Untitled Document
Sign Up | Login    
Dynamic website and Portals
  
May 1, 2015

ಅಫ್ಘಾನ್ ನಲ್ಲಿ ಐಸಿಸ್ ಚಟುವಟಿಕೆ ಭಾರತಕ್ಕೆ ಆತಂಕಕಾರಿ: ರಾ ಎಚ್ಚರಿಕೆ

ನವದೆಹಲಿ : ರಾಕ್ ನಲ್ಲಿ ಮೊಸುಲ್ ನಗರವನ್ನು ವಶಪಡಿಸಿಕೊಂಡಿರುವ ಐಸಿಸ್ ಉಗ್ರರು ಮತ್ತಷ್ಟು ಬಲಗೊಂಡಿದ್ದು, ತಮ್ಮ ಸಂಘಟನೆಯನ್ನು ವಿದೇಶಗಳಲ್ಲಿಯೂ ವಿಸ್ತರಿಸಲು ಮುಂದಾಗಿರುವುದು ಭಾರತಕ್ಕೆ ಆತಂಕಕಾರಿ ಎಂದು ಭಾರತೀಯ ಗುಪ್ತಚರ ಇಲಾಖೆ ರಾ ಹೇಳಿದೆ.

ಮೂಲಗಳ ಪ್ರಕಾರ ರಾ (ರಿಸರ್ಚ್ ಆಂಡ್ ಎನಲೈಸಸ್ ವಿಂಗ್) ಈ ಕುರಿತು ಪ್ರಧಾನಿ ಮಂತ್ರಿಗಳ ಕಚೇರಿಗೆ ವರದಿ ನೀಡಿದ್ದು, ಆಫ್ಘಾನಿಸ್ತಾನದಲ್ಲಿ ಇಸಿಸ್ ಚಟುವಟಿಕೆ ಭಾರತದ ಸುರಕ್ಷತೆಯ ದೃಷ್ಟಿಯಿಂದ ಆತಂಕಕಾರಿ ಎಂದು ಹೇಳಿದೆ.

ಆಫ್ಘಾನಿಸ್ತಾನದಲ್ಲಿ ಐಸಿಸ್ ದಿನೇ ದಿನೇ ಬೆಳೆಯುತ್ತಿದ್ದು, ಇದು ನಂತರ ಪಾಕಿಸ್ತಾನ, ಬಳಿಕ ಭಾರತದ ಗಡಿಗೂ ಬಂದರೂ ಅಚ್ಚರಿ ಇಲ್ಲ ಎಂದು ರಾ ತನ್ನ ವರದಿಯಲ್ಲಿ ಅಭಿಪ್ರಾಯಪಟ್ಟಿದೆ.

ರಾಕ್ ನಲ್ಲಿ ತನ್ನ ಕಬಂದ ಬಾಹು ಚಾಚಿರುವ ಉಗ್ರ ಸಂಘಟನೆ ಐಸಿಸ್ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಪ್ರಭಾವ ಬೀರಲು ಹೊರಟಿದೆ. ಇದರ ಮೊದಲ ಹಂತವಾಗಿ ಆಫ್ಘಾನಿಸ್ತಾನದಲ್ಲಿ ತನ್ನ ಕಾರ್ಯಾಚರಣೆಗೆ ಐಸಿಸ್ ಈಗಾಗಲೇ ಚಾಲನೆ ನೀಡಿದೆ. ಆತಂಕಕಾರಿ ವಿಚಾರವೆಂದರೆ ಆಫ್ಘಾನಿಸ್ತಾನದ ಕೆಲ ಬುಡಕಟ್ಟು ಉಗ್ರ ಸಂಘಟನೆಗಳು ಐಸಿಸ್ ಗೆ ಬೆಂಬಲ ನೀಡುತ್ತಿವೆ. ಸ್ಥಳೀಯ ಉಗ್ರ ಸಂಘಟನೆಗಳ ಬೆಂಬಲ ಪಡೆದ ಐಸಿಸ್ ಆ ದೇಶದಲ್ಲಿ ತನ್ನ ಪ್ರಾಬಲ್ಯ ಮೆರೆಯಲು ಹವಣಿಸುತ್ತಿದೆ. ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ ಆಫ್ಘಾನಿಸ್ತಾನದಲ್ಲಿ ನಡೆದ ಆತ್ಮಹತ್ಯಾ ಬಾಂಬ್ ದಾಳಿ ಇದಕ್ಕೆ ಪ್ರಮುಖ ನಿದರ್ಶನವಾಗಿದ್ದು, ಈ ಬಾಂಬ್ ದಾಳಿಯನ್ನು ನಡೆಸಿದ್ದೇ ಐಸಿಸ್ ಎಂದು ಹೇಳಲಾಗುತ್ತಿದೆ.

ಹೀಗಾಗಿ ಐಸಿಸ್ ಇದೀಗ ಕ್ರಮೇಣ ಆಫ್ಘಾನಿಸ್ತಾನದಲ್ಲಿ ಕಾಲಿಟ್ಟಿದ್ದು, ಬಳಿಕ ಪಾಕಿಸ್ತಾನಿ ಉಗ್ರ ಸಂಘಟನೆಗಳೊಂದಿಗೆ ಕೈ ಜೋಡಿಸಿ ಭಾರತದಲ್ಲಿಯೂ ತನ್ನ ಉಗ್ರ ದಾಳಿ ನಡೆಸುವ ಹುನ್ನಾರ ನಡೆಸಿದೆ. ಈಗಾಗಲೇ ಆಲ್ ಖೈದಾ ಮತ್ತು ಕೆಲ ತಾಲಿಬಾನ್ ಉಗ್ರ ಸಂಘಟನೆಗಳು ಬಹಿರಂಗವಾಗಿ ಐಸಿಸ್ ಗೆ ಬೆಂಬಲ ಘೋಷಿಸಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಆತಂಕಕಾರಿಗೊಳಿಸಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : General

ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
  • ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
  • ದೇಶಿ ನಿರ್ಮಿತ ಮೂರನೇ ಜಲಾಂತರ್ಗಾಮಿ ನೌಕೆ ಪ್ರಾಜೆಕ್ಟ್‌ 28ರ ಅಡಿಯಲ್ಲಿ ನಿರ್ಮಾಣಗೊಂಡ ಐಎನ್‌ಎಸ್‌ ಕಿಲ್ತಾನ್‌ ನೌಕೆಯನ್ನು ವಿಶಾಖಪಟ್ಟಣದ ನೌಕಾ ನೆಲೆಯಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಲೋಕಾರ್ಪಣೆ ಮಾಡಿದರು.
  • ಆರುಷಿ ಹತ್ಯೆ ಪ್ರಕರಣ: ತಲ್ವಾರ್ ದಂಪತಿಗಳು ಖುಲಾಸೆ;ಅಲಹಾಬಾದ್ ಹೈಕೋರ್ಟ್ ತೀರ್ಪು
  • ಅ.12ರ ಮಧ್ಯ ರಾತ್ರಿಯಿಂದ ಪೆಟ್ರೋಲ್ ಬಂಕ್ ಬಂದ್
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited