Untitled Document
Sign Up | Login    
ಜೇನು ಕೃಷಿಯಿಂದ ಸಿಹಿ ಜೇನಾದ ಬಡ ರೈತನ ಬದುಕು

ಜೇನು ಕೃಷಿಯಲ್ಲಿ ಯಶಸ್ಸು ಕಂಡ ಕಾಡುತೋಟ ಪುಟ್ಟಣ್ಣ ಗೌಡ

ಸಾಧನೆಗೆ ಅಸಾಧ್ಯವಾದುದು ಯಾವುದು ಇಲ್ಲ. ಆದರೆ ಸಾಧಿಸುವ ಛಲ ಬೇಕು ಎಂಬ ಮಾತು ಸತ್ಯ ಎಂಬುದನ್ನು ಸಾಭಿತು ಮಾಡಿ ತೋರಿಸಿದ್ದಾರೆ ಸುಳ್ಯ ತಾಲ್ಲೂಕಿನ ಉಬರಡ್ಕ ಮಿತ್ತೂರು ಗ್ರಾಮದ ಕಾಡುತೋಟ ಪುಟ್ಟಣ್ಣ ಗೌಡರು.

ಇವರಿಗೆ ಇರುವುದು ಒಂದೂವರೆ ಏಕ್ರೆ ಗುಡ್ಡ ಪ್ರದೇಶದ ಭೂಮಿ ಮಾತ್ರ. ಇಲ್ಲಿ ಕೃಷಿ ಮಾಡಲು ಹರಸಹಾಸ ಮಾಡಿದರು. ನೀರಿನ ಕೊರೆತೆಯಿಂದ ಅವರ ನಿರೀಕ್ಷೆಗೆ ತಕ್ಕ ಫಲ ದೊರೆಯಲಿಲ್ಲ. ತಾನು ಹೇಗಾದರೂ ಮಾಡಿ ತನ್ನ ಕಾಲಮೇಲೆ ನಿಂತು ಸ್ವಾವಲಂಭಿಯಾಗಿ ಬದುಕಬೇಕು ಎಂದು ಕನಸು ಕಂಡವರು ಪುಟ್ಟಣ್ಣ ಗೌಡರು. ಈ ಸಂದರ್ಭದಲ್ಲಿ ಅವರಿಗೆ ತೋಚಿದು ಜೇನುಕೃಷಿ. ಜೇನು ಕೃಷಿಯಿಂದಲೂ ಕೈ ತುಂಬಾ ಆಧಾಯ ಗಳಿಸಬಹುದು ಎಂದು ತೋರಿಸಿ ಕೊಟ್ಟಿವರು ಗೌಡರು.

1972ರಲ್ಲಿ ಪುಟ್ಟಣ್ಣ ಗೌಡರು ಜೇನು ಕೃಷಿ ಆರಂಭಿಸಿದರು. ಮೊದಲು ಜೇನು ಕೃಷಿಯ ಬಗ್ಗೆ ಯಾರಲ್ಲೂ ಅವರು ತರಬೇತಿ ಪಡೆದವರಲ್ಲ. ತನ್ನ ಸ್ವಂತ ಅಲೋಚನೆಯಿಂದ ಜೇನು ಕೃಷಿಯಲ್ಲಿ ತೊಡಗಿಸಿಕೊಂಡರು. 1990ರಲ್ಲಿ ಸುಮಾರು 450 ಜೇನು ಪೆಟ್ಟಿಗೆ ಕುಟುಂಬವನ್ನು ಸಾಕಿ 60 ಕ್ವಿಂಟಾಲ್ ಜೇನು ಉತ್ಪಾಧಿಸಿ ಸಾಧನೆ ಮಾಡಿದವರು. ಈ ಅವಧಿಯಲ್ಲಿ ರೂ.1.80 ಲಕ್ಷ ಆದಾಯ ಪಡೆದಿದ್ದರು.

ಕುಟುಂಬದ ಸದಸ್ಯರೊಂದಿಗೆ ಗೌಡರು
ಗೌಡರು ಸ್ಥಳಾಂತರ ಕೃಷಿ ಪಧ್ದತಿ ಮೂಲಕ ಬೇರೆಯವರ ತೋಟದಲ್ಲಿ ಅವರ ಒಪ್ಪಿಗೆ ಪಡೆದು ಜೇನು ನೊಣಗಳು ಎಲ್ಲಿ ಜಾಸ್ತಿಯಾಗಿ ಓಡಾಡುತ್ತವೆ, ಯಾವ ಕಡೆ ಮಕರಂದ ಸಿಗುತ್ತವೆ ಎಂಬ ಜಾಗವನ್ನು ಆಯ್ಕೆ ಮಾಡಿಕೊಂಡು ಪೆಟ್ಟಿಗೆಯನ್ನು ಇರಿಸುತ್ತಾರೆ. ರಬ್ಬರ್ ತೋಟದ ಪರಿಸರ ಜೇನು ಕೃಷಿಗೆ ಸೂಕ್ತ ಎಂದು ಗೌಡರು ಹೇಳುತ್ತಾರೆ. ಕೊಡಗಿನ ಕೊಯಿನಾಡಿನಿಂದ ಆರಂಭಿಸಿ ಸಂಪಾಜೆ, ಕಲ್ಲುಂಡಿ, ದೊಡ್ಡತೋಟ, ದುಗ್ಗಲಡ್ಕ, ಐವರ್ನಾಡು, ಸುಬ್ರಹ್ಮಣ್ಯ, ಏನೆಕಲ್ಲು ಹೀಗೆ ಬೇರೆ ಬೇರೆ ಕಡೆಗಳಲ್ಲಿ ಜೇನು ಪೆಟ್ಟಿಗೆಗಳನ್ನು ಇಟ್ಟು ಅದರ ಕುಟುಂಬವನ್ನು ಸಾಕುತ್ತಾರೆ. ರೈತರು ಇವರಿಗೆ ಉತ್ತಮ ಸಹಕಾರ ನೀಡುತ್ತಾರೆ.

ಜೇನು ಕೋಯ್ಲಿಗೆ ಬರುವ ಅವಧಿಯಲ್ಲಿ ಜೇನು ಪೆಟ್ಟಿಗೆ ಇಡಲು ಸಹಕಾರ ಮಾಡಿದರವರಿಗೆ ಸಿಹಿ ಜೇನು ನೀಡಿ ಸಂತೃಪ್ತಿಗೊಳಿಸುತ್ತೇನೆ. ಅಲ್ಲದೆ ಈ ಜೇನು ಪೆಟ್ಟಿಗೆ ಇಟ್ಟ ಪರಿಸರದಲ್ಲಿ ಕೃಷಿ ಬೆಳೆಗಳ ಪರಾಗಸ್ಪರ್ಶ ಕ್ರೀಯೆಗಳು ಸರಗವಾಗಿ ನಡೆದು ಪ್ರತಿ ವರ್ಷ ಇಳುವರಿ ಜಾಸ್ತಿ ಸಿಗುತ್ತವೆ ಎಂದು ಸಂತೃತ್ತ ಭಾವಣೆಯಿಂದ ಪಟ್ಟಣ್ಣರು ನುಡಿಯುತ್ತಾರೆ.

ಜೇನು ಕೃಷಿಯಲ್ಲಿ ತೊಡಗಿಸಿಕೊಳ್ಳುವ ಮೊದಲ ಹಂತದಲ್ಲಿ ಇದರ ಪೆಟ್ಟಿಗೆಗಳನ್ನು ಕೊಂಡುಕೊಳ್ಳಲು ಆರ್ಥಿಕ ಮುಗ್ಗಟ್ಟು ಎದುರಾಗಿತ್ತು. ಮೊದಲು 650 ರೂಪಾಯಿಗೆ 12 ಜೇನು ಪಟ್ಟಿಗೆಗಳನ್ನು ಕೊಂಡುಕೊಂಡು ಕಾಯಕ ಆರಂಭಿಸಿದೆ. ಕೆಲವು ವರ್ಷಗಳ ಹಿಂದೆ ಜೇನು ನೊಣಕ್ಕೆ ಥಾಯ್‌ಸ್ಯಾಕ್ ಬ್ರೂಡ್ ಎಂಬ ರೋಗ ಬಂದು ಜೇನು ಕುಟುಂಬ ಸಂಪೂರ್ಣವಾಗಿ ನಾಶವಾಗುವ ಸಂದರ್ಭ ಬಂದಾಗ ಕಲ್ಲಿನ ಪೊಟರೆಯೊಂದರಲ್ಲಿ ದೊರೆತ ಜೇನುಕುಟುಂವವೊಂದನ್ನು ಪೋಷಣೆ ಮಾಡಿ ಜೇನು ಕುಟುಂಬವನ್ನು ಬೆಳೆಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಜೇನು ಕೃಷಿಯಿಂದ ಪ್ರತಿ ವರ್ಷ ರೂ.2 ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಜತೆಗೆ ಇರುವ ಭೂಮಿಯಲ್ಲಿ ಈಗ ಅಡಿಕೆ, ತೆಂಗು, ಕಾಳು ಮೆಣಸು ಕೃಷಿಯಿದ್ದು ಕೃಷಿಯಲ್ಲೂ ವಾರ್ಷಿಕವಾಗಿ ರೂ.1 ಲಕ್ಷ ಆದಾಯ ಪಡೆಯುತ್ತಿದ್ದಾರೆ.

ಪಟ್ಟಣ ಗೌಡರು ಜೇನು ಕೃಷಿಯನ್ನು ತನ್ನ ಹಿರಿಯ ಮಗನಿಗೆ ಈಗ ಕಲಿಸುತ್ತಿದ್ದಾರೆ. ಪತ್ನಿ ನೇತ್ರಾವತಿ ಮತ್ತು ಇಬ್ಬರು ಹೆಣ್ಣು, ಇಬ್ಬರು ಗಂಡು ಮಕ್ಕಳೊಂದಿಗೆ ಗೌಡರು ಜೀವನ ಸಾಗಿಸುತ್ತಿದ್ದಾರೆ. ಇವರು ಅನೇಕ ಕಡೆ ಜೇನು ಕೃಷಿಗೆ ಸಂಬಂಧಪಟ್ಟಂತೆ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ತರಬೇತಿ ನೀಡಿದ್ದಾರೆ. ಇವರು ಪ್ರಶಸ್ತಿಗಳನ್ನು ನಿರೀಕ್ಷೆ ಮಾಡದಿದ್ದರೂ ಹಲವಾರು ಪ್ರಶಸ್ತಿಗಳು ಇವರನ್ನು ಅರಸಿಕೊಂಡು ಬಂದಿವೆ.
ತಾವೇ ಬೆಳೆಸಿದ ಸಸ್ಯ ಕಾಶಿಯಲ್ಲಿ ಗೌಡರು..
1995ರಲ್ಲಿ ದ.ಕ. ಜಿಲ್ಲಾ ಜೇನು ವ್ಯವಸಾಯ ಸಹಕಾರಿ ಸಂಘದ ಪರಸ್ಕಾರ, 1997ರಲ್ಲಿ ಧಾರವಾಡ ಕೃಷಿ ವಿಶ್ವ ವಿದ್ಯಾಲಯದ ಆಶ್ರಯದಲ್ಲಿ ನಡೆದ ಅಖಿಲ ಭಾರತ ಜೇನು ಉತ್ಸಾವದಲ್ಲಿ ಸನ್ಮಾನಿಸಲಾಗಿದೆ. 2003ರಲ್ಲಿ ರಾಜ್ಯ ಮಟ್ಟದ ಮಧುಮಿತ್ರ ಪ್ರಶಸ್ತಿ, 2005ರಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಶಿಲ್ಪಿ ಪ್ರಶಸ್ತಿ ಮತ್ತು ದಿ.ಕಂಜರ್ಪಣೆ ಗೋಪಾಲಕೃಷ್ಣ ಸ್ಮಾರಕ ಪ್ರಶಸ್ತಿ, 2006ರಲ್ಲಿ ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯವರು ನೀಡುವ ಜಿಲ್ಲಾ ಮಟ್ಟದ ಸ್ನೇಹ ಪ್ರಶಸ್ತಿ ದೊರೆತ್ತಿವೆ. ಇದಲ್ಲದೆ ಅನೇಕ ಸಂಘ ಸಂಸ್ಥೆಗಳು ಇವರನ್ನು ಗುರುತಿಸಿ ಗೌರವಿಸಿವೆ.
ಜೇನು ಕೃಷಿಕರಿಗೆ ಸರಕಾರ ನೀಡುವ ಪೋತ್ಸಾಹ ಸಾಲದು. ಸರಕಾರ ಇನ್ನೂ ಹೆಚ್ಚು ಪ್ರೋತ್ಸಾಹ ನೀಡುವಂತಾಗಬೇಕು ಎಂದು ಗೌಡರು ಹೇಳುತ್ತಾರೆ.

ಕೃಷಿಯಲ್ಲಿ ಆದಾಯವಿಲ್ಲ, ಕೆಲಸಗಾರರ ಕೊರತೆ ಎಂದು ಮುಂತಾಗಿ ನೆಪ ಹೇಳುತ್ತಾ ಇರುವ ಕೃಷಿ ಭೂಮಿಯನ್ನು ಮಾರಿ ಪಟ್ಟಣಕ್ಕೆ ವಲಸೆ ಹೋಗುವ ಕೃಷಿಕರು ಇವರನ್ನು ನೋಡಿ ಕಲಿಯಬೇಕಾದದ್ದು ಬಹಳಷ್ಟು ಇದೆ - ಅಲ್ಲವೇ ?

 

Author : ತೇಜಸ್ ಎಸ್.

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited