Untitled Document
Sign Up | Login    
Dynamic website and Portals
  
Home >> Movie Home >> Reviews >> ಅದ್ವೈತ
Movie Review
ಅದ್ವೈತ
ಅದ್ವೈತ
Rating :
Hero :
ಅಜಯ್ ರಾವ್
Heroine :
ಹರ್ಷಿಕಾ ಪೂಣಚ್ಚ
Other Cast :
ಅಜಯ್ ರಾವ್,ಹರ್ಷಿಕಾ ಪೂಣಚ್ಚ,ಅಚ್ಯುತ್ ರಾವ್,ನೀನಾಸಂ ಸತೀಶ್
Director :
ಬಿ.ಎಂ ಗಿರಿರಾಜ್
Music Director :
ವೀರ್ ಸಮರ್ಥ್
Producer :
ಶಾರದಾ ಸುರೇಶ್
Release Date :
07-12-2013
ಜೀವಾತ್ಮ ಪರಮಾತ್ಮ ಎರೆಡೂ ನಾನೆ ಎನ್ನುವ ಸಿದ್ದಾಂತಕ್ಕೂ ಹಾಗೂ ಪ್ರತಿ ಬರಹಗಾರನೂ ಹೋರಾಟಗಾರನಾಗಿರುತ್ತಾನೆ ಎನ್ನುವ ಅಡಿ ಬರಹಕ್ಕೂ ಏನು ಸಂಬಂಧ ಎಂದು ಕೆದಕುತ್ತಾ ಹೋದರೆ ಅದ್ವೈತ ಚಿತ್ರ ತೆರೆದುಕೊಳ್ಳುತ್ತಾ ಹೋಗುತ್ತದೆ.

ಗಿರಿರಾಜ್‌ರವರ ಬಿಡುಗಡೆಯಾಗುತ್ತಿರುವ ಎರಡನೇ ಚಿತ್ರ ಇದಾದರೂ ಜಟ್ಟಗಿಂತಲೂ ಮೊದಲು ಸಿದ್ಧವಾಗಿದ್ದು ಅದ್ವೈತ ಚಿತ್ರವನ್ನು ಗಿರಿರಾಜ್ ಅವರ ಮೊದಲ ಚಿತ್ರ ಎನ್ನಬಹುದು. ಮೊದಲಿಗೆ ಒಂದು ಕಮರ್ಶಿಯಲ್ ಚಿತ್ರ ಮಾಡುವ ಉಮೇದಿನಲ್ಲಿ ಒಳ್ಳೆಯ ನಿರೂಪಣಾ ಶೈಲಿಯಿರುವ ಚಿತ್ರವೇ ಅದ್ವೈತ ಚಿತ್ರ. ಕನ್ನಡಕ್ಕೆ ಕಥೆ ಹೇಳುವ ಶೈಲಿ ಹೊಸತೆನಿಸಿದರೂ ಹಲವಾರು ಲ್ಯಾಂಗಿಂಗ್ ಪ್ಯಾಯಿಂಟ್, ಕೊನೆಯವರೆಗೂ ಕೂರಿಸಿಕೊಳ್ಳುವ ೫೦-೫೦ ಚಿತ್ರ.

ಸ್ವಾರಸ್ಯವನ್ನು ಬಿಟ್ಟುಕೊಡದೆ ಕಥೆಯ ವಿಷಯಕ್ಕೆ ಬಂದರೆ ಒಳ್ಳೆಯ ಡಾನ್ ಕಥೆಯನ್ನು ಸಿನಿಮಾ ಮಾಡುವ ಗುಂಗಿನಲ್ಲಿ ಡಾನ್ ಪಾತ್ರವನ್ನು ಹುಡುಕಿಕೊಂಡು ಅಲೆದಾಡುವ ನಾಯಕ (ಅಜಯ್ ರಾವ್) ಬಹಳಷ್ಟು ತಿರುಗಾಟ ಸಂಕಷ್ಟದ ತರುವಾಯ ಕಾಕತಾಳಿಯ ಎಂಬಂತೆ ಡಾನ್ (ಅಚ್ಯುತ್ ರಾವ್) ಬೇಟಿಯಾಗುತ್ತದೆ.

ಅಲ್ಲಿ ಮತ್ತೊಬ್ಬ ಡಾನ್ (ನೀನಾಸಂ ಅಶ್ವಥ್) ಪ್ರತ್ಯಕ್ಷನಾಗುತ್ತಾನೆ. ಆತನ ತಂಗಿ ನಾಯಕಿ ಹರ್ಷಿಕಾ ಪೂಣಚ್ಚ. ಇಬ್ಬರು ಡಾನ್‌ಗಳು ಸಂಬಂಧಿಗಳಾಗಲು ಮನಸ್ಸು ಮಾಡುತ್ತಾರೆ. ಆದರೆ ಆ ಸಂಬಂಧ ನಾಯಕಿಗೆ ಇಷ್ಟವಿರುವುದಿಲ್ಲ. ಈ ಸಮಯದಲ್ಲಿ ನಾಯಕ ನಾಯಕಿಗೆ ಸಹಾಯ ಮಾಡುತ್ತಾನಾ, ಹುಡುಗಿ ಬಂದಿರುವ ಕಥೆಯ ಬಗ್ಗೆ ಗಮನಹರಸುತ್ತಾನಾ, ಅಥವಾ ನಾಯಕನಿಗೂ ಡಾನ್‌ಗೂ ವಯಕ್ತಿಕ ಬೇರೆ ಸಂಬಂಧಗಳಿರಬಹುದಾ ಎನ್ನುವುದೇ ಕಥೆಯ ಮುಂದಿನ ಭಾಗ.

ಸುಮ್ಮನೆ ಕೂತು ಒಮ್ಮೆಗೆ ನೋಡಬಹುದಾದಂತಹ ಚಿತ್ರ. ಕೆಲವೊಮ್ಮೆ ಪಾತ್ರಗಳ ಅತೀ ಉತ್ಪ್ರೇಕ್ಷೆ ಹಾಗೂ ಮುಖ್ಯ ಡಾನ್ ಪಾತ್ರ, ಡಾನ್ ಅನ್ನಿಸದಿರುವುದು ಚಿತ್ರಕ್ಕೆ ಮೈನಸ್ ಪಾಯಿಂಟ್. ಕೆಲವು ಪಾತ್ರ ತುರುಕಿದ್ದರೂ ತೇಲಿ ಹೋಗುತ್ತದೆ. ಛಾಯಾಗ್ರಹಣ ಪರವಾಗಿಲ್ಲ, ಸಂಕಲನ ಮುದನೀಡುತ್ತದೆ. ಸಂಗೀತ ಕಥೆಗೆ ಪೂರಕವಾಗಿದ್ದರೂ ಕೇಳಬೇಕೆನಿಸುವುದಿಲ್ಲ. ಚಿತ್ರದಲ್ಲಿ ಎಲ್ಲರೂ ತಮ್ಮ ಪಾತ್ರವನ್ನು ಸಮರ್ಪಕವಾಗಿ ನಿರ್ವಹಿಸಿದ್ದಾರೆ. ಕಥೆಯ ವಸ್ತು ಹಳತೆನಿಸಿದರೂ ಹೇಳುವ ವಿಚಾರದಲ್ಲಿ ಗಿರಿರಾಜ್ ತಮ್ಮ ತನವನ್ನು ತೋರಿಸಿದ್ದಾರೆ. ಮತ್ತಷ್ಟು ತಯಾರಿಮಾಡಿಕೊಂಡಲ್ಲಿ ಗಿರಿರಾಜ್ ಭರವಸೆ ಮೂಡಿಸುವುದರಲ್ಲಿ ಅನುಮಾನವಿಲ್ಲ.
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited