ನವದೆಹಲಿ : 'ಇಸ್ಲಾಂ' ಗೆ ಮತಾಂತವಾಗುವಂತೆ ಒತ್ತಾಯ ಮಾಡುವ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಕ್ರೀಡಾ ಕ್ಷೇತ್ರಕ್ಕೂ ಕಾಲಿಟ್ಟಿದೆ.
ಅಂತಾರಾಷ್ಟ್ರೀಯ ಶೂಟಿಂಗ್ ಚಾಂಪಿಯನ್ ತಾರಾ ಸಹದೇವ್ ಅವರನ್ನು ಇಸ್ಲಾಂ ಗೆ ಮತಾಂತರವಾಗುವಂತೆ ಪತಿಯೇ ಪೀಡಿಸುತ್ತಿದ್ದ ಘಟನೆ ಬೆನ್ನಲ್ಲೇ ಪಾಕಿಸ್ತಾನ ಕ್ರಿಕೆಟಿಗ ಶ್ರೀಲಂಕಾದ ಕ್ರಿಕೆಟ್ ಆಟಗಾರನಿಗೆ ಇಸ್ಲಾಂ ಗೆ ಮತಾಂತರವಾಗುವಂತೆ ಒತ್ತಾಯಿಸಿರುವುದು ಬೆಳಕಿಗೆ ಬಂದಿದೆ.
ಇತ್ತೀಚೆಗಷ್ಟೇ ನಡೆದ ಪಾಕಿಸ್ತಾನ-ಶ್ರೀಲಂಕಾ ನಡುವಿನ ಏಕ ದಿನ ಪಂದ್ಯಾವಳಿಯಲ್ಲಿ ಪಾಕಿಸ್ತಾನ ತಂಡದ ಆಟಗಾರ ಅಹಮದ್ ಶೇಜಾದ್, ಶ್ರೀಲಂಕಾ ಆಟಗಾರ ತಿಲಕರತ್ನೆ ದಿಲ್ಶನ್ ಅವರನ್ನು ಇಸ್ಲಾಂ ಧರ್ಮಕ್ಕೆ ಮತಾಂತರವಾಗುವಂತೆ ಒತ್ತಾಯಿಸಿದ್ದಾನೆ.
ಕ್ರೀಡಾಂಗಣದಿಂದ ಡ್ರೆಸ್ಸಿಂಗ್ ರೂಂ ಗೆ ತೆರಳುತ್ತಿದ್ದ ಸಂದರ್ಭದಲ್ಲಿ, ನೀನು ಕಾಫಿರನಾಗಿದ್ದು( ಮುಸ್ಲಿಮೇತರ) ಇಸ್ಲಾಂ ಗೆ ಮತಾಂತರವಾದರೆ ಏನು ಮಾಡಿದರೂ ಸೀದಾ ಸ್ವರ್ಗಕ್ಕೆ ಹೋಗುವೆ ಎಂದು ತಿಲಕರತ್ನೆ ದಿಲ್ಶನ್ ಗೆ ಅಹಮದ್ ಶೇಜಾದ್ ಹೇಳಿದ್ದಾನೆ. ಈ ಹೇಳಿಕೆ ತೀವ್ರ ವಿವಾದಕ್ಕೆ ಗ್ರಾಸವಾಗಿದ್ದು, ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಹಮದ್ ಶೇಜಾದ್ ನ್ನು ವಿಚಾರಣೆಗೆ ಒಳಪಡಿಸಿದೆ.