ನವದೆಹಲಿ : ಭಾರತದಲ್ಲಿ ಧರ್ಮಯುದ್ಧ (ಜಿಹಾದ್) ಸಾರಲು ಶಾಖೆ ತೆರೆಯುವುದಾಗಿ ಅಲ್ ಖೈದಾ ಉಗ್ರ ಸಂಘಟನೆ ಘೋಷಿಸಿದ್ದ ಬೆನ್ನಲ್ಲೇ ಅದರಿಂದ ಬೃಹತ್ ಅಪಾಯವೇನೂ ಇಲ್ಲ ಎಂದು ಅಮೆರಿಕ ಭಾರತಕ್ಕೆ ಧೈರ್ಯತುಂಬಿದೆ.
ಭಾರತದಲ್ಲಿ ತನ್ನ ಶಾಖೆ ತೆರೆಯುವುದಾಗಿ ಹೇಳಿದಾಕ್ಷಣ ಅದು ಹೊಸ ಸಾಮರ್ಥ್ಯವನ್ನು ಗಳಿಸಿಕೊಳ್ಳುತ್ತಿದೆ ಎಂಬ ಸೂಚನೆಯಲ್ಲ, ಆ ಉಗ್ರಗಾಮಿ ಸಂಘಟನೆಯನ್ನು ನೆಲಸಮ ಮಾಡಲು ನಾವು ಬದ್ಧರಿದ್ದೇವೆ. ಅಮೆರಿಕಕ್ಕೆ ಅಲ್ ಖೈದಾ ಮತ್ತೊಮ್ಮೆ ಬೆದರಿಕೆಯಾಗಿ ಪರಿಣಮಿಸದಂತೆ ನೋಡಿಕೊಳ್ಳುತ್ತೇವೆ ಎಂದು ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹಾ ಮಂಡಳಿಯ ವಕ್ತಾರ ಕೇಯ್ ಲ್ವಿನ್ ಹೇಡನ್ ತಿಳಿಸಿದ್ದಾರೆ.
ಕೆಲವೊಂದು ಸಂಘಟನೆಗಳಿಂದ ಭಾರತಕ್ಕೆ ಬೆದರಿಕೆಯಿರುವುದು ನಿಜ. ಆದರೆ ಅದೆಲ್ಲವನ್ನೂ ಎದುರಿಸಲು ಭಾರತ ಸಿದ್ಧವಿದೆ ಎಂದು ವಾಯುಪಡೆ ಮುಖ್ಯಸ್ಥ ಅರೂಪ್ ರಹಾ ಹೇಳಿದ್ದಾರೆ.