Untitled Document
Sign Up | Login    
Dynamic website and Portals
  
Home >> Movie Home >> Reviews >> ಬರ್ಫಿ
Movie Review
ಬರ್ಫಿ
ತುಂಬಾ ಮೆತ್ತನೆಯ ಬರ್ಫಿ...
Rating :
Hero :
ದಿಗಂತ್
Heroine :
ಭಾಮ
Other Cast :
ಸಂಯುಕ್ತ ಬೆಳವಾಡಿ, ಸುಧಾ ಬೆಳವಾಡಿ, ಜೈ ಜಗದೀಶ್, ಕುರಿ ಪ್ರತಾಪ್, ಇಂದ್ರಜಿತ್ ಲಂಕೇಶ್. ದಿಲೀಪ್ ರಾಜ್.
Director :
ಶೇಖರ್
Music Director :
ಅರ್ಜುನ್ ಜನ್ಯ
Producer :
ಕೆ.ಎಂ. ಶಂಕರ್
Release Date :
30-08-2013
ದೂದ್ ಪೇಡ ದಿಗಂತ್ ಅವರನ್ನು ಕನ್ನಡದ ಜನತೆಗೆ ಬರ್ಫಿಯಾಗಿ ತೋರಿಸುವಲ್ಲಿ ಶೇಕರ್ ಅವರ ಪ್ರಯತ್ನ ಸಾಕಾರಗೊಳ್ಳುವುದು ಕಷ್ಟಸಾಧ್ಯ. ತುಂಬಾ ಪುಟ್ಟ ಎಳೆಯನ್ನು ಇಟ್ಟುಕೊಂಡು ಅದಕ್ಕೆ ತಕ್ಕ ಜೀವ ತುಂಬುವ ಬದಲು ಅದನ್ನೆ ಎಳೆದು ಹೇಳಲಾಗಿದೆ. ಇಂತಹ ಕತೆ ಕನ್ನಡದಲ್ಲಿ ಬಾರದಿದ್ದರೂ, ಇದೇ ಪ್ಲೇವರ‍್ನ ಚಿತ್ರ ಬಂದುಹೋಗಿದೆ. ಹಾಗೆಂದು ಸಿನಿಮಾ ಮಾಡಬಾರದು ಎಂದಲ್ಲ. ಹೇಳಿದ ವಿಷಯವನ್ನೆ ಸುಮ್ಮನೆ ಹೇಳುತ್ತಾ ಹೋಗುತ್ತಾರೆ. ಚಿತ್ರ ಮಾಡಿದ ಉದ್ದೇಶ ಕೊನೆಯಸಾಲುಗಳಲ್ಲಿ ಟೆರರಿಸಂಗೆ ನಂಟುಹಾಕುತ್ತದೆ. ಅಂತಹ ಉದ್ದೇಶವನ್ನೆ ಇಟ್ಟುಕೊಂಡಿದ್ದರೆ, ಇನ್ನೂ ಕ್ಯೂರಿಯಸ್ಸಾಗಿ ಸಿನಿಮಾವನ್ನು ತೆಗೆದುಕೊಂಡು ಹೋಗಬಹುದಾಗಿತ್ತು.

ಕತೆಯ ಓಪನಿಂಗ್ ಚೆನ್ನಾಗಿದೆ. ಮಂಗಳೂರಿನಲ್ಲಿ ಒಂದು ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡಿಕೊಂಡು ಹೋಗುತ್ತಿರುವ ಮದುವೆಯಾದ ಹುಡುಗ(ದಿಗಂತ್). ತುಂಬಾ ಪ್ರೀತಿಸುವ ತಂದೆ ತಾಯಿ. ನಾಯಕನಿಗೆ ಇಬ್ಬರು ಸ್ನೇಹಿತರು. ಎಲ್ಲರೂ ಇಂಟರ್‌ನೆಟ್‌ನಲ್ಲಿ ಹೆಣ್ಣಗಳನ್ನು ಹುಡುಕಿಕೊಂಡು ಸೈಕಲ್ ಹೊಡೆಯುತ್ತಿರುತ್ತಾರೆ. ಅದಕ್ಕೆ ನಾಯಕನನ್ನು ಎಳೆಯುತ್ತಾರೆ. ಅವನೂ ಒಂದು ಕಲ್ಲು ಹೊಡೆಯುತ್ತಾನೆ. ಅದೇನೋ ಯಾರಿಗೂಸಿಗದ ಸುಂದರ ಹುಡುಗಿ(ಭಾಮ) ಇವನಿಗೆ ಸಿಗುತ್ತಾಳೆ. ಅವಳದ್ದು ಪಂಜಾಬ್. ಬರೀ ಫೋನಿನಲ್ಲೇ ನಡೆಯುವ ಸಂಭಾಷಣೆಯೊಂದಿಗೆ ಪ್ರೇಮವಾಗುತ್ತದೆ. ವಿಡಿಯೋ ಚಾಟಿಂಗ್‌ನಲ್ಲಿ ಫ್ಯಾಮಿಲಿ ಮಾತುಕತೆ ನಡೆದೇ ಹೋಗುತ್ತದೆ. ಅವಳನ್ನು ಭೇಟಿಮಾಡಲು ನಾಯಕ ಪಂಜಾಬ್‌ಗೆ ಹೋಗುತ್ತಾನೆ. ಅಲ್ಲಿ ಅವಳೊಂದಿಗೆ ಕಾಲ ಕಳೆಯುತ್ತಾನಾ..? ಕಂಪನಿಯ ಮೀಟಿಂಗ್ ಎಂದು ವಿದೇಶಕ್ಕೆ ಹೋಗುತ್ತಾನಾ..? ಅವಳಿಗೆ ಏನಾಗುತ್ತದೆ..? ಎಲ್ಲವನ್ನು ಚಿತ್ರ ಮಂದಿರಲ್ಲೇ ನೋಡಿ. ಆದರೆ ಯಾವುದೇ ನಿರೀಕ್ಷೆ ಇಟ್ಟುಕೊಳ್ಳುವುದು ಬೇಡ. ಕೊಟ್ಟ ಹಣದಲ್ಲಿ 20 ರೂ ವಕೌಟ್ ಆಗುತ್ತದೆ.

ದಿಗಂತ್ ಅಭಿನಯ ತಕ್ಕಮಟ್ಟಿಗೆ ಪರವಾಗಿಲ್ಲ. ಭಾಮ ತಕ್ಕಮಟ್ಟಿಗೆ. ಸಂಯುಕ್ತ ಬೆಳವಾಡಿ ಒಂದೆರಡು ಸೀನ್ಗಳಲ್ಲಿ ಬಂದು ಹೋಗುತ್ತಾರೆ. ಕುರಿ ಪ್ರತಾಪ್, ದಿಲೀಪ್‌ರಾಜ್ ಗುಡ್. ಕ್ಯಾಮರಾ ಕೈ ಚಳಕ ಪರವಾಗಿಲ್ಲ, ಸುಮಾರಾಗಿದೆ. ಅರ್ಜುನ್ ಸಂಗೀತದಲ್ಲಿ 2 ಹಾಡನ್ನು ಕೇಳಬಹುದು. ಮಿಕ್ಕಂತೆ ಬೇರೆ ಎಲ್ಲಾ ವಿಭಾಗಗಲ್ಲೂ ತಕ್ಕಮಟ್ಟಿಗೆ ದುಡಿಸಿಕೊಂಡಿದ್ದಾರೆ.

ವರದಿ: ನಟರಾಜ್ ಎಸ್. ಭಟ್
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited