Untitled Document
Sign Up | Login    
Dynamic website and Portals
  
Home >> Movie Home >> Reviews >> ನಿನ್ನಿಂದಲೇ
Movie Review
ನಿನ್ನಿಂದಲೇ
ಸಂಕ್ರಾಂತಿ ಎಳ್ಳು ಬೆಲ್ಲ..ನಿನ್ನಿಂದಲೇ ಚಿತ್ರ ನಮಗೆ ನಿಮಗೆಲ್ಲಾ..
Rating :
Hero :
ಪುನೀತ್ ರಾಜ್ ಕುಮಾರ್
Heroine :
ಎರಿಕಾ ಫರ್ನಾಂಡಿಸ್
Other Cast :
ಶ್ರೀನಿವಾಸ ಪ್ರಭು, ಅವಿನಾಶ್, ಸಾಧುಕೋಕಿಲ, ಬ್ರಹಾನಂದಂ, ತಿಲಕ್ ಶೇಖರ್, ವಿನಾಯಕ ಜೋಷಿ, ಸೋನಿಯಾ ದೀಪ್ತಿ,
Director :
ಜಯಂತ್ ಸಿ ಪರಾಂಜೆ
Music Director :
ಮಣಿಶರ್ಮ
Producer :
ಹೊಂಬಾಳೆ ಫಿಲಮ್ಸ್
Release Date :
16-01-2014
ಹಬ್ಬದ ಪ್ರಯುಕ್ತವೆಂಬಂತೆ ಬಿಡುಗಡೆಗೊಂಡಿರುವ ಪುನೀತ್ ರಾಜ್ ಕುಮಾರ್ ಅಭಿನಯವಿರುವ ಈ ಚಿತ್ರ ಸಂಕ್ರಾಂತಿಗೆ ತಕ್ಕ ಹಾಗೆ ಕುಟುಂಬದವರೊಡನೆ ಕುಳಿತು ಆರಾಮಾಗಿ ನೋಡಬಹುದಾದ ಚಿತ್ರವಾಗಿದೆ.

ನಿರ್ಮಾಪಕರಾದ ವಿಜಯ್ ಕಿರಗಂದೂರು ರವರು ಕನ್ನಡ ಚಿತ್ರರಂಗಕ್ಕೆ ಒಂದು ಅಪಾರ ವೆಚ್ಚದ ಅದ್ದೂರಿ ಚಿತ್ರವನ್ನು ಕನ್ನಡ ಕುಲಕೋಟಿಗೆ ನೀಡಿದ್ದಾರೆ. ನಿರ್ದೇಶಕರಾದ ಜಯಂತ್ ಸಿ ಪರಾಂಜೆ ಯವರು ಪುನೀತ್ ರವರನ್ನು ಮನಸಿನಲ್ಲಿಟ್ಟುಕೊಂಡು ತಮ್ಮದೇ ಛಾಪಿನ ತೆಲುಗು ಚೌಕಟ್ಟಿನಲ್ಲಿ ಈ ಚಿತ್ರವನ್ನು ನಿರ್ದೇಶಿಸಿ ವೀಕ್ಷಕರಿಗೆ ಹಬ್ಬದೂಟ ನೀಡಲು ಪ್ರಯತ್ನಿಸಿದ್ದಾರೆ.

ಕಥೆ ಸಿಂಪಲ್.. ಸಾಹಸೀ ಪ್ರವೃತ್ತಿಯ ನಾಯಕ ವಿಕ್ಕಿಗೆ ವಿರುದ್ಧ ಅಭಿರುಚಿ ಉಳ್ಳ ನಾಯಕಿಯ ಪರಿಚಯವಾಗುತ್ತದೆ. ನಾಯಕಿ ಪ್ರೇಮಪಾಶದಲ್ಲಿ ಬೀಳುತ್ತಾಳೆ. ನಾಯಕ ವಿಕ್ಕಿ ಅವಳ ಪ್ರೇಮ ನಿರಾಕರಿಸಿ ನೀನು ನನಗೆ ಕೇವಲ ಸ್ನೇಹಿತೆಯಂತೆ ಎಂದು ಹೇಳುತ್ತಾನೆ.. ಡಿಸಪಾಯಿಂಟ್ ಆಗುವ ನಾಯಕಿಗೆ ಪ್ರಮೀಳಾಗೆ ಹೊಂದುವ ರೀತಿಯಲ್ಲಿ ಒಬ್ಬ ಹುಡುಗನನ್ನು ನಾನೇ ಹುಡುಕಿ ನಿನ್ನ ಜೊತೆ ಮದುವೆ ಮಾಡಿಸುತ್ತೇನೆ ಎಂದು ಪ್ರಾಮಿಸ್ ಮಾಡುತ್ತಾನೆ.

ಹುಡುಗರನ್ನು ಹುಡುಕುವ ಭರದಲ್ಲಿ ನನ್ನ ಮೇಲೆ ಲವ್ ಆಗಬಹುದು ಎಂದು ನಾಯಕಿ ಎಸ್ ಎನ್ನುತ್ತಾಳೆ.
ವಿಕ್ಕಿಗೆ ನಾಯಕಿ ಮೇಲೆ ಲವ್ ಆಗುತ್ತದಾ..? ವಿಕ್ಕಿ ಅವಳಿಗೆ ಹುಡುಗನನ್ನು ಹುಡುಕಿ ಮದುವೆ ಮಾಡಿಸುತ್ತಾನಾ..? ನಾಯಕಿ ಅದಕ್ಕೆ ಒಪ್ಪುತ್ತಾಳ..? ಇವರಿಬ್ಬರ ಲವ್ ಸ್ಟೋರಿ ಏನಾಯ್ತು ಎಂಬುದೆಲ್ಲಾ ತೆರೆ ಮೇಲೆ ನೋಡಿ ಆನಂದಿಸಿ..

ಈಗಿನ ಯುವಜನಾಂಗಕ್ಕೆ ತಕ್ಕಂತೆ ಕಥೆ ಹೆಣೆಯಲಾಗಿದೆ. ಸಂಬಂಧಗಳ ಪ್ರಾಮುಖ್ಯತೆ.. ಗೆಳೆತನ..ಪ್ರೀತಿ ಇವುಗಳ ಬಗ್ಗೆ ಯಂಗ್ ಜನರೇಶನ್ ಗಿರುವ ಹಲವು ಡೌಟ್ ಗಳಿಗೆ ಉತ್ತರ ನೀಡಲು ಪ್ರಯತ್ನಿಸಿದ್ದಾರೆ. ಚಿತ್ರ ಸ್ವಲ್ಪ ನಿಧಾನವೆನಿಸಿದರೂ ಹಲವೆಡೆ ಮನಮುಟ್ಟುತ್ತದೆ.

ಕಥೆ ಅದ್ಭುತವೆನಿಸದಿದ್ದರೂ ಚಿತ್ರಕಥೆ ಅಚ್ಚುಕಟ್ಟಾಗಿದೆ. ಮಣಿಶರ್ಮ ರವರ ಸಂಗೀತದಲ್ಲಿ ಹಾಡುಗಳು ಇಂಪಾಗಿವೆ.. ಹಿನ್ನಲೆ ಸಂಗೀತವೂ ಚಿತ್ರಕ್ಕೆ ಪೂರಕವಾಗಿದೆ. ಟೈಟಲ್ ಸಾಂಗ್ ಸ್ಲೋ ಪಾಯ್ಸನ್ ರೀತಿಯಲ್ಲಿ ನಮ್ಮ ಮನ ಆವರಿಸಿದರೆ ಯಾವುದೇ ಅಚ್ಚರಿಯಿಲ್ಲ. ಸಂಗೀತ ನಿರ್ದೇಶಕ ಮಣಿಶರ್ಮ ಮತ್ತು ಚಿತ್ರ ನಿರ್ದೇಶಕ ಜಯಂತ್ ರವರ ಕಾಂಬಿನೇಶನ್ ಈ ಚಿತ್ರದಲ್ಲೂ ಯಶಸ್ವಿಯಾಗಿ ಮುಂದುವರೆದಿದೆ.

ನಿರ್ದೇಶನದ ವಿಷಯಕ್ಕೆ ಬಂದರೆ ಜಯಂತ್ ರವರು ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.. ಈ ನಿರ್ದೇಶಕರ ಶಕ್ತಿಯನ್ನು ಈ ಚಿತ್ರದ ಮೇಕಿಂಗ್ ನಲ್ಲೇ ತಿಳಿಯಬಹುದು..ನಾಯಕ ಮತ್ತು ನಾಯಕಿಯ ಎಮೋಶನಲ್ ದೃಶ್ಯಗಳು ನಮ್ಮ ಮನಸ್ಸಿಗೆ ತಟ್ಟಿದರೆ ಅದು ಜಯಂತ್ ರವರ ಕೈ ಚಳಕವೆನ್ನಬಹುದು. ಈ ಹಿಂದೆ ನಮ್ಮ ಯಾವುದೇ ಕನ್ನಡ ಚಿತ್ರಗಳಲ್ಲಿ ಈ ರೀತಿ ಅಮೇರಿಕಾವನ್ನು ತೋರಿಸಿಲ್ಲವೇನೋ..ಹಾಗಿದೆ ಕ್ಯಾಮರಾ ಕೆಲಸ.. ಪಿ. ಜಿ. ವಿಂದಾರವರು ತಮ್ಮ ತೆಲುಗು ಸ್ಟೈಲ್ ನಲ್ಲೇ ಈ ಚಿತ್ರವನ್ನು ತಮ್ಮ ಕ್ಯಾಮರಾ ಕಣ್ಣಿನಲ್ಲಿ ಸೆರೆಹಿಡಿದಿದ್ದಾರೆ. ಆಂಧ್ರ ಸ್ಟೇಟ್ ಅವಾರ್ಡ್ ವಿನ್ನರ್ ಆದ ಸಂಕಲನಕಾರ ಮಾರ್ತಾಂಡ್ ವೆಂಕಟೇಶ್ ರವರು ನೀಟಾಗಿ ತಮ್ಮ ಎಡಿಟಿಂಗ್ ಕಾರ್ಯವನ್ನು ನಿರ್ವಹಿಸಿದ್ದಾರೆ.

ಇಡೀ ಚಿತ್ರ ಹಲವೆಡೆ ತೆಲುಗುಮಯವೆಂಬಂತೆ ಕಂಡರೂ ಪುನೀತ್ ಇರುವಿಕೆಯಿಂದಾಗಿ ಕನ್ನಡಿಗರ ಚಿತ್ರವಾಗಿದೆ. ಅಭಿನಯದ ವಿಷಯಕ್ಕೆ ಬಂದರೆ ಇಡೀ ಚಿತ್ರದ ಪೂರ್ತಿ ಪುನೀತ್ ಕಾಣಿಸಿಕೊಳ್ಳುತ್ತಾರೆ. ಇಡೀ ಚಿತ್ರದ ಭಾರವನ್ನಿ ತಮ್ಮ ಹೆಗಲ ಮೇಲೆ ಹೊತ್ತುಕೊಂಡಿದ್ದಾರೆ. ಫೈಟಿಂಗ್, ಡ್ಯಾನ್ಸ್, ಕಾಮೆಡಿ ಹಾಗೂ ಎಮೋಷನಲ್ ಎಲ್ಲಾ ರೀತಿಯಲ್ಲೂ ಪುನೀತ್ ನಮ್ಮನ್ನು ಆವರಿಸಿಕೊಳ್ಳುತ್ತಾರೆ. ಹೀರೋಯಿನ್ ಎರಿಕಾ ಅಭಿನಯದಲ್ಲಿ ಇನ್ನೂ ಪಳಗಬೇಕು ಆದರೆ ತೆರೆಯಲ್ಲಿ ಸುಂದರವಾಗಿ ಕಾಣಿಸುತ್ತಾರೆ.ಚಿತ್ರದಲ್ಲಿ ಯಾವುದೇ ಪೋಷಕ ವರ್ಗಕ್ಕೆ ಅಂಥ ಸ್ಕೋಪ್ ಇಲ್ಲ.. ವಿಲನ್ ತಿಲಕ್ ತಮ್ಮ ಮ್ಯಾನರಿಸಮ್ ತೋರಿಸಲು ಬಳಸಿಕೊಂಡಿದ್ದಾರೆ.. ದ್ವಿತೀಯ ನಾಯಕ ಜುಗಾರಿ ಅವಿನಾಶ್ ಇನ್ನೂ ಅಭಿನಯ ಕಲಿಯಬೇಕು.. ಪುನೀತ್ ರವರ ಮುಂದೆ ಸಪ್ಪೆಯಾಗಿ ಕಾಣುತ್ತಾರೆ. ನಾಯಕನ ಗೆಳೆಯರಾದ ಅಲೋಕ್, ವಿನಾಯಕ ಜೋಶಿ ಮತ್ತು ತೆಲುಗಿನ ಸೋನಿಯಾ ದೀಪ್ತಿ ಇವರೆಲ್ಲರೂ ಚಿತ್ರದಲ್ಲಿದ್ದಾರೆ..ಆದರೆ ಇವರ ಪಾತ್ರಗಳಿಗೆ ಪ್ರಾಮುಖ್ಯತೆ ಇಲ್ಲ..ಬ್ರಹ್ಮಾನಂದಮ್ ಒಂದೇ ದೃಶ್ಯದಲ್ಲಿ ಬಂದರೂ ಕಚಗುಳಿ ಇಟ್ಟು ಹೋಗುತ್ತಾರೆ.. ಆದರೆ ಇವರಿಗಿಂತ ಸಾಧು ಕೋಕಿಲ ತಮ್ಮ ಮ್ಯಾನರಿಸಮ್ ಮತ್ತು ಸಂಭಾಷಣೆಗಳಿಂದ ಹೆಚ್ಚು ಸ್ಕೋರ್ ಗಳಿಸುತ್ತಾರೆ.

ಪುನೀತ್ ರವರು ರಿಸ್ಕಿ ಶಾಟ್ಸ್ ಗಳಿಗೆ ಕಷ್ಟ ಪಟ್ಟಿರುವುದು ತೆರೆಯ ಮೇಲೆ ಕಾಣುತ್ತದೆ.. ಪುನೀತ್ ಯಾಕೆ ನಂಬರ್ ಒನ್ ನಾಯಕ ನಟ ಎಂಬುದಕ್ಕೆ ಈ ಚಿತ್ರ ನಿದರ್ಶನ..

ಒಟ್ಟಾರೆಯಾಗಿ ಈ ಚಿತ್ರ ಒಮ್ಮೆ ನೋಡಲಡ್ಡಿಯಿಲ್ಲ.. ಹೋಗಿ ನಿಮ್ಮ ಕುಟುಂಬದವರೊಡನೆ ಒಮ್ಮೆ ನೋಡಿ ಬನ್ನಿ.

ವರದಿಃ ನಟರಾಜ್ ಭಟ್
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited