Untitled Document
Sign Up | Login    
Dynamic website and Portals
  
Home >> Movie Home >> Reviews >> ಕರೋಡ್ ಪತಿ
Movie Review
ಕರೋಡ್ ಪತಿ
ಕರೋಡ್ ಪತಿ
Rating :
Hero :
ಕೋಮಲ್
Heroine :
ಮೀರಾ, ಜಾಸ್ಮಿನ್
Other Cast :
ಗುರುಪ್ರಸಾದ್
Director :
ಎಸ್.ಎಸ್.ರಮೇಶ್
Music Director :
ಅಭಿಮಾನ್ ರಾಯ್
Producer :
ಸುರೇಶ್
Release Date :
14-03-2014
ಬೇರೊಂದು ಸಿನಿಮಾದ ಕಂಟೆಂಟ್ಗಳು ಇನ್ನೊಂದು ಸಿನಮಾದಲ್ಲಿ ಬರುವುದು ಹೊಸದೇನಲ್ಲ. ಕೆಲವಾರು ಇಂಪ್ರೆಸ್ ಆಗಿ, ಕೆಲವಾರು ಒಂದೇ ರೀತಿಯ ಯೋಚನೆಗಳಿಂದ ಮರುಕಳಿಸುವುದು ಸಾಮಾನ್ಯ. ಆದರೆ ಸಿನಿಮಾದ ಸಂಪೂರ್ಣ ಕಥಾ ಹಂದರವೇ ಇತ್ತೀಚೆಗೆ ಬಂದಂತಹ ಸಿನಿಮಾದ ರೀತಿಯಾದರೆ ಹೇಗೆ. ಅದರಲ್ಲೂ ಡೈರೆಕ್ಟರ್ ಸ್ಪೆಷಲ್ ಚಿತ್ರದ ನಿರ್ದೇಶಕರೆ ಕೋಟ್ಯಾಧಿಪತಿ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ವಿಸ್ಮಯ.

ಅವರ ರೀತಿಯಲ್ಲಿ ಅವರು ಮಾಡಲಿ ನಮ್ಮ ರೀತಿಯಲ್ಲಿ ನಾವು ಮಾಡುವ ಎನ್ನುವ ದಿಟ್ಟ ನಿಲುವು ನಿರ್ದೇಶಕ ರಮೇಶ್ ರವರದ್ದಾಗಿದ್ದರೂ ಕೋಟ್ಯಾಧಿಪತಿಯಲ್ಲಿ ಅಂತಹ ಹೊಸದೇನು ಇಲ್ಲ. ಡಿ ಎಸ್ ಪಿ ಯಲ್ಲಿ ನಾಯಕ ಒಂದು ಕುಟುಂಬ ಕಟ್ಟುವ ಕನಸಿನಂತೆ ಜನರನ್ನು ತಂದು ಗುಡ್ಡೆ ಹಾಕಿಕೊಂಡರೆ, ಇಲ್ಲಿ ಜನರನ್ನು ಮನೆಯಲ್ಲಿ ಗುಡ್ಡೆ ಹಾಕಲು ಕಾರಣ ಹೇಳಲಾಗಿದೆ. ವಿಶೇಷವೆಂದರೆ ೫ ಸಾಂಗ್, 2 ಫೈಟ್. ಅಲ್ಲಿ ಎಲ್ಲರೂ ಮೋಸ ಮಾಡುತ್ತಾರೆ ಇಲ್ಲಿ... ಸಿನಿಮಾ ನೋಡಿ.

ಸಿನಿಮಾದ ಕತೆಯ ವಿಷಯಕ್ಕೆ ಬಂದರೆ ಅನಾಥವಾಗಿ ಸಿಗುವ ಮಗುವಿಗೆ ಕಸಾ ಆಯುವ ಬಿರಾದರ್ ತಾತನಾಗುತ್ತಾನೆ. ಕಾಲಾನಂತರ ಅವನು ಸಾಯುತ್ತಾನೆ. ಅದೇ ವೃತ್ತಿ ಬಾಬು(ಕೋಮಲ್) ಪ್ರಾರಂಭಿಸುತ್ತಾನೆ. ಅವನ ಕಸಾ ಆಯುವ ಒಂದಷ್ಟು ಎಪಿಸೋಡ್ ಮುಂದುವರೆಯುತ್ತದೆ. ಅಚಾನಕ್ಕಾಗಿ ಆತನಿಗೆ ಕೋಟಿಗಟ್ಟಲೇ ಹಣ ಸಿಗುತ್ತದೆ. ಅದನ್ನು ಯತೇಚ್ಚವಾಗಿ ಖರ್ಚುಮಾಡುತ್ತಾ ಕಾಲ ಕಳೆಯುತ್ತಾನೆ. ಒಂದು ಕುಟುಂಬದ ಪ್ರೀತಿಯನ್ನು ಹಂಬಲಿಸುತ್ತಾನೆ. ಬಾಡಿಗೆಗಾಗಿ ಎಲ್ಲರನ್ನು ತಂದುಕೊಳ್ಳುತ್ತಾನೆ. ಅಪ್ಪ, ಅಮ್ಮ, ಅಣ್ಣ, ಅತ್ತಿಗೆ, ತಂಗಿ, ತಮ್ಮ, ಜೊತೆಗೆ ಕೋಟಿಲಿಂಗ(ಗುರುಪ್ರಸಾದ್) ಎನ್ನುವ ಸೆಕ್ರೆಟ್ರಿ. ಎಲ್ಲರೊಟ್ಟಿಗೆ ಸಂತೋಷವಾಗಿರುತ್ತಾನೆ. ಜೊತೆಯಲ್ಲಿ ಒಂದು ಹುಡುಗಿಯನ್ನು ತಂದು ಮೆಡಿಕಲ್ ಓದಿಸುತ್ತಿರುತ್ತಾನೆ.. ಆಕೆಗೆ ಅವನ ಮೇಲೆ ಪ್ರೇಮಾಂಕುರ, ಜೊತೆಗೆ ಬಾಬುಗೆ ಮತ್ತೊಂದು ಹುಡುಗಿ ಸಿಗುತ್ತಾಳೆ. ಅವಳ ಮೇಲೆ ಬಾಬೂಗೆ ಪ್ರೇಮಾಂಕುರ. ಹೀಗೆ ಕತೆ ಮುಂದುವರೆಯುತ್ತಾ ಹೋಗುತ್ತದೆ.. ಕಡೆಯಲ್ಲಿ ಎಲ್ಲರೂ ಚೆಂದಾಗಿರುತ್ತಾರಾ..? ಕೋಟಿಗಟ್ಟಲೆ ಹಣದ ಮೂಲವೇನು.? ಯಾರನ್ನು ಬಾಬು ಮದುವೆಯಾಗುತ್ತಾನೆ.? ಕೋಟಿಲಿಂಗ ಏನು ಮಾಡುತ್ತಾನೆ..? ಎಲ್ಲವನ್ನು ಸಿನಿಮಾ ನೋಡುವ ಆಸಕ್ತಿ ಇದ್ದರೆ ನೋಡಿ.

ತಾಂತ್ರಿಕವಾಗಿ ಹೇಳಬೇಕೆಂದರೆ ವಿಶೇಷವೇನು ಇಲ್ಲ. ನಿಧಾನ ಗತಿಯಲ್ಲಿ ಸಾಗುವ ಕತೆಗೆ ತಕ್ಕಂತೆ ಸಂಕಲನವಾಗಿದೆ. ಸನಿಹಕೆ ಬಾರೆ.. ಎನ್ನುವ ಹಾಡೋಂದು ಬಿಟ್ಟರೆ ಯಾವುದೂ ತಲೆಯಲ್ಲಿ ನಿಲ್ಲುವುದಿಲ್ಲ. ಕತೆ ಮುಂದುವರೆಯಲು ಯಾವ ಹಾಡು ಸಹಕಾರಿಯಾಗುವುದಿಲ್ಲ. ಕತೆಯ ವಿಷಯವಾಗಿ ರಮೇಶ್ ಇನ್ನೂ ಒಂದಷ್ಟು ಯೋಚಿಸಬಹುದಿತ್ತು. ಕಡೆಯಲ್ಲಂತು ಮುಗಿಸಿದರೆ ಸಾಕು ಎನ್ನುವಷ್ಟು ಸ್ಲೋ ಆಗುತ್ತದೆ. ಮೊದಲಾರ್ಧದ ಕೆಲವಾರು ಡೈಲಾಗ್ ಮುಂದಿನ ಅರ್ಧ ನೋಡುವಂತೆ ಮಾಡುತ್ತದೆ. ಅಲ್ಲಲ್ಲಿ ಗುರುಪ್ರಸಾದ್ ಮಾತುಗಳು ಬಂದು ಹೋಗುತ್ತದೆ.

ಕೋಮಲ್ ಮುಗ್ಧ ಪಾತ್ರವನ್ನು ಎಂದಿನಂತೆ ಅಭಿನಯಿಸಿದ್ದಾರೆ, ಮೀರಾ ಪಾತ್ರಕ್ಕೆ ತಕ್ಕಂತೆ ಅಭಿನಯಿಸಿದ್ದಾರೆ. ಗುರುಪ್ರಸಾದ್ ಸಿನಿಮಾದಲ್ಲೂ ನಿರ್ದೇಶಕನ ಪಾತ್ರವನ್ನು ಮಾಡಿದ್ದಾರೆ. ಶೃಂಗೇರಿ ರಾಮಣ್ಣ, ವಾಸು, ಜಾಸ್ಮನ್, ಯತಿ, ಸುರೇಶ್, ಚಿಕ್ಕಣ್ಣ, ಬಿರಾದರ್, ಮುಂತಾದವರು ತಮ್ಮ ಪಾತ್ರಕ್ಕೆ ತಕ್ಕಂತೆ ಅಭಿನಯಿಸಿದ್ದಾರೆ.
ಒಟ್ಟಾರೆ ಡೈರೆಕ್ಟರ್ ಸಿನಿಮಾ ನೋಡದವರು, ಕೋಮಲ್ ಅಭಿಮಾನಿಗಳು ಸಮಯವಿದ್ದರೆ ನೋಡಬಹುದಾದ ಚಿತ್ರ.

ವರದಿ ಃ ನಟರಾಜ್ ಭಟ್
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited