ಇರಾನ್ : 'ಇರಾನ್' ನ ಮೆಹ್ರಾಬಾದ್ ಏರ್ ಪೋರ್ಟ್ ನಲ್ಲಿ ಜೆಟ್ ವಿಮಾನ ಪತನಗೊಂಡಿದ್ದು 40 ಮಂದಿ ದುರ್ಮರಣ ಹೊಂದಿದ್ದಾರೆ. ಭಾನುವಾರ, ಆ.10ರ ಬೆಳಿಗ್ಗೆ ಈ ದುರ್ಘಟನೆ ಸಂಭವಿಸಿದೆ.
ಇರಾನ್ ನ ಟೆಹ್ರಾನ್ ಬಳಿಯ ಮೆಹ್ರಾಬಾದ್ ಏರ್ ಪೋರ್ಟ್ ಏರ್ಪೋರ್ಟ್ ಬಳಿ ಇರಾನ್-141 ಏರ್ ಜೆಟ್ ಲೈನರ್ ವಿಮಾನ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲೇ ವಿಮಾನ ಪತನಗೊಂಡಿದೆ.
ಜೆಟ್ ವಿಮಾನ ಟೇಕ್ಆಫ್ ಆಗುತ್ತಿದ್ದಂತೆ ಬೆಂಕಿ ಕಾಣಿಸಿಕೊಂಡು, ಬೆಂಕಿಯ ತೀವ್ರತೆಗೆ ಜೆಟ್ನ ಎಂಜಿನ್ ಸ್ಫೋಟಗೊಂಡಿದೆ. ಇದರಿಂದಾಗಿ ವಿಮಾನ ಧರೆಗುರುಳಿದೆ. ವಿಮಾನ ಅಪಘಾತಕ್ಕೀಡಾಗುತ್ತಿದ್ದಂತೆ ರಕ್ಷಣಾ ಕಾರ್ಯಾಚರಣೆಗೆ ಮುಂದಾದ ರಕ್ಷಣ ಸಿಬ್ಬಂದಿ ಅವಶೇಷಗಳಡಿಯಿಂದ 10 ಮೃತದೇಹವನ್ನು ಹೊರಕ್ಕೆ ತೆಗೆದಿದ್ದಾರೆ.