Untitled Document
Sign Up | Login    
Dynamic website and Portals
  
August 9, 2014

ಟೀ ಮಾರುವವನೂ ಪ್ರಧಾನಿಯಾಗಬಹುದೆಂಬುದನ್ನು ಮೋದಿ ತೋರಿಸಿದ್ದಾರೆ: ಅಮಿತ್ ಶಾ

ನವದೆಹಲಿ : ಟೀ ಮಾರುವವನೂ ಪ್ರಧಾನಿಯಾಗಬಹುದೆಂಬುದನ್ನು ಮೋದಿ ತೋರಿಸಿದ್ದಾರೆ: ಅಮಿತ್ ಶಾ
ಒಬ್ಬ ಟೀ ಮಾರುವವನು ದೇಶದ ಪ್ರಧಾನಿಯಾಗಬಹುದು ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಸಾಧಿಸಿ ತೋರಿಸಿದ್ದಾರೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ತಿಳಿಸಿದ್ದಾರೆ.

ದೆಹಲಿಯಲ್ಲಿ ನಡೆಯುತ್ತಿರುವ ಬಿಜೆಪಿ ರಾಷ್ಟ್ರೀಯ ಪರಿಷತ್ ಸಭೆಯಲ್ಲಿ ಮಾತನಾಡಿದ ಅವರು, ಒಬ್ಬ ಸಾಮಾನ್ಯ ವ್ಯಕ್ತಿ ಕೂಡ ದೇಶದ ಪ್ರಧಾನಿಯಾಗಬಹುದು. ಇದರ ಬಗ್ಗೆ ದೇಶದ ಜನತೆ ವಿಶ್ವಾಸವಿಟ್ಟುಕೊಳ್ಳಬಹುದು ಎಂದರು.

ನನ್ನ ಮೇಲೆ ಭರವಸೆ ಇಟ್ಟು ನನ್ನನ್ನು ರಾಷ್ಟ್ರಾಧ್ಯಕ್ಷರನ್ನಾಗಿ ಮಾಡಿ ಉನ್ನತವಾದ ಜವಾಬ್ದಾರಿಯನ್ನು ನನಗೆ ನೀಡಿರುವುದಕ್ಕೆ ಬಿಜೆಪಿ ನಾಯಕರಿಗೆ ಧ್ಯನ್ಯವಾದ ತಿಳಿಸುತ್ತೇನೆ. ಅವರ ವಿಶ್ವಾಸವನ್ನು ನಾನು ಉಳಿಸಿಕೊಳ್ಳುತ್ತೇನೆ. ಬಿಜೆಪಿಯ ಸಾಮಾನ್ಯ ಕಾರ್ಯಕರ್ತ ಇಂದು ರಾಷ್ಟ್ರಾಧ್ಯಕ್ಷನಾಗಿದ್ದೇನೆ ಎಂದರು.

ದೇಶದ ಉದ್ದಗಲಕ್ಕೂ ಬಿಜೆಪಿ ಸಂಘಟಿಸುವ ಅಗತ್ಯವಿದೆ. ದೇಶ ಇನ್ನೂ ಕಾಂಗ್ರೆಸ್ ಮುಕ್ತ ರಾಷ್ಟ್ರವಾಗಿಲ್ಲ. ಕಾಂಗ್ರೆಸ್ ಮುಕ್ತವನ್ನಾಗಿಸಬೇಕಿದೆ. ಅಭಿಯಾನದ ಮೂಲಕ ದೇಶ ಕಟ್ಟುವ ಕೆಲಸವಾಗಬೇಕು. ಗೆಲುವು ಅಭಿಯಾನದ ಅಂತ್ಯವಲ್ಲ, ಆರಂಭವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಲೋಕಸಭಾ ಚುನಾವಣೆಯಲ್ಲಿ ಪಕ್ಷ ಅಭೂತಪೂರ್ವ ಗೆಲುವು ಸಾಧಿಸಲು ನರೇಂದ್ರ ಮೋದಿ, ರಾಜನಾಥ್ ಸಿಂಗ್ ಅವರ ಜೋಡಿ ಕಾರಣ.ಈ ಜೋಡಿ ಬಿಜೆಪಿಯ ಕನಸು ನನಸುಮಾಡಿದೆ. ಅವರಿಗೆ ಹೃದಯಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಆ.15ರಂದು ಬಿಜೆಪಿ ಕೇಂದ್ರ ಕಛೇರಿಯಲ್ಲಿ ಸ್ವಾತಂತ್ರ್ಯ ದಿನೋತ್ಸವ ಆಚರಿಸುತ್ತೇವೆ ಎಂದ ಶಾ, ಅಂದು ಪಕ್ಷದ ಕಾರ್ಯಕರ್ತರು ದ್ವಜಾರೋಹಣ ಮಾಡಲಿದ್ದಾರೆ ಎಂದು ತಿಳಿಸಿದರು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited