Untitled Document
Sign Up | Login    
Dynamic website and Portals
  
Home >> Movie Home >> Reviews >> ನಂದೀಶ
Movie Review
ನಂದೀಶ
ನಂದೀಶ್ ಚಿತ್ರದ ಹಾಡಿನ ದೃಶ್ಯ
Rating :
Hero :
ಕೋಮಲ್
Heroine :
ಮಾಳವೀಕ, ಪೂರೂಲ್
Other Cast :
ಶ್ರೀನಿವಾಸ ಪ್ರಭು, ರಮೇಶ್ ಭಟ್
Director :
ಓಂ ಸಾಯಿಪ್ರಕಾಶ
Music Director :
ಹಂಸಲೇಖ
Producer :
ಕೋಮಲ್
Release Date :
28-12-2012
ಕೋಮಲ್ ಸಿನಿಮಾಗಳೆಂದರೆ ಹಾಗೆ, ಜನರು ಹೊಟ್ಟೆತುಂಬಾ ನಗುವ ಅಂದಾಜಿನಲ್ಲಿ ಹೋಗಿರುತ್ತಾರೆ. ಆದರಲ್ಲೂ ಕೋಮಲ್‌ರವರ ಸ್ವಂತ ಬ್ಯಾನರ್ ಚಿತ್ರವೆಂದ ಮೇಲೆ ನಗು ಕಂಟ್ರೋಲ್ ಮಾಡಲು ಆಗುವುದೇ ಇಲ್ಲ ಎಂದೆಲ್ಲಾ ನಿರೀಕ್ಷಿಸಿರುವ ಪ್ರೇಕ್ಷಕನಿಗೆ ಒಂದೆರಡು ಕಡೆ ಕಚಗುಳಿ ಇಟ್ಟಂತಾದರು, ಅದು ನೆನಪಿನಲ್ಲಿಡಲಾರದಷ್ಟು ಸೆಂಟಿಮೆಂಟ್ ಸೀನ್‌ಗಳು, ಮತ್ತೆ ಮತ್ತೆ ಮರುಕಳಿಸುವ ಸೀನ್‌ಗಳು ನಗುವನ್ನು ಮರೆಸಿಬಿಡುತ್ತದೆ. ಹಂಸಲೇಖರ ಸಾಹಿತ್ಯ-ಸಂಗೀತದಲ್ಲಿ ಅ,ಆ,ಇ,ಈ ಮತ್ತು ಹಾಯ್ ಚಿನ್ನ.. ಹಾಡುಗಳು ಬಿಟ್ಟರೆ ಬೇರಾವುದೂ ಕೇಳಬೇಕೆನಿಸುವುದಿಲ್ಲ್ಲ. ಓಂ ಸಾಯಿಪ್ರಕಾಶರ ರೆಗ್ಯೂಲರ್ ಫಾರ್ಮಲಾ ಇಲ್ಲೂ ಬಳಕೆಯಾಗಿದೆ. ಸೆಂಟಿಮೆಂಟ್ ಸೀನ್‌ಗಳನ್ನು ಉತ್ತಮವಾಗಿ ಕಟ್ಟಿಕೊಡಬಲ್ಲ ನಿರ್ದೇಶಕರು ಕಾಮಿಡಿ ಕಲಾವಿದನನ್ನು ಬಳಸಿಕೊಳ್ಳಲು ವಿಫಲರಾಗಿದ್ದಾರೆ. ಸಂಭಾಷಣೆ, ಕೋರಿಯೋಗ್ರಫಿ, ಸಂಕಲನ ಎಲ್ಲವೂ ಇದ್ದೂ ಇಲ್ಲದಂತೆ ಬಳಕೆಯಾಗಿದೆ.

ಕಥೆಯ ವಿಷಯವಾಗಿ ಬಂದರೆ ಹೊಸಾ ಬಾಟಲಿಗೆ ಹಳೇ ಮದ್ಯ ಎಂಬಂತಾಗಿದೆ. ತುಂಬಾ ಹಿಂದೆ ಮಾಡಿಟ್ಟಿದ್ದ ಕಥೆಗೆ ಇಂದು ಹೊಸ ರೂಪಕೊಟ್ಟು ಚಿತ್ರಿಸಿದಂತಾಗಿದೆ. ಹಳ್ಳಿಯಲ್ಲಿ ಪಾಠ ಮಾಡುವ ಮೇಷ್ಟ್ರೂ ನಂಜುಂಡಸ್ವಾಮಿ(ಶ್ರೀನಿವಾಸಪ್ರಭು), ಅವನ ಹೆಂಡತಿ ದೇವಕಿ ಜಾತ್ರೆಯಲ್ಲಿ ಮಗನನ್ನು ಕಳೆದುಕೊಂಡಿರುತ್ತಾರೆ, ಹುಡುಕಲು 18 ವರ್ಷ ಹಳೆಯ ಪೋಟೋವನ್ನು ಕಾಣೆಯಾಗಿದ್ದಾನೆ ಎಂದು ಪ್ರಕಟಿಸಲು ಕೊಡುತ್ತಿರುತ್ತಾರೆ. ಯಾರದೋ ಐಡಿಯಾದಿಂದ ಹಳೇ ಪೋಟೋವನ್ನು 28 ವರ್ಷದವನಂತೆ ಇಮ್ಯಾಜಿನೇಷನ್ ಮಾಡಿ ಚಿತ್ರಿಸಿದರೆ ಬರುವುದೇ ನಂದೀಶ. ಅವನನ್ನು ಹುಡುಕುವ ಮೇಷ್ಟ್ರೂ, ಅನಾಥಾಶ್ರಮದಲ್ಲಿ ಬಸವ ಎಂಬ ಹೆಸರಿನಲ್ಲಿ ಸಿಗುವ ಪೆದ್ದು ನಂದೀಶ(ಕೋಮಲ್). ಊರಿಗೆ ಕರೆತರುವ ತಂದೆ. ಹುಚ್ಚು ಹುಚ್ಚಾಗಿ ನಡೆದುಕೊಳ್ಳುವ ನಂದೀಶ. ಬಾಲ್ಯದ ದಿನಗಳನ್ನು ಪರಿಚಯಿಸುವ ಮೊದಲ ನಾಯಕಿ ಕಾವ್ಯ(ಮಾಳವೀಕ). ಅವಳಿಗೆ ನಂದೀಶನ ಮೇಲೆ ಪ್ರೇಮಾಂಕುರ. ಅದನ್ನು ವಿರೋಧಿಸುವ ಕಾವ್ಯಳನ್ನು ಆಸೆಪಡುತ್ತಿರುವ ಮಾವ. ಮನೆಯಲ್ಲಿ ನಂದೀಶ ಮತ್ತು ಕಾವ್ಯ ಮದುವೆಗೆ ಒಪ್ಪಿಗೆ, ಮಾವ ನಂದೀಶನ್ನು ಕೊಲ್ಲಲು ಹೋಗಿ, ಅಲ್ಲಿ ನಂದೀಶನಿಗೆ ಹಿಂದಿನದೆಲ್ಲಾ ಜ್ಞಾಪಕಕ್ಕೆ ಬಂದು ಎಲ್ಲರನ್ನು ಚಂಡಿನಂತೆ ಚಂಡಾಡುತ್ತಾನೆ.

ದ್ವಿತಿಯಾರ್ಧದಲ್ಲಿ ಸೆಂಟಿಮೆಂಟ್ ಟಚ್‌ಕೊಟ್ಟು ಅನಾಥಾಶ್ರಮದ ವಾರ್ಡನ್ ರಮೇಶ್ ಭಟ್, ಅವನು ಮೇಷ್ಟರ ಸುಪರ್ದಿಗೆ ಕೊಟ್ಟಿದ್ದು ನಂದೀಶನಲ್ಲ, ನನ್ನ ಮಗ ವಿಷ್ಟು ಎನ್ನುವ ತಿರುವಿನೊಂದಿಗೆ, ಫ್ಲಾಶ್ ಬ್ಯಾಕ್‌ನಲ್ಲಿ ಊಟಿಯಿಂದ ಕಥೆ ಪ್ರಾರಂಭ. ನಂದೀಶ ಅಲ್ಲಿ ವಿಷ್ಟು ಎಂಬ ಅವತಾರದಲ್ಲಿ ಪ್ರತ್ಯಕ್ಷ. ಮತ್ತೊಬ್ಬಳು ನಾಯಕಿ ಸೋನಿಯ(ಪೂರೂಲ್). ಅಲ್ಲೋಂದು ಪ್ರೇಮ ಪ್ರಸಂಗ. ನಗುವಿಗಾಗಿ ಮಾಡಿದ ಕೆಲವು ದೃಶ್ಯಗಳು, ಅಲ್ಲೊಂದು ಅದ್ಧೂರಿ ಆಕ್ಷನ್ ಪ್ಯಾಕ್.

ಹೀಗೆ ಅವನು ಏಕೆ ಹುಚ್ಚನಾದ..? ಊಟಿಯಲ್ಲಿ ಏನುಮಾಡುತ್ತಿದ್ದಾ..? ಯಾರನ್ನು ಮದುವೆಯಾಗುತ್ತಾನೆ.? ಎಂದೆಲ್ಲಾ ತಿಳಿಯ ಬೇಕೆಂದರೆ ಚಿತ್ರ ಮಂದಿರದಲ್ಲಿ ನೋಡಿ. ಆದರೆ ಒಂದು ಕಿವಿಮಾತು... ಕೋಮಲ್ ಸಿನಿಮಾ ಎಂದು ಹೋಗುವುದರ ಬದಲು, ಓಂ ಸಾಯಿ ಪ್ರಕಾಶರ ಚಿತ್ರವೆಂದು ಹೋದರೆ ಉತ್ತಮ. ನಿಮಗೂ, ನೀವು ಕೊಟ್ಟ ಹಣಕ್ಕೂ ತೃಪ್ತಿ.

ಶ್ರೀನಿವಾಸ ಪ್ರಭು, ರಮೇಶ್ ಭಟ್, ಕೋಮಲ್ ತಮ್ಮ ಪಾತ್ರ ಸಮರ್ಥವಾಗಿ ನಿರ್ವಹಿಸಿದ್ದಾರೆ, ಹಳ್ಳಿ ಹುಡುಗಿ ಮಾಳವೀಕ, ಊಟಿ ಹುಡುಗಿ ಪೂರೂಲ್ ಅಭಿನಯಿಸಿದ್ದಾರೆ.

ವರದಿ : ನಟರಾಜ್ ಎಸ್.ಭಟ್
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited