Untitled Document
Sign Up | Login    
Dynamic website and Portals
  
Home >> Movie Home >> Reviews >> ದಿಲ್ ರಂಗೀಲ
Movie Review
ದಿಲ್ ರಂಗೀಲ
ದಿಲ್ ಬರಡಾದ ರಂಗೀಲ
Rating :
Hero :
ಗಣೇಶ್
Heroine :
ರಚಿತಾ ರಾಮ್, ಪ್ರಿಯಾಂಕ ರಾವ್
Other Cast :
ರಂಗಾಯಣ ರಘು,ಅಚ್ಯುತ್ ಕುಮಾರ್,ಜಯಶ್ರೀ ಮುಂತಾದವರು
Director :
ಪ್ರೀತಂ ಗುಬ್ಬಿ
Music Director :
ಅರ್ಜುನ್ ಜನ್ಯ
Producer :
ಕೆ.ಮಂಜು
Release Date :
07-03-2014
ರೊಮ್ಯಾಂಟಿಕ್ ಚಿತ್ರಗಳ ನಿರ್ದೇಶಕ ಪ್ರೀತಂ ಗುಬ್ಬಿ ಇನ್ನೊಂದು ಮಸಾಲ ಪ್ರೇಮಿಸಂ ಚಿತ್ರವನ್ನು ಕನ್ನಡ ಚಿತ್ರರಸಿಕರಿಗೆ ನೀಡಲು ಯತ್ನಿಸಿದ್ದಾರೆ. ನಮ್ ದುನಿಯಾ ನಮ್ ಸ್ಟೈಲ್ ಎಂಬ ಜನ ನೋಡದ ಚಿತ್ರವನ್ನು ನೀಡಿದ್ದ ನಿರ್ದೇಶಕರು ಈ ಬಾರಿ ಸ್ವಲ್ಪ ಹುಷಾರಾಗಿದ್ದಾರೆ.

ಕಥಾ ನಾಯಕ ಪ್ರೀತಂ ಒಬ್ಬ ಬಾಣಸಿಗ, ತಾನು ಕೆಲಸ ಮಾಡುವ ಹೋಟೆಲ್ ನ ಮಾಲೀಕನ ಮಗಳು ಇವನನ್ನು ಇಷ್ಟ ಪಡುತ್ತಾಳೆ. ಹಣದಾಸೆಗೆ ಇವಳನ್ನು ಮದುವೆಯಾಗಲು ಒಪ್ಪುವ ನಾಯಕ ಮದುವೆಗೆ ಮುಂಚೆ ಭಾವೀಮಾವ ಮತ್ತು ಭಾವಿಪತ್ನಿಗೆ ತೀರ್ಥಕ್ಷೇತ್ರ ದರ್ಶನವೆಂದು ಸುಳ್ಳು ಹೇಳಿ ಗೋವಾಗೆ ಬರುತ್ತಾನೆ, ಅಲ್ಲಿ ನಾಯಕಿ ಖುಷಿಯ ಪರಿಚಯವಾಗುತ್ತದೆ. ಇಬ್ಬರೂ ಸ್ನೇಹಿತರಾಗುತ್ತಾರೆ. ಸುಳ್ಳಿನ ಸರದಾರನಾದ ನಾಯಕ ಹಾಗೂ ಪ್ರೇಮವೈಫಲ್ಯವಾಗಿದ್ದ ನಾಯಕಿಯ ಮಧ್ಯೆ ಪ್ರೇಮ ಚಿಗುರೊಡೆಯುತ್ತದೆ. ಹೋಟೆಲ್ ಮಾಲೀಕನ ಮಗಳು ನಾಯಕಿ ಖುಶಿಯ ಸ್ನೇಹಿತೆಯಾಗಿರುತ್ತಾಳೆ..ನಾಯಕ ಪ್ರೀತಂ ಯಾರನ್ನು ಮದುವೆಯಾಗುತ್ತಾನೆ ಎಂದು ಚಿತ್ರಮಂದಿರದಲ್ಲಿ ನೋಡಿ ತಿಳಿದುಕೊಳ್ಳಿ.

ಗಣೇಶ್ ಮತ್ತು ರಚಿತರಾಮ್ ಇಬ್ಬರೂ ಲವಲವಿಕೆಯಿಂದ ಅಭಿನಯಿಸಿದ್ದಾರೆ. ಅಧ್ಭುತ ನಟರಾದ ದತ್ತಣ್ಣ, ಅಚ್ಯುತ್ ಮತ್ತು ರಂಗಾಯಣ ರಘು, ಜಯಶ್ರೀ ಪ್ರಾಮುಖ್ಯತೆ ಇಲ್ಲದ ಪಾತ್ರಗಳಿಗೆ ಸೀಮಿತವಾಗಿರುವುದು ಚಿತ್ರದ ಗುಣಮಟ್ಟವನ್ನು ತೋರಿಸುತ್ತದೆ.ನಾಯಕ ಮತ್ತು ನಾಯಕಿ ಬಿಟ್ಟರೆ ಇನ್ಯಾರಿಗೂ ಈ ಚಿತ್ರದಲ್ಲಿ ಅವಕಾಶವಿಲ್ಲ.

ಮೊದಲಬಾರಿಗೆ ಪ್ರೀತಂ ಗುಬ್ಬಿ ಚಿತ್ರಕ್ಕೆ ಸಂಗೀತ ನೀಡುತ್ತಿರುವ ಅರ್ಜುನ್ ಜನ್ಯ ಕೇಳುಗರ ಮನಗೆಲ್ಲಲು ಪ್ರಯತ್ನಿಸಿದ್ದಾರೆ. ನಿಲ್ಲು..ನಿಲ್ಲು ಹಾಡು ಪ್ರೇಕ್ಷಕರ ಮನಸ್ಸಿನಲ್ಲಿ ನಿಲ್ಲುತ್ತದೆ. ಬೇರೆ ಗೀತೆಗಳನ್ನು ಅನಾವಶ್ಯಕವಾಗಿ ತುರುಕಿ ಚಿತ್ರವನ್ನು ಅಭಾಸಮಾಡಲು ಯತ್ನಿಸದೆ ಇರುವುದಕ್ಕೆ ನಿರ್ದೇಶಕರನ್ನು ಅಭಿನಂದಿಸಬೇಕು. ಸಂಕಲನ ಮತ್ತು ಛಾಯಾಗ್ರಹಣ ಚಿತ್ರಕ್ಕೆ ತಕ್ಕಂತಿದೆ.

ಯುವ ಜನತೆಯ ಮನಸ್ಸನ್ನು ಗೆಲ್ಲಲು ಡಬಲ್ ಮೀನಿಂಗ್ ಡೈಲಾಗ್ ಗಳನ್ನು ಬಳಸಿರುವುದು ಚಿತ್ರತಂಡದ ಅಭಿರುಚಿಯನ್ನು ತೋರಿಸಿಕೊಡುತ್ತದೆ. ಕಥೆಯೇ ಇಲ್ಲದೆ ಚಿತ್ರಕಥೆಯನ್ನೇ ಬಂಡವಾಳ ಮಾಡಿಕೊಂಡು ವ್ಯತಿರಿಕ್ತ ಪಾತ್ರಗಳ ಮೂಲಕ ಚಲನ ಚಿತ್ರ ತೋರಿಸಲು ನಿರ್ದೇಶಕರು ಶ್ರಮಪಟ್ಟಿರುವುದು ಎದ್ದು ಕಾಣುತ್ತದೆ. ಆದರೆ ಪ್ರೇಕ್ಷಕ ಪ್ರಭುವಿಗೆ ಮುಂದೇನು ಎಂಬುದು ಸುಲಭವಾಗಿ ತಿಳಿದುಬಿಡುತ್ತದೆ. ಗಣೇಶ್ ಅಭಿಮಾನಿಗಳಿಗೆಂದೇ ಫ಼ೈಟ್ ಇದೆ..ಇನ್ನೂ ಯಾಕೆ ನಿರ್ದೇಶಕರು ಹಳೇ ಸವಕಲು ಚಿತ್ರಕಥೆಯನ್ನು ಜನರಿಗೆ ನೀಡಲು ಬಯಸುತ್ತಾರೋ ಜನಾರ್ಧನನೇ ಬಲ್ಲ.

ಯುವಜನಾಂಗಕ್ಕಾಗಿ ಚಿತ್ರ ಮಾಡಿರುವುದರಿಂದ ಸಕುಟುಂಬ ಸಮೇತರಾಗಿ ಚಿತ್ರ ನೋಡುವುದು ಕಷ್ಟ.
ಫ್ಯಾಮಿಲಿಗೆ ಈ ಚಿತ್ರ ನೋಡದಿದ್ದರೆ ಯಾವುದೇ ಲಾಸ್ ಇಲ್ಲ. ಯುವಜನತೆಗೆ ಕೇವಲ ಟೈಂಪಾಸ್ ಮೂವಿ.

ವರದಿ ಃ ನಟರಾಜ್
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited