಲಿ ಅವರ ಪರವಾನಿಗೆಯನ್ನು ರದ್ದುಗೊಳಿಸಲಾಗಿದೆ.