Untitled Document
Sign Up | Login    
Dynamic website and Portals
  
March 31, 2015

ಖೋಟಾ ನೋಟು ಚಲಾವಣೆ: ಆರು ಮಂದಿ ಬಂಧನ

K R Puram : 'ಪಾಕಿಸ್ತಾನ'ದಲ್ಲಿ ಮುದ್ರಿಸಿದ್ದ ಖೋಟಾ ನೋಟುಗಳನ್ನು ಬಾಂಗ್ಲಾ ಮೂಲಕ ಭಾರತದಲ್ಲಿ ಚಲಾವಣೆ ಮಾಡುತ್ತಿದ್ದ ಜಾಲವನ್ನು ಬೆಂಗಳೂರು ಪೊಲೀಸರು ಪತ್ತೆ ಹಚ್ಚಿದ್ದು 6 ಮಂದಿಯನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳು ಪಾಕಿಸ್ತಾನದಲ್ಲಿ ಮುದ್ರಣವಾಗುತ್ತಿದ್ದ ಖೋಟಾ ನೋಟುಗಳನ್ನು ಬಾಂಗ್ಲಾ ಹಾಗೂ ಪಶ್ಚಿಮ ಬಂಗಾಳದ ಮೂಲಕ ಭಾರತದಲ್ಲಿ ಯಶಸ್ವಿಯಾಗಿ ಚಲಾವಣೆ ಮಾಡುತ್ತಿದ್ದರು. ಪಶ್ಚಿಮ ಬಂಗಾಳದ ಸಾಬೀರ್ ಅಲಿ (23), ಮಸೂದ್ (18), ಗೌರಿಬಿದನೂರಿನ ಅಫ್ರೋಜ್ (41), ಮೈಸೂರಿನ ಆಸಿಫ್‌ ವುಲ್ಲಾಖಾನ್, ಮಹೀಬ್‌ ವುಲ್ಲಾಖಾನ್ (31) ಮತ್ತು ಬೆಂಗಳೂರಿನ ಕೆ.ಜೆ ಹಳ್ಳಿಯ ಸಯ್ಯದ್ ಆಸಿಫ್ (21) ಬಂಧಿತ ಆರೋಪಿಗಳು.

ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ಆರೋಪಿಗಳಿಂದ 9.13 ಲಕ್ಷ ರೂ. ಮೌಲ್ಯದ 1000ರೂ. ಮುಖಬೆಲೆಯ 399 ಖೋಟಾನೋಟುಗಳು ಹಾಗೂ 500ರೂ. ಮುಖಬೆಲೆಯ 1028 ಖೋಟಾನೋಟುಗಳನ್ನು ಮತ್ತು 1.72 ಲಕ್ಷ ರೂ. ನಗದು, ಟಾಟಾ ಇಂಡಿಗೋ ಕಾರು, 10 ಮೊಬೈಲ್‌ಗಳು ಹಾಗೂ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮಹದೇವಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕೆ.ಆರ್.ಪುರಂ ರೈಲು ನಿಲ್ದಾಣದ ಮುಂಭಾಗದಲ್ಲಿರುವ ಫ್ಲೈ ಓವರ್ ಸಮೀಪದ ಎ.ನಾರಾಯಣಪುರ ಜಂಕ್ಷನ್ ಬಳಿ ಸಿಲ್ವರ್ ಬಣ್ಣದ ಟಾಟಾ ಇಂಡಿಗೋ ಕಾರ್ ನಲ್ಲಿ ಬಂದಿದ್ದ ಈ ಆರೂ ಮಂದಿ ಖೋಟಾನೋಟು ಚಲಾವಣೆ ಮಾಡಲು ಯತ್ನಿಸುತ್ತಿದ್ದರು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Crime

ಸಿಲಿಂಡರ್ ಸ್ಫೋಟಗೊಂಡು ಕಟ್ಟಡ ಕುಸಿತ: ಸಾವಿನ ಸಂಖ್ಯೆ ಐದಕ್ಕೆ ಏರಿಕೆ
  • ಸಿಲಿಂಡರ್ ಸ್ಫೋಟಗೊಂಡು ಕಟ್ಟಡ ಕುಸಿತ: ಸಾವಿನ ಸಂಖ್ಯೆ ಐದಕ್ಕೆ ಏರಿಕೆ
  • ಬೆಂಗಳೂರಿನ ಮೂರು ಅಂತಸ್ತಿನ ಕಟ್ಟಡವೊಂದರಲ್ಲಿ ಸಿಲಿಂಡರ್ ಸ್ಫೋಟಗೊಂಡು ಕಟ್ಟಡ ಕುಸಿತಗೊಂಡ ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.
  • ಗೌರಿ ಲಂಕೇಶ್ ಹತ್ಯೆ ಪ್ರಕರಣ: ಶಂಕಿತ ಹಂತಕರ ರೇಖಾಚಿತ್ರ ಬಿಡುಗಡೆಗೊಳಿಸಿದ ಎಸ್ ಐ ಟಿ
  • ಸೈನೈಡ್ ಮೋಹನ್ ಗೆ ಜೀವಾವಧಿ ಜೈಲು ಶಿಕ್ಷೆ: ಹೈಕೋರ್ಟ್ ವಿಭಾಗೀಯ ಪೀಠ ತೀರ್ಪು
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited