ನವದೆಹಲಿ : ರಾಷ್ಟ್ರಾದ್ಯಂತ ಮಹಾತ್ಮಾ ಗಾಂಧಿ ಜನ್ಮದಿನಾಚರಣೆಗೆ ಸಿದ್ಧತೆ ನಡೆಯುತ್ತಿರುವ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ವಿನೂತನವಾಗಿ ರಾಷ್ಟ್ರಪಿತನ ಜನ್ಮದಿನಾಚರಣೆ ಆಚರಿಸಲು ಸರ್ಕಾರಿ ಅಧಿಕಾರಿಗಳಿಗೆ ಕರೆ ನೀಡಿದ್ದಾರೆ.
ಸರ್ಕಾರಿ ಕಚೇರಿಗಳಲ್ಲಿ ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಮಹಾತ್ಮ ಗಾಂಧಿ ಅವರ ಜನ್ಮದಿನಾಚರಣೆ ಆಚರಿಸಬೇಕೆಂದು ಪ್ರಧಾನಿ ಮೋದಿ, ಸರ್ಕಾರಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಕಚೇರಿಗಳನ್ನು ಮಾತ್ರವಲ್ಲದೇ ಸರ್ಕಾರಿ ಅಧಿಕಾರಿಗಳು ಬಳಸುವ ಶೌಚಾಲಯಗಳನ್ನೂ ಸ್ವಚ್ಛಗೊಳಿಸುವಂತೆಯೂ ಪ್ರಧಾನಿ ಮೋದಿ ಆದೇಶಿಸಿದ್ದಾರೆ.
ಇದೇ ವೇಳೆ ಮಹಾತ್ಮ ಗಾಂಧಿ ಜಯಂತಿ ಅಂಗವಾಗಿ ಪರಿಸರದಲ್ಲಿ ಸ್ವಚ್ಛತೆ ಕಾಪಾಡುವುದಾಗಿ ಪ್ರತಿಜ್ನೆ ಮಾಡಬೇಕೆಂದೂ ಪ್ರಧಾನಿ ಮೋದಿ ಹೇಳಿದ್ದಾರೆ.
2019ರ ವೇಳೆಗೆ ಭಾರತವನ್ನು ಸಂಪೂರ್ಣ ಸ್ವಚ್ಛ ರಾಷ್ಟ್ರವನ್ನಾಗಿ ಮಾಡುವ ಉದ್ದೇಶದಿಂದ ಅ.2ರಂದು ಪ್ರಧಾನಿ ನರೇಂದ್ರ ಮೋದಿ ಸ್ವಚ್ಛ ಭಾರತ್ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ.