Untitled Document
Sign Up | Login    
Dynamic website and Portals
  
Home >> Movie Home >> Reviews >> ಹುಚ್ಚು ಹುಡುಗರು
Movie Review
ಹುಚ್ಚು ಹುಡುಗರು
ಹುಚ್ಚು ಹುಡುಗರು
Rating :
Hero :
ಚೇತನ್ ಚಂದ್ರ
Heroine :
ಅದಿತಿ ರಾವ್
Other Cast :
ಪ್ರತಾಪ್, ದೇವ, ಅಮಿತ್, ಅವಿನಾಶ್, ದತ್ತಣ್ಣ, ಬಿರಾದರ್, ರವಿಶಂಕರ್, ಮುಂತಾದವರು.
Director :
ಪ್ರದೀಪ್
Music Director :
ಜೋಶ್ವಾ ಶ್ರೀಧರ್
Producer :
ವೇದಮೂರ್ತಿ, ರೋಹಿಣಿ.
Release Date :
04-04-2014
ಇತ್ತೀಚೆಗೆ ಬರುತ್ತಿರುವ ಬಹಳಷ್ಟು ಸಿನಿಮಾಗಳಲ್ಲಿ ಮಂಡ್ಯ ಹಾಗು ಸುತ್ತ ಮುತ್ತಲಿನ ಭಾಷೆಯ ಶೈಲಿಯನ್ನು ಹೆಚ್ಚಾಗಿ ಬಳಸಿಕೊಂಡು ಅಲ್ಲಿನ ಹುಡುಗರು ನೋಡಲು ಮುಗ್ಧರು, ಸಿಡಿದೆದ್ದರೆ ಹುಚ್ಚರು, ಸಾಹಸಿಗರು, ಏನು ಮಾಡಲು ಹೇಸುವುದಿಲ್ಲ ಎಂದು ತೋರಿಸಿ ಕೊಡುತ್ತಿದ್ದಾರೆ. ಅಲ್ಲಿನ ಪ್ರಾಂತಿಯತೆಗೆ ತಕ್ಕಂತೆ ಕತೆಯನ್ನು ಹೆಣೆಯುತ್ತಿದ್ದಾರೆ, ಅಥವ ತಮಿಳಿನ ಕತೆಯನ್ನು ತಂದು ಮಂಡ್ಯ ಸುತ್ತಮುತ್ತಲಿನ ಪ್ರದೇಶಕ್ಕೆ ಅಳವಡಿಸಿಕೊಳ್ಳಲಾಗುತ್ತಿದೆ. ಅದೇ ರೀತಿ ಹುಚ್ಚು ಹಳ್ಳಿ ಹೈದರು ಸಿಟಿಗೆ ಬಂದು ಏನು ಮಾಡುತ್ತಾರೆ ಎಂದು ತಿಳಿಸುವುದೇ ಹುಚ್ಚುಡುಗರು ಕತೆ.

ಸಿನಿಮಾದ ಮೊದಲಲ್ಲೇ ಮಾರಿ ಎಂಬ ವ್ಯಕ್ತಿಯನ್ನು ಎತ್ತಲು ಒಬ್ಬ ಮುದುಕ ಬೇರೆ ಬೇರೆ ರೌಡಿಗಳ ಹತ್ತಿರ ಹೋಗಿ ಸುಪಾರಿ ಕೊಡುತ್ತಿರುತ್ತಾನೆ. ಅವರು ಮಾರಿ ಎಂಬ ಹೆಸರು ಕೇಳಿದ ತಕ್ಷಣ ಹೆದರಿ ಬೆಚ್ಚಿ ಬೀಳುತ್ತಿರುತ್ತಾರೆ. ಅವರಿಂದ ಮಾರಿಯ ಬಿಲ್ಡಪ್. ಯಾರು ಸಾಯಿಸಲು ಹೆದರುತ್ತಿರುವ ಮಾರಿಯನ್ನು ಕೊಲ್ಲುವರು ಯಾರು ಎಂದರೆ ಹುಚ್ಚುಡುಗರು ಟೈಟಲ್ ಟ್ರ್ಯಾಕ್. ಯಾವುದೇ ಕೆಲಸಕ್ಕೆ ಹೋಗದೆ ಸುಮ್ಮನೆ ಅಡ್ಡಾಡಿಕೊಂಡು ಉಂಡಾಡಿ ಗುಂಡರ ಹಾಗೆ ಸಿಕ್ಕವರಿಗೆಲ್ಲಾ ತೊಂದರೆ ಕೊಟ್ಟುಕೊಂಡು ಊರಿನಲ್ಲಿರುವ ನಾಲ್ಕು ಜನರ ಗುಂಪೇ ಈ ಹುಚ್ಚುಡುಗರು. ಹೀಗೆ ಎಲ್ಲರಿಗೂ ಕ್ವಾಟಲೆ ಕೊಟ್ಟುಕೊಂಡು ಸಾಗುತ್ತಿದ್ದ ಈ ಗುಂಪಿಗೆ ಸಂಕಷ್ಟ ಬರುವುದೇ ಶಂಕರನ ಜೂಜಿನ ಆಟದಿಂದ. ಜೂಜಿಗಾಗಿ ೧ ಲಕ್ಷ ಸಾಲ ಮಾಡುತ್ತಾನೆ. ಅದನ್ನು ತೀರಿಸುವ ಹೊಣೆಯನ್ನು ಎಲ್ಲರೂ ಹೊರುತ್ತಾರೆ. ಅಷ್ಟರಲ್ಲಿ ಒಬ್ಬ ಮುದುಕ ಬಂದು ಇರವ ಈ ಸಾಲವನ್ನು ತೀರಿಸಿ ಹುಡುಗರ ಮನಸ್ಸನ್ನು ಅವನತ್ತ ಸೆಳೆಯುತ್ತಾನೆ. ಮಾರಿಯ ವಿಷಯ ಹೇಳುತ್ತಾನೆ. ಅನುಕಂಪಕ್ಕೆ ಕಟ್ಟುಬಿದ್ದು ಇವರು ಮಾರಿಯನ್ನು ಮುಗಿಸುವ ಡೀಲ್ ಹೊತ್ತು ಊರಿಂದ ಹೊರಬೀಳುತ್ತಾರೆ. ದಾರಿಯಲ್ಲಿ ಹುಡುಗಿ ಸಿಗುತ್ತಾಳೆ. ಶಿವು ಆಕೆಯನ್ನು ಪ್ರೇಮಿಸುತ್ತಾನೆ. ಹೀಗೆ ಅವರು ಬೆಂಗಳೂರು ತಲುಪುತ್ತಾರೆ. ಅವರಿಗೆ ಮಾರಿ ಎಂಬ ರೌಡಿಯ ಹಿಂದೆ ಮುಂದೆ ಕೂಡ ಅರಿವಿಲ್ಲದೆ ಒಮ್ಮೆ ಅಟ್ಯಾಕ್ ಮಾಡುತ್ತಾರೆ. ಅಲ್ಲಿಂದ ಪ್ರಾಬ್ಲಮ್ ಸ್ಟಾರ‍್ಟ್. ಈ ನಾಲ್ಕು ಜನ ಮಾರಿಯನ್ನ ಕೊಲ್ಲುತ್ತಾರಾ..? ಕೃಷ್ಣ ಪ್ರೀತಿಯನ್ನು ಉಳಿಸಿಕೊಳ್ಳುತ್ತಾನಾ..? ಊರಿನಲ್ಲಿ ಕುಟುಂಬಗಳ ಪರಿಸ್ಥಿತಿ ಏನು..? ಹುಡುಗರ ಸ್ಥಿತಿ ಏನಾಗುತ್ತದೆ..? ಎಲ್ಲವನ್ನು ಚಿತ್ರಮಂದಿರದಲ್ಲಿ ನೋಡಿ.

ಚಿತ್ರದ ಪಾತ್ರಗಳಲ್ಲಾ ಚೆನ್ನಾಗಿ ಅಭಿನಯಿಸಿದೆ. ಆದರೆ ಕತೆಯ ಮೊದಲಾರ್ದ ವೇಗವಾಗಿ ಸಾಗದಿದ್ದರೂ ಸುಮಾರಾಗಿ ಸಾಗುತ್ತದೆ. ಕತೆಯಲ್ಲಿ ದಮ್ಮಿಲ್ಲದಿದ್ದರೂ ಸುಮ್ಮನೆ ಜನರು ಸುಮ್ಮನೆ ನೋಡುತ್ತಾರೆ. ಕತೆಯನ್ನು ಮೊದಲಸೀನ್ ನಲ್ಲೇ ಗೆಸ್ಸ್ ಮಾಡಬಹುದಾದ ಪ್ರೇಕ್ಷಕ ಕೊನೆಯ ಸೀನ್ ವರೆಗು ಕೂತಿರಬೇಕು ಎಂದು ಏನು ಇಲ್ಲ. ಯಾವಾಗ ಬೇಕಾದರು ಎದ್ದು ಹೋಗಬಹುದು. ಏನು ಓಡುತ್ತಿದ್ದಿದೆ ಎಂದು ಗೊತ್ತಾದರೆ ನೋಡುಗ ಸುಮ್ಮನೆ ಪ್ರೇಮ ಕತೆ ನೋಡುತ್ತಿರುತ್ತಾನೆ. ಅದಕ್ಕೂ ಒಂದು ತಾತ್ವಿಕವಾದ ಅಂತ್ಯ ಕೊಡುವುದಿಲ್ಲ. ಕ್ಲೈಮ್ಯಾಕ್ಸ್ ಅತೀ ಕೆಟ್ಟದಾಗಿ ಮಾಡಿದ್ದಾರೆ. ಅಷ್ಟು ಹೊತ್ತು ಏನೋ ನೋಡಬಹುದು ಎಂದು ಕಷ್ಟ ಪಟ್ಟು ನೋಡುತ್ತಿದ್ದ ಪ್ರೇಕ್ಷಕ ದಿಡೀರ್ ಎಂದು ಎದ್ದು ಹೋಗುತ್ತಾನೆ.

ಹುಚ್ಚುಡುಗರು ಟೈಟಲ್ ಟ್ರ್ಯಾಕ್ ಸುಮಾರಾಗಿದೆ. ಅದನ್ನು ಬಿಟ್ಟು ಮಿಕ್ಕ ೨ ಗೀತೆಗಳು ಚೆನ್ನಾಗಿದೆ. ಶಮನ್ ಛಾಯಾಗ್ರಹಣ ಕತೆಗೆ ಪೂರಕವಾಗಿದೆ. ಪ್ರತಾಪ್, ಚೇತನ್ ಚಂದ್ರ, ಅಮಿತ್, ದೇವ ಚೆನ್ನಾಗಿ ಅಭಿನಯಿಸಿದ್ದಾರೆ.
ಸುಮ್ಮನೆ ಒಮ್ಮೆ ನೋಡಬಹುದಾದ ಚಿತ್ರ ಎನ್ನಬಹುದಿತ್ತು ಆದರೆ ಅತಿಯಾದ ಎಳೆತ ಹಾಗು ಕೆಟ್ಟ ಕ್ಲೈ ಮ್ಯಾಕ್ಸ್ ಅದಕ್ಕೆ ತಡೆ ಒಡುತ್ತದೆ. ನಿರ್ದೇಶಕ ಆರ್ ಜೆ ಪ್ರದೀಪ್ ಇನ್ನೂ ಪಳಗಬೇಕಾಗಿದೆ. ಚಿತ್ರ ಅರೆ ಬೆಂದ ಕಾಳಿನಂತಾಗಿ ಮುದ ನೀಡುವುದಿಲ್ಲ.

ವರದಿಃ ನಟರಾಜ್ ಭಟ್
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited