Untitled Document
Sign Up | Login    
Dynamic website and Portals
  
Movie Review
ರಣ
ಪಂಕಜ್ ಮತ್ತು ಸುಪ್ರಿತಾ
Rating :
Hero :
ಪಂಕಜ್
Heroine :
ಸುಪ್ರೀತಾ
Other Cast :
ಅಂಬರೀಷ್,ಲಕ್ಷ್ಮಣ್, ಸೋನಿಯಾಗೌಡ, ಸ್ಫೂರ್ತಿ, ಸುರೇಶ್‌ಚಂದ್ರ, ವರ್ಧನ್, ಮಹೇಶ್, ಸಂಜೀವ್, ಮತ್ತಿತರರು.
Director :
ಶ್ರೀನಿವಾಸಮೂರ್ತಿ
Music Director :
ವಿ.ಶ್ರೀಧರ್‍
Producer :
Release Date :
ಸಿನಿಮಾದ ಹೆಸರೇ ಹೇಳುವಂತೆ ಇದು ರೌಡಿಸಂ ಪ್ರಧಾನ ಭೂಮಿಕೆಯಲ್ಲಿರುವ ಚಿತ್ರ. 'ರಣ'ರಂಗದಲ್ಲಿ ಹೋರಾಡಿ ರಕ್ತದ ಹೊಳೆ ಹರಿಸಿ ಕೊನೆಯಲ್ಲಿ ಉಳಿದವನೇ 'ಹೀರೋ'. ಸಿನಿಮಾ ತೆರೆ ಮೇಲೆ ಕಾಣುತ್ತಲೇ ಗೋಚರಿಸುವುದು 'ರಣ'ರಂಗ. ಅಲ್ಲೊಂದು ಹತ್ಯೆ. ಹೆಣ ಬಿದ್ದ ಮೇಲೆ ರೆಬಲ್ ಸ್ಟಾರ್ ಪ್ರವೇಶ. ಒಂದಿಷ್ಟು ಹಿಂದಿ ಡೈಲಾ‌ಗ್ ! ಇದಾದ ಮೇಲೆ ಸಿನಿಮಾ ಯಾವುದು.. ಯಾರು ಯಾರು ಇದ್ದಾರೆ ಎಂಬಿತ್ಯಾದಿ ವಿವರ ಹೊಂದಿದ ಟೈಟಲ್‌ ಕಾರ್ಡ್ !

ಬೀಭತ್ಸ ರಸವನ್ನಷ್ಟೇ ಹೆಚ್ಚಾಗಿ ವೀಕ್ಷಕರಿಗೆ ಅರೆದು ಕುಡಿಸುವ ತರಾತುರಿಯಲ್ಲಿ ಸಿನಿಮಾ ಮಾಡಿದಂತಿದೆ. ಇರಲಿ ಬಿಡಿ.. ಚಿತ್ರದಲ್ಲಿ ಒಟ್ಟು ಐವರು ನಾಯಕರು. ಹೀರೋ ಒಬ್ಬನೇ ಎಸ್‌.ನಾರಾಯಣ್ ಪುತ್ರ ಪಂಕಜ್‌. ಸಣ್ಣ ಪ್ರೇಮ ಪುರಾಣದ ಹಿನ್ನೆಲೆಯಲ್ಲಿ ಹುಟ್ಟಿಕೊಂಡಿರುವ ಕಥೆ ಇದು. ನಾಯಕಿ ಒಬ್ಬಳೇ 'ಅಂಬಾರಿ' ಸುಪ್ರೀತಾ. ಇದೇನಪ್ಪಾ ಪಾಂಡವರ ಕಥೆ ಆಯ್ತಲ್ಲ ಅಂದುಕೊಳ್ಳಬೇಡಿ. ಆರಂಭದಲ್ಲಿ ಹಾಗನಿಸಿದರೂ, ರಕ್ತದೋಕುಳಿ ಹರಿಯುವ ವೇಳೆ ಉಳಿದುದೆಲ್ಲವೂ ಅದರಲ್ಲೇ ಕೊಚ್ಚಿಕೊಂಡು ಹೋಗುತ್ತದೆ.

ಒಟ್ಟಿನಲ್ಲಿ ಸಿನಿಮಾ 'ರಣಾಂಗಣ'. ಮಚ್ಚು ಲಾಂಗುಗಳ ರಭಸಕ್ಕೆ ಚಿಲ್ಲನೆ ಚಿಮ್ಮುವ ನೆತ್ತರು. ಅಲ್ಲಲ್ಲಿ ಗನ್‌ನಿಂದ ಹೊರ ಬೀಳುವ ಬುಲ್ಲೆಟ್ ಸದ್ದು. ಹೆಣಗಳ ಮೇಲೆ ಹೆಣ ಉರುಳಿಸುವುದು. ಮಚ್ಚು ಬೀಸುವವರಿಗಂಗೂ ಗೊತ್ತುಗುರಿ ಎರಡೂ ಇಲ್ಲ. ನಾಯಕನಿಗಂತೂ ರಕ್ತದಲ್ಲೇ ಸ್ನಾನ. ರೆಬಲ್ ಸ್ಟಾರ್‍ ಇದ್ದರೂ ಅವರ ಪಾತ್ರ ಎಂಟ್ರಿ ಮತ್ತು ಎಕ್ಸಿಟ್‌ಗೆ ಸೀಮಿತ. ಇವುಗಳ ನಡುವೆ ಒಂದೆರಡು ಹಾಡುಗಳಿವೆ.

ವಿ.ಶ್ರೀಧರ್‍ ಸಂಗೀತ ನಿರ್ದೇಶನದ ಹಾಡುಗಳವು. ಆದರೆ, ಅವುಗಳು 'ರಣ'ರಂಗದ ಸದ್ದಿನ ನಡುವೆ ಕೇಳಿದರೂ 'ಹೃದಯ'ವನ್ನು ಟಚ್‌ ಮಾಡುವುದಿಲ್ಲ. ಹೀಗಾಗಿ ಹೊರಬಂದ ಬಳಿಕ ಹಾಡುಗಳ ಸಾಲುಗಳೇ ನೆನಪಾಗಲೊಲ್ಲದು. ತಾಂತ್ರಿಕ ಪ್ರಯೋಗದ ಮೇಲೆ ದೃಷ್ಟಿ ನೆಟ್ಟ ನಿರ್ದೇಶಕ ಶ್ರೀನಿವಾಸಮೂರ್ತಿ ಕಥೆಯ ಮೇಲೆ ಗಮನ ಹರಿಸಿದಂತಿಲ್ಲ.

ಸಿನಿಮಾ ನೋಡಿ ಹೊರಬಂದ ಪ್ರೇಕ್ಷಕರನ್ನು ಗಮನಿಸಿದರೆ, ಅಲ್ಲೇ ರಸ್ತೆಯಲ್ಲೇ 'ರಣ'ರಂಗ ಮಾಡಿಬಿಡುತ್ತಾರೋ ಎನ್ನುವಷ್ಟರ ಮಟ್ಟಿಗೆ ಪ್ರೇರಣೆ ನೀಡಬಲ್ಲ ಸಿನಿಮಾ ಎಂಬುದು ವೇದ್ಯವಾಗುತ್ತದೆ.
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited