Untitled Document
Sign Up | Login    
Dynamic website and Portals
  
Home >> Movie Home >> Reviews >> ’ರೋಮಿಯೋ’
Movie Review
’ರೋಮಿಯೋ’
Rating :
Hero :
ಗಣೇಶ್
Heroine :
ಭಾವನಾ
Other Cast :
ರಂಗಾಯಣರಘು, ಸಾಧುಕೋಕಿಲ, ಅವಿನಾಶ್ ಮತ್ತು ಸುಧಾ ಬೆಳವಾಡಿ
Director :
ಪಿ.ಸಿ. ಶೇಖರ್
Music Director :
ಅರ್ಜುನ್‌ ಜನ್ಯಾ
Producer :
ರಮೇಶ್‌ಕುಮಾರ್
Release Date :
06-07-2012
ಗೋಲ್ಡನ್ ಸ್ಟಾರ್ ಅಭಿನಯದ ’ರೋಮಿಯೋ’ ಚಿತ್ರವನ್ನು ನಿರ್ಮಾಪಕ ರಮೇಶ್‌ಕುಮಾರ್ ಮತ್ತು ನಿರ್ದೇಶಕ ಪಿ.ಸಿ. ಶೇಖರ್ ಪ್ರಾರಂಭದಿಂದ ಬಿಡುಗಡೆ ತನಕ ಭರ್ಜರಿ ಪ್ರಚಾರ ಮಾಡಿ ಅದ್ದೂರಿಯಾಗಿ ಪ್ರೇಕ್ಷಕರಿಗೆ ತಲುಪಿಸಿದ್ದಾರೆ.

ಹಿರಿಯರು ಹೇಳುವಂತೆ ಸಾವಿರ ಸುಳ್ಳು ಹೇಳಿ ಮದುವೆ ಮಾಡು ಎಂಬಂತೆ, ಚಿತ್ರದಲ್ಲಿ ನಾಯಕ ರೋಮಿಯೋ ಸಾವಿರ ಸುಳ್ಳು ಹೇಳಿ ನಾಯಕಿಯ ಮನವೋಲಿಸಿ ತಾಳಿ ಕಟ್ಟುತ್ತಾನೆ. ಮಗನ ತಪ್ಪನ್ನು ತಿದ್ದುವ ಬದಲು ಬೆಂಬಲವಾಗಿ ನಿಂತ ಅಪ್ಪನಿಗೆ ಸುಳ್ಳು ಗೊತ್ತಾಗಿ ನಾಯಕಿಯಿಂದ ಅವಮಾನ ಆಗುತ್ತದೆ. ಸುಳ್ಳು ಹೇಳಬೇಕು ಅದನ್ನು ಯಾವ ರೀತಿ ಹೇಳಬೇಕು ಎಂಬುದನ್ನು ಕ್ಲೈಮಾಕ್ಸ್‌ನಲ್ಲಿ ತೋರಿಸಲಾಗಿದೆ.

ನಾಯಕ ಮಧ್ಯಮ ವರ್ಗದ ಹುಡುಗನಾಗಿದ್ದು ಶ್ರೀಮಂತ ಹುಡುಗಿಗೆ ಡೌವ್ ಹೊಡೆದು ಅವಳು ನಂಬುವ ಹಾಗೆ ಸುಳ್ಳುಗಳನ್ನು ಹೇಳುತ್ತಾ ಮದುವೆಯಾಗುತ್ತಾನೆ. ಆದರೆ ಅವನು ಅಂತರಾಳದಲ್ಲಿ ನಿಜವಾಗಿಯೂ ಪ್ರೀತಿಸಿರುತ್ತಾನೆ. ಬಣ್ಣ ಬಯಲಾದಾಗ ಅದು ಇಬ್ಬರ ಮಧ್ಯೆ ಬಿರುಕು ಉಂಟಾಗಿ ವಿಚ್ಚೇದನ ವರೆಗೂ ಸಾಗುತ್ತದೆ ಎಂಬುದು ಚಿತ್ರದ ಒನ್ ಲೈನ್ ಕಥೆ. ಅಲ್ಲಲ್ಲಿ ಬೋರ್ ಏನಿಸಿದರೂ ನಟರಾಜರ ಚುರುಕಾದ ಸಂಭಾಷಣೆಗಳು ಪ್ರೇಕ್ಷಕರನ್ನು ಸೀಟಿನಲ್ಲಿ ಕೂರುವಂತೆ ಮಾಡುತ್ತದೆ.

ಮೊದಲರ್ಧದಲ್ಲಿ ನಾಯಕನ ಸುಳ್ಳಿನ ಡೈಲಾಗ್‌ಗಳು ನಗು ತರುತ್ತದೆ. ನಗಿಸುವುದರಲ್ಲದೆ ತಲ್ಲೀನರಾದ ನಿರ್ದೇಶಕರು ಭಾವನೆಯ ಮೌಲ್ಯಗಳಿಗೆ ಪ್ರಾಮುಖ್ಯತೆ ಕೂಡುವುದನ್ನು ಮರೆತಂತೆ ಕಾಣುತ್ತದೆ. ಇದರಿಂದ ಕಥೆಯ ಬಗ್ಗೆ ಅಷ್ಟು ತಲೆಕೆಡಿಸಿಕೊಳ್ಳದೆ ಗಣೇಶ್ ಇಮೇಜಿಗೆ ತಕ್ಕಂತೆ ಚಿತ್ರಕಥೆಯನ್ನು ಸಿದ್ದಪಡಿಸಿ ಅದನ್ನು ಹಾಗೆಯೇ ತೆರೆಯ ಮೇಲೆ ತೋರಿಸಿದ್ದರಿಂದ ಕೆಲವೊಮ್ಮೆ ಅತಿಯಾದ ಸೀನ್‌ಗಳು ಅನಾವಶ್ಯಕವೆನಿಸುತ್ತದೆ.

ಗಣೇಶ್ ಮತ್ತು ರಂಗಾಯಣರಘು ಕಾಂಬಿನೇಶನ್ ಚಿತ್ರಕ್ಕೆ ಪ್ಲಸ್ ಪಾಯಿಂಟ್. ಇವರಿಗೆ ಪೂರಕವಾಗಿ ಸಾಧುಕೋಕಿಲ, ಅವಿನಾಶ್ ಮತ್ತು ಸುಧಾ ಬೆಳವಾಡಿ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಅರ್ಜುನ್‌ಜನ್ಯಾರ ’ಆಲಾಪನೆ’ ಮತ್ತು ’ಬೆಳೆಗ್ಗೆ ಎದ್ದು’ ಹಾಡುಗಳು ಮೆಲುಕುಹಾಕುವಂತಿದೆ. ಭಾವನಾರ ಬಿಡುಗಡೆಯಾದ ಎರಡು ಚಿತ್ರಗಳು ಹಿಟ್ ಆಗಿದ್ದು ರೋಮಿಯೋ ಹಿಟ್ ಆದಲ್ಲಿ ಹಾಟ್ರಿಕ್ ತಾರೆಯಾಗುತ್ತಾರೆ. ಸೋಲಿನ ಸರಮಾಲೆ ಎದುರಿಸುತ್ತಿರುವ ಗಣೇಶ್‌ಗೆ ರೋಮಿಯೋದಿಂದ ಗೋಲ್ಡನ್ ಸ್ಟಾರ್ ಪಟ್ಟ ಉಳಿಸಿಕೊಳ್ಳಬಹುದು. ರೋಮಿಯೋ ಒಮ್ಮೆ ನೋಡಲು ಅಡ್ಡಿಯಿಲ್ಲ.
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited