Untitled Document
Sign Up | Login    
Dynamic website and Portals
  
Home >> Movie Home >> Reviews >> ಶತ್ರು
Movie Review
ಶತ್ರು
ಬರಿ ಶತ್ರುವಲ್ಲ ಹಿತಶತ್ರು
Rating :
Hero :
ಪ್ರೇಮ್
Heroine :
ಡಿಂಪಲ್ ಚೋಪ್ರ
Other Cast :
ರಂಗಾಯಣ ರಘು, ಶರತ್ ಲೋಹಿತಾಶ್ವ, ಬುಲೇಟ್ ಪ್ರಕಾಶ್, ತಬಲ ನಾಣಿ ಮುಂತಾದವರು.
Director :
ಜೆಕೆ
Music Director :
ಸಾಧುಕೋಕಿಲ
Producer :
ಎಂ.ಡಿ ಪ್ರಕಾಶ್
Release Date :
30-08-2013
ಲವ್ಲಿ ಸ್ಟಾರ್ ಒಬ್ಬ ಪೋಲಿಸ್ ಅಧಿಕಾರಿಯಾಗಿ ಕಾಣಿಸಿಕೊಂಡಿರುವುದು ಇಲ್ಲಿ ವಿಶೇಷ. ಯಾವಾಗಲು ಪ್ರೇಮಭರಿತ ಕತೆಗಳಲ್ಲಿ ಕಾಣಿಸಿಕೊಂಡು ಲವ್ಲಿಸ್ಟಾರ್ ಎಂದು ಹೆಸರು ತೆಗೆದುಕೊಂಡಿದ್ದ ಇವರು ಶತ್ರುವಲ್ಲಿ ಸಿಕ್ಸ್ ಪ್ಯಾಕ್ ಮಾಡಿಕೊಂಡು ಸಿಗರೇಟ್ ಸೇದಿಕೊಂಡು ಶತ್ರುವಿಗೆ ಶತ್ರುವಾಗಿ ಇಂಟಲಿಜೆಂಟ್ ಕಾಪ್ ಆಗಿದ್ದಾರೆ. ಹೆಚ್ಚು ಬಲಯುತವಾಗಿ ಬೆಳೆದಿರುವ ರೌಡಿಸಂ ಎನ್ನುವ ಮರವನ್ನು ಬಲದಿಂದ ಆಗದ್ದನ್ನು ಯುಕ್ತಿಯಿಂದ ಬುಡಸಮೇತ ಕಿತ್ತುಹಾಕುವುದು ಪಾತ್ರದ ಉದ್ದೇಶ. ಜೆಕೆ ಇಲ್ಲಿ ಕತೆ, ಚಿತ್ರಕತೆ, ಸಂಭಾಷಣೆ, ನಿರ್ದೇಶನವನ್ನು ಮಾಡಿದ್ದು ಕೆಲವು ಡೈಲಾಗ್‌ಗಳು ಸೀಟಿ ಗಿಟ್ಟಿಸಿಕೊಳ್ಳುತ್ತದೆ.

ಕತೆಯ ಮಟ್ಟಿಗೆ ಇದು ಸಾಮಾನ್ಯವಾದದ್ದೆ. ಬೆಂಗಳೂರಿಲ್ಲಿ ಪುಂಡರಿಗೆ, ರೌಡಿಗಳಿಗೆ ಸಿಂಹ ಸ್ವಪ್ನವಾದ ಎನ್ಕೌಂಟರ್ ಸ್ಪೆಷಲಿಸ್ಟ್ ಸೂರ್ಯ(ಪ್ರೇಮ್) ಮಾಧ್ಯದ ಎದುರ ಒಬ್ಬ ರೌಡಿಯನ್ನು ಶೂಟ್ ಮಾಡಿ, ಡಿಮೋಷನ್ ಪಡೆದು, ಕೇಶವಪುರ ಎಂಬ ಹಳ್ಳಿಗೆ ವರ್ಗವಾಗುತ್ತಾನೆ. ಹಳ್ಳಿಯಲ್ಲಿದ್ದುಕೊಂಡೇ ಇಡೀ ರೌಡಿ ಸಾಮ್ರಾಜ್ಯ ಮತ್ತು ಊರನ್ನು ಹಿಡಿತದಲ್ಲಿಟ್ಟುಕೊಡಿರುವ ಆದಿಶೇಷ(ಶರತ್ ಲೋಹಿತಾಶ್ವ) ಬೇಟಿಯಾಗುತ್ತದೆ. ಊರಿಗೆ ಬರುವ ಎಲ್ಲಾ ಪೋಲಿಸ್ ಅಧಿಕಾರಿಗಳನ್ನು ರಸ್ತೆಯ ಮಧ್ಯದಲ್ಲೇ ಮುಗಿಸುವ ಅವನು ಸೂರ್ಯನನ್ನು ಕೊಲ್ಲುವಲ್ಲಿ ವಿಫಲನಾಗುತ್ತಾನೆ. ಅಲ್ಲಿಂದ ವೈರತ್ವ ಪ್ರಾರಂಭ ಎಂದುಕೊಂಡಿರಾ..? ಇಲ್ಲಾ.. ಸೂರ್ಯ ಆದಿಶೇಷನ ಮನ ಒಲಿಸಿಕೊಂಡು, ಅವನ ಇಡೀ ಸಾಮ್ರಾಜ್ಯವನ್ನು ಬುಡಮೇಲು ಮಾಡುತ್ತಾನೆ. ಆದಿಶೇಷನ ತಂಗಿಯು ಸೂರ್ಯನ ನಡವಳಿಗೆಯಿಂದ ಮೋಹಿತಳಾಗುತ್ತಾಳೆ. ಆದರೆ ಸೂರ್ಯ ಅದನ್ನು ಸೀರಿಯಸ್ಸಾಗಿ ತೆಗೆದುಕೊಳ್ಳದೆ ತನ್ನ ಕೆಲಸದಲ್ಲಿ ಮಗ್ನನಾಗಿರುತ್ತಾನೆ. ಮತ್ತೇ ಇಡೀ ಸಿನಿಮಾ ಇಷ್ಟೇನಾ..? ಎಂದುಕೊಂಡಿರಾ..? ಕಂಡಿತಾ ಇಲ್ಲ.. ಸಿನಿಮಾ ಮಂದಿರಕ್ಕೆ ಹೋಗಿ ನೋಡಿ.

ಇದೊಂದು ಪಕ್ಕಾ ಕಮರ್ಶಿಯಲ್ ಸಿನಿಮಾ. ಲಾಂಗು ಮಚ್ಚುಗಳ ಗದ್ದಲಾ ಕಡಿಮೆ ಇದ್ದರೂ, ಗನ್‌ಗಳು ಸದ್ದು ಮಾಡುತ್ತವೆ. ಅಂತಾ ವಿಶೇಷ ಏನೂ ಇಲ್ಲ. ಪಾತ್ರ ಪೋಷಣೆ ಸರಿ ಇಲ್ಲ. ವಿಲನ್ ಆಂಧ್ರದಿಂದ ಬಂದು ಧಾರವಾಡ ಭಾಷೆಯನ್ನು ಅಷ್ಟೋಂದು ಅಚ್ಚುಕಟ್ಟಾಗಿ ಮಾತಾಡುತ್ತಾನೆ. ಅದಾದರೂ ಓಕೆ. ಇಡೀ ಸಿನಿಮಾ ಉತ್ತರ ಕರ್ನಾಟಕದಲ್ಲಿ ನಡೆಯುವ ಪ್ಲೇವರ್ ಇಟ್ಟುಕೊಂಡು ಕೆಲವರನ್ನು ಬಿಟ್ಟರೆ ಮಿಕ್ಕವರೆಲ್ಲಾ ಬೆಂಗಳೂರು ಕನ್ನಡ ಮಾತಾಡುತ್ತಾರೆ. ಯಾವುದೇ ಪಾತ್ರಗಳಿಗೆ ಸರಿಯಾದ ಬುನಾದಿ ಇಲ್ಲ. ಕ್ಯಾಮರಾ ಚೆನ್ನಾಗಿದೆ. ರಂಗಾಯಣ ರಘು ತಮ್ಮ ಪಾತ್ರಕ್ಕೆ ಮೋಸಮಾಡಿಲ್ಲ. ನಾಯಕಿ ಡಿಂಪಲ್ ಚೋಪ್ರಾ ಪರವಾಗಿಲ್ಲ. ಶರತ್ ಲೋಹಿತಾಶ್ವ ಎಲ್ಲರನ್ನು ತಿಂದುಕೊಳ್ಳುವಂತೆ ಅಭಿನಯಿಸಿದ್ದಾರೆ. ಇಡೀ ಸಿನಿಮಾದಲ್ಲಿ ಶರತ್ ಇಸ್ ದ ಹೀರೋ. ಒಂದಷ್ಟು ಅಬ್ಬರದ ಡೈಲಾಗ್‌ಗಳು ಬಿಟ್ಟರೆ, ಸೀನ್‌ಗಳ ಮಟ್ಟಿಗೆ ಸಪ್ಪೆ ಎನಿಸುತ್ತದೆ. ಹಾಡುಗಳು ಅಂತಾ ಮಜವಾಗಿಲ್ಲ. ಸುಮ್ಮನೆ ಒಂದಷ್ಟು ಪೈಟ್, ಸಿಕ್ಸ್ ಪ್ಯಾಕ್ ಪ್ರೇಮ್ ನೋಡಬೇಕೆನ್ನುವರು ನೋಡಬಹುದು.

ವರದಿ: ನಟರಾಜ್ ಎಸ್. ಭಟ್
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited