ನವದೆಹಲಿ : 'ಬಿಜೆಪಿ' ಸಂಸದೀಯ ಮಂಡಳಿಯಿಂದ ಎಲ್.ಕೆ ಅಡ್ವಾಣಿ ಸೇರಿದಂತೆ ಕೆಲವು ಹಿರಿಯರಿಗೆ ಕೊಕ್ ನೀಡಲಾಗಿದೆ. ಈ ಮೂಲಕ ಬಿಜೆಪಿಯಲ್ಲಿ ಅಡ್ವಾಣಿ, ಮುರಳಿ ಮನೋಹರ ಜೋಷಿ, ಅಟಲ್ ಬಿಹಾರಿ ವಾಜಪೇಯಿ ಅವರ ಯುಗ ಅಂತ್ಯವಾಗಿದೆ.
ಬಿಜೆಪಿ ನೂತನ ರಾಷ್ಟ್ರಾಧ್ಯಕ್ಷ ಅಮಿತ್ ಶಾ ನೇತೃತ್ವದಲ್ಲಿ ಆ.26ರಂದು ನಡೆದ ಸಭೆಯಲ್ಲಿ ಸಂಸದೀಯ ಮಂಡಳಿಯನ್ನು ಪುನಾರಚಿಸಲಾಯಿತು. ನೂತನ ಸಂಸದೀಯ ಮಂಡಳಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದ್ದು, 80ವರ್ಷ ವಯಸ್ಸು ದಾಟಿದ, ಎಲ್.ಕೆ.ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಷಿ ಅಟಲ್ ಬಿಹಾರಿ ವಾಜಪೇಯಿ ಅವರಂತಹ ಹಿರಿಯರನ್ನು ಕೈ ಬಿಡಲಾಗಿದೆ.
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಪಕ್ಷದ 12 ಪ್ರಮುಖ ನಾಯಕರನ್ನೊಳಗೊಂಡ ನೂತನ ಮಂಡಳಿಯನ್ನು ತಯಾರಿಸಲಾಗಿದೆ. ಸಂಸದೀಯ ಮಂಡಳಿಯಲ್ಲಿ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೂ ಸ್ಥಾನ ನೀಡಲಾಗಿದೆ.
ಅಟಲ್ ಬಿಹಾರಿ ವಾಜಪೇಯಿ, ಮುರಳಿ ಮನೋಹರ್ ಜೋಷಿ, ಎಲ್.ಕೆ ಅಡ್ವಾಣಿ ಮುರಳಿಮನೋಹರ ಜೋಷಿ ಅವರು ಪಕ್ಷದ ಸಲಹೆಗಾರರಾಗಿ ಮುಂದುವರೆಯಲಿದ್ದಾರೆ.