ನವದೆಹಲಿ : ನೊಬೆಲ್ ಪ್ರಶಸ್ತಿ ಪುರಸ್ಕೃತ ಸಾಹಿತಿ ರವೀಂದ್ರನಾಥ್ ಠಾಗೂರ್ ಅವರ 155 ನೇ ಜನ್ಮದಿನದ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಠಾರೂರರಿಗೆ ಗೌರವಾರ್ಪಣೆ ಮಾಡಿದ್ದಾರೆ.
ರವೀಂದ್ರನಾಥ್ ಠಾಗೂರರ ಜನ್ಮದಿನದ ಅಂಗವಾಗಿ ಗುರುದೇವ್ ಠಾಗೂರ್ ಅವರಿಗೆ ವಂದನೆ ಸಲ್ಲಿಸುವೆ, ಬಹುಮುಖ ವ್ಯಕ್ತಿತ್ವ ಹೊಂದಿದ್ದ ಠಾಗೂರರ ಚಿಂತನೆಗಳು, ಬರಹಗಳು ಸ್ಪೂರ್ತಿದಾಯಕ ಎಂದು ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
1861 ರ ಮೇ.7 ರಂದು ಜನಿಸಿದ್ದ ರವಿಂದ್ರನಾಥ್ ಠಾರೂರ್ ಅವರಿಗೆ 1913 ರಲ್ಲಿ ನೋಬೆಲ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.